ಶಿವಮೊಗ್ಗ,ಮೇ 20 : ಶ್ರೀ ಆದಿಚುಂಚನಗಿರಿ ಶಾಖಾ ಮಠದ ಪೂಜ್ಯ ಶ್ರೀ ನಾದಮಯಾ ನಂದನಾಥ ಸ್ವಾಮೀಜಿ ಯವರಿಂದ ನೂತನವಾಗಿ ಆರಂಭಗೊಂಡಿರುವ ಕ್ಯಾಲಿಬರ್ ಫಿಟ್ನೆಸ್ ಸೆಂಟರ್ ಪೂಜ್ಯರು ಚಾಲನೆ ನೀಡಿ, ಶುಭಾಶಯ ಕೋರಿದರು.
ಶಿವಮೊಗ್ಗದ ಸವಳಂಗ ರಸ್ತೆಯ ನಿಸರ್ಗ ಹೋಟೆಲ್ ಎದುರುಗಡೆ ನೂತನವಾಗಿ ಆರಂಭಗೊಂಡಿರುವ ಕ್ಯಾಲಿಬರ್ ಫಿಟ್ನೆಸ್ ಶಿವಮೊಗ್ಗದ ಜನತೆಗೆ ವಿಶಿಷ್ಟ, ವಿನೂತನವಾಗಿ ಆರಂಭಗೊಂಡಿದ್ದು, ರಿಯಾಯಿತಿ ದರದಲ್ಲಿ ನುರಿತ ಜಿಮ್ ತರಬೇತುದಾರರಾದ ಗೌತಮ್, ಹರೀಶ್ ರವರಿಂದ ತರಬೇತಿ ನೀಡಲಾಗುವುದು ಎಂದು ಕಾರ್ತಿಕ್ ಸ್ವಾಮಿ ತಿಳಿಸಿದರು.
ಅಂದು ನಗರದ ಶಾಸಕರಾದ ಎಸ್. ಎನ್. ಚನ್ನಬಸಪ್ಪನವರು, ವಿಧಾನಪರಿಷತ್ ಸದಸ್ಯರಾದ ಧನಂಜಯ ಸರ್ಜಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಎಚ್.ಎಸ್. ಸುಂದರೇಶ್ ಬೇಟಿ ನೀಡಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಕೆ.ಜಿ. ಮಠಪತಿ, ಶೀತಲ್, ಕೇವಲ್, ಕುಂತಲ್ ಇನ್ನೂ ಮುಂತಾದರು ಉಪಸ್ಥಿತರಿದ್ದರು.