ಭದ್ರಾವತಿ,ಮೇ. 25: ತಾಲ್ಲೂಕಿನ ನಾಗಸಮುದ್ರದಲ್ಲಿ ಗೋಲಿಬಾರ್ ನಲ್ಲಿ ಮಡಿದ ಹುತಾತ್ಮರ ಸ್ಮಾರಕದ ಬಳಿ 44ನೇ ಹುತಾತ್ಮರ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ರಾಜ್ಯಾಧ್ಯಕ್ಷ ಹೆಚ್. ಆರ್ ಬಸವರಾಜಪ್ಪನವರು ಭಾಗವಹಿಸಿ ಧ್ವಜಾರೋಹಣ ನಡೆಸಿದರು.
ಅವರು ಮಾತನಾಡುತ್ತಾ, 1982ರಲ್ಲಿ ನಡೆದ ನಾಗಸಮುದ್ರದ ಗೋಲಿಬಾರ್ ನಲ್ಲಿ 3ಜನ ರೈತರು ಹುತಾತ್ಮರಾಗಿ ಇಂದು ಅವರ 44ನೇ ಹುತಾತ್ಮ ದಿನಾಚರಣೆಯನ್ನು ಆಚರಿಸುತ್ತಿದ್ದೇವೆ. ರಾಜ್ಯಾದ್ಯಂತ 156 ಜನ ರೈತರು ಹುತಾತ್ಮರಾಗಿದ್ದಾರೆ. ಅವರ ಆಲೋಚನೆಗಳಿಗೆ, ರೈತರ ಸಮಸ್ಯೆಗಳಿಗೆ ಸ್ಪಂದಿಸಿ ಚಳುವಳಿ ಮೂಲಕ ಪರಿಹರಿಸುವ ಪ್ರತಿಜ್ಞೆ ಮಾಡೋಣ. ಈ ಭಾಗದಲ್ಲಿ ಇತ್ತಿಚೆಗೆ ಸುರಿದ ಆಲಿಕಲ್ಲು ಮಳೆ, ಬಿರುಗಾಳಿಯಿಂದ ಲಕ್ಷಾಂತರ ಅಡಿಕೆ ಮರಗಳು, ಸಾವಿರಾರು ತೆಂಗು, ಬಾಳೆ, ಮಾವು, ಮನೆಗಳು ಸಂಪೂರ್ಣ ನಾಶವಾಗಿವೆ. ಈ ಘಟನೆಯನ್ನು ಸರ್ಕಾರ ವಿಶೇಷ ಪ್ರಕರಣವೆಂದು ಪರಿಗಣಿಸಿ ಈಗಿನ NDRF & SDRF ಪರಿಹಾರ ನಿಧಿಯನ್ನು ಕನಿಷ್ಟ 20ಪಟ್ಟು ಹೆಚ್ಚಿಸಿ 1 ಎಕರೆಗೆ 1ಲಕ್ಷ ರೂ. ಹಾಗೂ ಮನೆ ಕಳೆದುಕೊಂಡವರಿಗೆ 5ಲಕ್ಷ ರೂ. ನೀಡಬೇಕು ಹಾಗೂ ಹೊಳೆಹೊನ್ನೂರು, ಕೂಡ್ಲಿಗೆರೆ, ಹೊಳಲೂರು ಹೋಬಳಿಯ ಸುಮಾರು ಹಳ್ಳಿಗಳಲ್ಲಿ ನಂತರ ಬಿದ್ದ ಮಳೆ, ಬಿರುಗಾಳಿಗೆ ರೈತರಿಗೆ ಸಾಕಷ್ಟು ನಷ್ಟವಾಗಿದೆ. ಸರ್ಕಾರ ಇದರ ಸಮೀಕ್ಷೆಯನ್ನು ತಕ್ಷಣವೇ ಮಾಡಿ ಪರಿಹಾರ ಘೋಷಿಸಬೇಕೆಂದು ಒತ್ತಾಯಿಸಿದರು.
ಈ ಸಂಧರ್ಭದಲ್ಲಿ
ರಾಜ್ಯ ಉಪಾಧ್ಯಕ್ಷ ಟಿ.ಎಂ ಚಂದ್ರಪ್ಪ, ಹಿಟ್ಟೂರು ರಾಜು,
ಮಹಿಳಾ ಸಂಚಾಲಕರಾದ ಭಾಗ್ಯ ರಾಘವೇಂದ್ರ,
ಜಿಲ್ಲಾಧ್ಯಕ್ಷರಾದ ಕೆ.ರಾಘವೇಂದ್ರ,
ಜಿಲ್ಲಾ ಉಪಾಧ್ಯಕ್ಷ ಪಿ.ಶೇಖರಪ್ಪ, ಡಿ.ಎಸ್ ಜಯಣ್ಣ
ಜಿಲ್ಲಾ ಹಸಿರುಸೇನೆ ಸಂಚಾಲಕರಾದ ಎಂ.ಡಿಶ ನಾಗರಾಜ್,
ಶಿವಮೊಗ್ಗ ತಾ|| ಅಧ್ಯಕ್ಷ ಸಿ.ಚಂದ್ರಪ್ಪ,
ಭದ್ರಾವತಿ ತಾ|| ಅಧ್ಯಕ್ಷ ಜಿ.ಎನ್ ಪಂಚಾಕ್ಷರಿ,
ತಾ|| ಪ್ರಧಾನ ಕಾರ್ಯದರ್ಶಿ ಸಿ.ಬಿ ಹನುಮಂತಪ್ಪ,
ತಾ|| ಪದಾಧಿಕಾರಿಗಳಾದ
ಮಂಜಪ್ಪ, ಘೋರ್ಪಡೆ ನಾಗರಾಜ್, ಭೋಜರಾಜ, ಜಗನಾಥ್, ರವಿ, ಮಲ್ಲೇಶಪ್ಪ, ಮಂಜು ಮೊದಲಾದವರು ಹಾಜರಿದ್ದರು.