ಶಿವಮೊಗ್ಗ, ಏ.10:
ಶಿವಮೊಗ್ಗದ ಜಯನಗರದಲ್ಲಿರುವ ಹೌಸಿಂಗ್ ಕೋ ಆಪರೇಟಿವ್ ಸೊಸೈಟಿಯಲ್ಲಿ ನಡೆದ ವಿವಿಧ ಕಾಮಗಾರಿಗಳ ಅವ್ಯವಹಾರ ತನಿಕೆ ನಡೆಸಲು ಕೋರಿದ ಹಿನ್ನೆಲೆಯಲ್ಲಿ ಶಿವಮೊಗ್ಗ ಸಹಕಾರ ಸಂಘಗಳ ಉಪನಿಬಂಧಕರು ಸಮಗ್ರ ತನಿಖೆಯ ಆದೇಶ ಹೊರಡಿಸಿದ್ದಾರೆ.

2012ರಲ್ಲಿ ಪ್ರಾರಂಭಗೊಂಡ ಸವಳಂಗ ರಸ್ತೆಯ ಸೊಸೈಟಿಗೆ ಸಂಬಂಧಪಟ್ಟ ಮೆಟ್ರೋ ಆಸ್ಪತ್ರೆ ಕಟ್ಟಡ ಕಾಮಗಾರಿ ರವೀಂದ್ರನಗರದ ವಸತಿ ಸಮುಚ್ಚಯ ಸೇರಿದಂತೆ ವಿವಿಧ ಕಾಮಗಾರಿಗಳಲ್ಲಿ ಭಾರಿ ಪ್ರಮಾಣದ ವ್ಯವಹಾರ ನಡೆದಿದೆ ಎಂದು ಸದಸ್ಯ ಕೆ.ಜಿ. ಕುಮಾರಸ್ವಾಮಿ ಅವರು ಸಹಕಾರ ಸಂಘಕ್ಕೆ ದೂರು ನೀಡಿದ್ದರು. ನಾಗಭೂಷಣ್ ಚಂದ್ರಶೇಖರ್, ಸಹಕಾರ ಸಂಘಗಳ ಉಪನಿಬಂಧಕರು, ಶಿವಮೊಗ್ಗ ಅವರು ಆದೇಶ ಹೊರಡಿಸಿದ್ದು, ಸಾಗರ ಉಪ ವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕರನ್ನು ಸಮಗ್ರ ವಿಚಾರಣೆಗೆ ನೇಮಕ ಮಾಡಿದ್ದಾರೆ.
ಸಹಕಾರ ಸಂಘಗಳ ಕಲಂ 64ರ ಅನ್ವಯ ಮೂರು ತಿಂಗಳ ಒಳಗೆ ಸಮಗ್ರ ಪರಿಶೀಲನೆ ನಡೆಸಿ ವರದಿ ಒಪ್ಪಿಸಲು ಸೂಚಿಸಲಾಗಿದೆ.
ಒಟ್ಟಾರೆ ಶಿವಮೊಗ್ಗ ಹೌಸಿಂಗ್ ಕೋ ಆಪರೇಟಿವ್ ಸೊಸೈಟಿಯ ಅವ್ಯವಹಾರದ ಆರೋಪ ಈಗ ತನಿಖೆ ಹಂತಕ್ಕೆ ತಲುಪಿದೆ.