ಶಿವಮೊಗ್ಗ, ಮೇ.5
ಶಿವಮೊಗ್ಗ ಕೋಟೆ ಪೊಲೀಸ್ ಠಾಣಾವ್ಯಾಪ್ತಿಯಲ್ಲಿನ ರಾಜೀವ್ ಗಾಂಧಿ ಬಡಾವಣೆ ಕಂಟ್ರಿ ಕ್ಲಬ್ ರಸ್ತೆಯ ಬಳಿ ಯಾರೋ ಇಬ್ಬರು ಕಾನೂನುಬಾಹಿರವಾಗಿ ಮಾದಕ ವಸ್ತುವಾದ ಗಾಂಜಾವನ್ನು ಮಾರಾಟ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಬಾಬು ಆಂಜನಪ್ಪ ಪೊಲೀಸ್ ಉಪಾಧೀಕ್ಷಕರು ಶಿವಮೊಗ್ಗ ಎ ಉಪವಿಭಾಗರವರು ಅಧಿಕಾರಿ ಹಾಗೂ ಸಿಬ್ಬಂದಿಗಳೊಂದಿಗೆ ದಾಳಿ ಮಾಡಿ ಆರೋಪಿತರಾದ ಅಶೋಕ ಪಿ 28 ವರ್ಷ, ರಾಕೇಶ್ 20 ವರ್ಷ ಇವರುಗಳನ್ನು ದಸ್ತಗಿರಿ ಮಾಡಿ ಸುಮಾರು *1,00,000 ರೂ ಮೌಲ್ಯದ 1ಕೆಜಿ 67ಗ್ರಾಂ ತೂಕದ ಗಾಂಜಾವನ್ನು ಹಾಗೂ ಕೃತ್ಯಕ್ಕೆ ಬಳಸಿದ* ಕಾರನ್ನು ಹಾಗೂ ಕೃತ್ಯದಿಂದ ಬಂದ 3290/- ರೂ ನಗದು ಹಣವನ್ನು ಅಮಾನತ್ತುಪಡಿಸಿಕೊಂಡು ಸದರಿ ಆರೋಪಿತರ ವಿರುದ್ಧ ಕೋಟೆ ಪೊಲೀಸ್ ಠಾಣೆಯಲ್ಲಿ ಗುನ್ನೆ ಸಂಖ್ಯೆ: 0097/2026 ಕಲಂ: U/s-20(b) (ii) B) NARCOTIC DRUGS & PSYCHOTROPIC SUBSTANCES ACT, ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿ ತನಿಖೆಯನ್ನು ಕೈಗೊಳ್ಳಲಾಗಿದೆ.

ಸರ್ಜಿ ಕನ್ವೆಷನ್ ಹಾಲ್ ನಲ್ಲಿ ಮಾಂಗಲ್ಯ ಸರ ಕಳವು/ ಆರೋಪಗಳ ಸೆರೆ ಹಿಡಿದ ವಿನೋಬನಗರ ಪೊಲೀಸರು

ದಿನಾಂಕ 30/04/2026 ರಂದು ಶಿವಮೊಗ್ಗ ವಿನೋಬನಗರ ಪೊಲೀಸ್ ಠಾಣೆ ವ್ಯಾಪ್ತಿಯ ನವುಲೆ ಸರ್ಜಿ ಕನ್ವೆಷನ್ ಹಾಲ್ ನಲ್ಲಿ ಮದುವೆಯ ಸಮಯದಲ್ಲಿ ರೂಮ್ ಗಳಲ್ಲಿ ಬ್ಯಾಗ್ ನಲ್ಲಿಟ್ಟಿದ್ದ ಒಟ್ಟು 28 ಗ್ರಾಂ ತೂಕದ ಬಂಗಾರದ ಆಭರಣಗಳು ಅವುಗಳ ಬೆಲೆ 2,40,೦೦೦/- ರೂಗಳನ್ನು ತೆಗೆದುಕೊಂಡು ಹೋಗಿದ್ದು ಈ ಬಗ್ಗೆ ಪಿರ್ಯಾದುದಾರರಾದ ಸದಾಶಿವಪ್ಪ ತೇವರ ಚಟ್ನಹಳ್ಳಿ ಗ್ರಾಮ ಶಿವಮೊಗ್ಗ ಅವರು ದಿನಾಂಕ 30/04/2026 ರಂದು ದೂರು ನೀಡಿದ ಮೇರೆಗೆ ವಿನೋಬನಗರ ಪೊಲೀಸ್ ಠಾಣೆ ಸಿ ಆರ್ ನಂ 86/2026 ಕಲಂ ಕಲಂ 305 ಬಿಎನ್ಎಸ್ 2023 ರೀತ್ಯಾ ಪ್ರಕರಣ ದಾಖಲಾಗಿ ತನಿಖೆ ಕೈಗೊಂಡಿರುತ್ತದೆ.
ಈ ಮೇಲ್ಕಂಡ ಪ್ರಕರಣದಲ್ಲಿ ಕಳವು ಮಾಡಿಕೊಂಡು ಹೋದ ಬಂಗಾರದ ಆಭರಣಗಳು ಮತ್ತು ಆರೋಪಿತರನ್ನು ಪತ್ತೆ ಮಾಡಲು ನಿಖಿಲ್ ಬಿ. ಐ.ಪಿ.ಎಸ್. ಮಾನ್ಯ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ ಶಿವಮೊಗ್ಗ , ಕಾರಿಯಪ್ಪ. ಎ.ಜಿ ಕೆ.ಎಸ್.ಪಿ.ಎಸ್ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ ಶಿವಮೊಗ್ಗ, ಸಂಜೀವ್ ಕುಮಾರ್ ಟಿ., ಡಿ.ವೈ.ಎಸ್.ಪಿ ಪೊಲೀಸ್ ಉಪಾಧೀಕ್ಷಕರು ಶಿವಮೊಗ್ಗ ಉಪ ವಿಭಾಗ-ಬಿ ಶಿವಮೊಗ್ಗ ರವರ ಮಾರ್ಗದರ್ಶನದಲ್ಲಿ, ಸುರೇಶ್ ಪೊಲೀಸ್ ನೀರಿಕ್ಷಕರು ವಿನೋಬನಗರ ಪೊಲೀಸ್ ಠಾಣೆ ( ಪ್ರಭಾರ ) ರವರ ಉಸ್ತುವಾರಿಯಲ್ಲಿ ತಿರುಮಲೇಶ್ ಜಿ ಪಿಎಸ್ಐ ಮತ್ತು ಸಿಬ್ಬಂದಿಗಳಾದ ರಾಜು ಕೆ ಆರ್ ಸಿಪಿಸಿ, ಚಂದ್ರಾನಾಯ್ಕ ಬಿ ಸಿಪಿಸಿ, ಮಲ್ಲಪ್ಪ ಎಸ್ ಜಿ ಸಿಪಿಸಿ, ಅರುಣಕುಮಾರ್ ಎನ್ ಕೆ ಸಿಪಿಸಿ, ಮನುಶಂಕರ ಸಿಪಿಸಿ, ರವರ ತಂಡ ರಚಿಸಲಾಗಿರುತ್ತದೆ.




ಸದರಿಯವರು ಆರೋಪಿತರ ಪತ್ತೆಯಲ್ಲಿದ್ದಾಗ ಮಾಹಿತಿ ಸಂಗ್ರಹಿಸಿ ಮೇಲ್ಕಂಡ ಪ್ರಕರಣದಲ್ಲಿ ಭಾಗಿಯಾಗಿದ್ದ ಇಬ್ಬರು ಕಾನೂನು ಸಂಘರ್ಷಕ್ಕೊಳಗಾದ ಬಾಲಕರು ಮತ್ತು ಆರೋಪಿ ಅಮ್ಜದ್ ಖಾನ್ @ ಅಂಜು ಬಿನ್ ಹಬೀಬುಲ್ಲಾ ಖಾನ್ 29 ವರ್ಷ ಶರಾವತಿ ನಗರ ಆಟೋ ಕಾಂಪ್ಲೇಕ್ಸ್ ಶಿವಮೊಗ್ಗ ಈತನನ್ನು ಪ್ರಕರಣ ದಾಖಲಾಗಿ 06 ಗಂಟೆಯೊಳಗೆ ಕಾನೂನು ಸಂಘರ್ಷಕ್ಕೊಳಗಾದ ಬಾಲಕರನ್ನು ಅಭಿರಕ್ಷೆಗೊಳಪಡಿಸಿ ನಂತರ ಆರೋಪಿತನನ್ನು ಬಂಧಿಸಿ ಆರೋಪಿ ಕಡೆಯಿಂದ ಪ್ರಕರಣದಲ್ಲಿ ಕಳವು ಮಾಡಿಕೊಂಡು 24 ಗ್ರಾಂ ತೂಕದ ಬಂಗಾರದ ಆಭರಣಗಳು ಅದರ ಬೆಲೆ 3,75,೦೦೦ ಮತ್ತು ಕೃತ್ಯಕ್ಕೆ ಬಳಸಿದ 2,10,000/- ರೂ ಮೌಲ್ಯದ 02 ಬೈಕ್ ಗಳು ಸೇರಿ ಒಟ್ಟು ಅಂದಾಜು ಮೌಲ್ಯ 5,85,೦೦೦/- ರೂ ಗಳ ಮಾಲು ವಶಪಡಿಸಿಕೊಳ್ಳಲಾಗಿದೆ.
ಈ ಪತ್ತೆ ಕಾರ್ಯಗಳನ್ನು ಶಿವಮೊಗ್ಗ ಜಿಲ್ಲೆಯ ಪೊಲೀಸ್ ಅಧೀಕ್ಷಕರಾದ ನಿಖಿಲ್ ಬಿ. ಐ.ಪಿ.ಎಸ್ ರವರು ಶ್ಲಾಘೀಸಿರುತ್ತಾರೆ.



