ಶಿವಮೊಗ್ಗ, ಏಪ್ರಿಲ್ 17 : ಶಿವಮೊಗ್ಗ ನಗರ ಉಪವಿಭಾಗ-1, ಘಟಕ-1ರ ವ್ಯಾಪ್ತಿಯಲ್ಲಿ ವಿದ್ಯಾನಗರ ಮಾರ್ಗದಲ್ಲಿ 11 ಕೆವಿ ಮಾರ್ಗದ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಏ. 19 ರಂದು ಬೆಳಗ್ಗೆ 10.00 ರಿಂದ ಸಂಜೆ 5.00 ರವರೆಗೆ ವಿದ್ಯಾನಗರ, ಶಾಂತಮ್ಮ ಲೇಔಟ್,

ಚಿಕ್ಕಲ್, ಸಿದ್ದೇಶ್ವರನಗರ, ಇಂದಿರಾ ಬಡಾವಣೆ, ಗುರುಪುರ, ಮಂಜುನಾಥ ಬಡಾವಣೆ, ವೆಂಕಟೇಶ್ನಗರ, ಪುರಲೆ, ಅಪೂರ್ವ ಲೇಔಟ್, ಕಂಟ್ರಿಕ್ಲಬ್ ರಸ್ತೆ, ಗೋಶಾಲೆ ಹಾಗೂ ಸುತ್ತಮುತ್ತಲಿನ ಪ್ರದೇಶ. ಬಿ.ಹೆಚ್.ರಸ್ತೆ, ಮೀನಾಕ್ಷಿಭವನ, ಬಾಪೂಜಿನಗರ, ಟಿಜಿಎನ್ ಲೇಔಟ್,

ಜೋಸೆಫ್ ನಗರ, ಚರ್ಚ್ ಕಾಂಪೌಂಡ್, ಕಾನ್ವೆಂಟ್ ರಸ್ತೆ, ಲೂರ್ದ್ ನಗರ, ಸರ್.ಎಂ.ವಿ.ರಸ್ತೆ, ಕುವೆಂಪು ರಂಗಮಂದಿರ, ಗಾಂಧಿಪಾರ್ಕ್, ಮಹಾನಗರ ಪಾಲಿಕೆ, ಪಾರ್ಕ್ ಬಡಾವಣೆ, ದುರ್ಗಿಗುಡಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.