
ಶಿವಮೊಗ್ಗ,ಏ.13:

ಶಿವಮೊಗ್ಗದಿಂದ ಶಿಕಾರಿಪುರಕ್ಕೆ ಹೊರಟಿದ್ದ ಖಾಸಗಿ ಬಸ್ ಶಿಕಾರಿಪುರ ನಗರ ಪ್ರವೇಶ ದ್ವಾರದಲ್ಲಿ ಪಲ್ಟಿಯಾಗಿ ಬಿದ್ದು ಬಸ್ ನಲ್ಲಿದ್ದ, 12 ಮಂದಿ ಪ್ರಯಾಣಿಕರು ತೀವ್ರವಾಗಿ ಗಾಯಗೊಂಡ ಘಟನೆ ಇಂದು ಬೆಳಿಗ್ಗೆ ನಡೆದಿದೆ.
ಬೈಕ್ ಸವಾರ ಬಸ್ಗೆ ಅಡ್ಡಬಂದಿದ್ದರಿಂದ ಆತನನ್ನು ಉಳಿಸಲು ಹೋದ ಬಸ್ ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿ ಹೊಡೆದಿದೆ.

ಬಸ್ನಲ್ಲಿ ಸುಮಾರು 25ಕ್ಕೂ ಹೆಚ್ಚು ಪ್ರಯಾಣಿಕರು ಇದ್ದು, ಅವರಲ್ಲಿ 12 ಮಂದಿಗೆ ಗಾಯಗಳಾಗಿದ್ದು ಗಾಯಾಳುಗಳನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇವರಲ್ಲಿ ಐವರಿಗೆ ತೀವ್ರ ಸ್ವರೂಪದ ಗಾಯಗಳಾಗಿವೆ. ಹಾಗೂ ಗಾಯಾಳುಗಳಲ್ಲಿ 9 ತಿಂಗಳ ಗರ್ಭೀಣಿಯೂ ಸೇರಿದ್ದಾಳೆ

.
ಮೆಗ್ಗಾನ್ ಆಸ್ಪತ್ರೆಗೆ ಸಂಸದ ಬಿ.ವೈ. ರಾಘವೇಂದ್ರ ಭೇಟಿ ನೀಡಿ, ಗಾಯಾಳುಗಳಿಗೆ ಸಾಂತ್ವಾನ ಹೇಳಿದರು. ಮತ್ತು ವೈದ್ಯರನ್ನು ಸಂಪರ್ಕಿಸಿ ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡಬೇಕೆಂದು ಸೂಚಿಸಿದರು.
ಆಯಾ ಗಾಯಾಳುಗಳಿಗೆ ಈ ಕ್ಷಣದಲ್ಲಿ ಸಹಾಯ ಮಾಡಿದ್ದವರಾರು? ಹತ್ತು ಸಾವಿರ ರೂ ನೋಡದವರೂ ಇದ್ದಾರೆ. ಆಸ್ಪತ್ರೆ ಹೆಸರಲ್ಲಿ ಸರ್ಜಿ ಆಸ್ಪತ್ರೆಯಲ್ಲಿ ಏನಾಗುತ್ತಿದೆ. ಹೃದಯ, ಕಿಡ್ನಿ, ಲಿವರ್ ಕಥೆನಾ? ಅಮಾಯಕರವರು, ಸಹಾಯ ಮಾಡೋದಾರರೆ ಮುಕ್ತವಾಗಿರಲಿ…., ಎಲ್ಲಾ ಬಿಲ್ಲೂ ಸಂಸದರ ಹೆಸರಿಗೋಗುತ್ತಾ? ಇಂತಹ ನೂರಾರು ಪ್ರಶ್ನೆ ಅಲ್ಲಿ ಮೂಡಿದೆ. ಸುದ್ದಿ ಹುಡುಕಾಟದಲಿ..
ಗಾಯಾಳುಗಳಲ್ಲಿ ಕೆಲವರನ್ನು ಶಿವಮೊಗ್ಗದ ಸರ್ಜಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದ ಅವರು, ಸುಧೈವವಶಾತ್ನಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದ ಅವರು, ಗಾಯಾಳುಗಳಲ್ಲಿ ಹೆಚ್ಚಾಗಿ ಕೂಲಿಕಾರ್ಮಿಕರಾಗಿದ್ದು ಅವರು ಚೇತರಿಸಿಕೊಳ್ಳಲು 2-3 ತಿಂಗಳು ಬೇಕಾಗುತ್ತದೆ. ಸರ್ಕಾರದಿಂದ ಸಿಗುವ ಪರಿಹಾರವನ್ನು ದೊರಕಿಸಿಕೊಡಲು ಪ್ರಯತ್ನಿಸಲಾಗುವುದು ಎಂದರು.
