?
ಶಿವಮೊಗ್ಗ, ಮೇ.05:
ಪೊಲೀಸರು ಹೆಲ್ಮೆಟ್, ಅಡ್ಡಾದಿಡ್ಡಿ ಓಡಾಟದ ವಿಚಾರಣೆ ನಡೆಸಿದಾಗ ಅದನ್ನ ದಿಕ್ಕರಿಸಿ ಅವರನ್ನೇ ಬೆದರಿಸುವಂತೆ ವರ್ತಿಸಿದರೆ ಪಾಪ ಅವರ ಕಥೆ ಏನು? ದುರಂತ ಇದಕೆ ಗಾಂಜಾ ಕಥೆ ಕಾರಣವಿತ್ತಾ? ಗಾಂಧಿಬಜಾರಿನ ಕಥೆಯೊಂದು ಹೀಗಿದೆ… ಹೀಗೊಂದು ವಿಚಾರಣೆ ನಡೆಯಿತಾ?

ಶಿವಮೊಗ್ಗ ಗಾಂಧಿಬಜಾರಿನ ವಿಷಯ ಇದು. ಹೆಲ್ಮೇಟ್ ಬಗ್ಗೆ ಕಾಳಜಿ ಮೂಡಿಸೋದು, ದಂಡ ಹಾಕೋದು ಅವರ ಕೆಲಸ. ಹಾಗೇ ಮಾಡಿದ್ದಾರೆ. ಆದರೆ, ಇಡೀ ಘಟನೆ ನೋಡಿದಾಗ ಗಾಂಜಾ ಹಾವಳಿ ಗಾಂಧಿ ಬಜಾರಲ್ಲೂ ಬೆಳಿಗ್ಗೆಯಿಂದ ಇರುತ್ತಾ? ಅಂತಹ ಪರೀಕ್ಷೆ ಆಯ್ತಾ? ಆರೆಸ್ಟ್ ಆದರಾ? ಈ ಪ್ರಶ್ನೆ ತುಂಗಾತರಂಗದ್ದು…

ಘಟನೆ ಸಂಪೂರ್ಣ ವಿವರ ಪೋಲೀಸ್ ಇಲಾಖೆಯದು, ಅವರ ಮಾಹಿತಿ ಓದಿ
ಶಿವಮೊಗ್ಗ ಪೂರ್ವ ಸಂಚಾರ ಪೊಲೀಸ್ ಠಾಣೆಯ ಮಂಜುನಾಥ್ ಎಎಸ್ಐ ಮತ್ತು ಸಂತೋಶ್ ಸಿಪಿಸಿ ರವರುಗಳು ಶಿವಮೊಗ್ಗ ನಗರದ ಗಾಂಧಿ ಬಜಾರ್ ನಲ್ಲಿ ಸಂಚಾರಿ ಕರ್ತವ್ಯದಲ್ಲಿದ್ದಾಗ, ದ್ವಿ ಚಕ್ರ ವಾಹನ ಸವಾರನೊಬ್ಬನು ಶಿರಸ್ತ್ರಾಣ ಧರಿಸದೆ, ಸಂಚಾರ ನಿಯಮ ಉಲ್ಲಂಘಿಸಿ, ದ್ವಿಚಕ್ರ ವಾಹನವನ್ನು ಚಲಾಯಿಸಿಕೊಂಡು ಬರುತ್ತಿದ್ದನ್ನು ಗಮನಿಸಿ, ಅವನಿಗೆ ನಿಲ್ಲಿಸಲು ಸೂಚಿಸಿದ್ದು, ಬೈಕ್ ಸವಾರ ಸಯ್ಯದ್ ಮುಜಾಮಿಲ್ ನು ರಸ್ತೆಯ ಮಧ್ಯ ಬೈಕ್ ನಿಲ್ಲಿಸಿಕೊಂಡು ವಾಗ್ವಾದಕ್ಕೆಇಳಿದಿದ್ದು, ಅವನಿಗೆ ಶಿರಸ್ತ್ರಾಣ ಧರಿಸಬೇಕಾದ ಮಹತ್ವದ ಬಗ್ಗೆ ಹೇಳುತ್ತಿದ್ದಾಗ, ಅಲ್ಲಿಗೆ ಬಂದ ಜಬಿವುಲ್ಲಾ ಎಂಬುವವನು ನಾವು ಹೆಲ್ಮೆಟ್ ಹಾಕುವುದಿಲ್ಲ ಏನು ಮಾಡುತ್ತೀಯ ಎಂದು ಇಬ್ಬರೂ ಸೇರಿ ಪೊಲೀಸ್ ಸಮವಸ್ತ್ರದಲ್ಲಿದ್ದ ಪೊಲೀಸ್ ಅಧಿಕಾರಿಗಳನ್ನು ತಳ್ಳಿ ಅವರ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿ ಬೈಕಿನ ಕೀ ಕಿತ್ತು ಕೊಂಡು ನಿಮಗೆ ನೋಡಿಕೊಳ್ಳುತ್ತೇವೆ ಎಂದು ಬೆದರಿಕೆ ಹಾಕಿ, ಬೈಕ್ ತೆಗೆದುಕೊಂಡು ಹೋಗಿದ್ದು, ಈ ಬಗ್ಗೆ ಕೋಟೆ ಪೊಲೀಸ್ ಠಾಣೆ ಗುನ್ನೆ ಸಂಖ್ಯೆ 99/2026 ಕಲಂ 121(1), 132, 3(5) ಬಿ.ಎನ್.ಎಸ್ ಕಾಯ್ದೆ ರೀತ್ಯಾ ಪ್ರಕರಣ ದಾಖಲಿಸಿಕೊಂಡು, ಇಬ್ಬರು ಆರೋಪಿತರನ್ನು ದಸ್ತಗಿರಿ ಮಾಡಿ, ಘನ ನ್ಯಾಯಾಲಯದ ಮುಂದೆ ಹಾಜರು ಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿರುತ್ತದೆ.
- ಶಿವಮೊಗ್ಗ ಪೊಲೀಸ್ ಪ್ರಕಟಣೆ
