ಶಿವಮೊಗ್ಗ: ಇಲ್ಲಿನ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಕಳ್ಳತನ ಪ್ರಕರಣಗಳು ನಿರಂತರವಾಗಿ ಮುಂದುವರೆದಿವೆ. ಸಾಗರಕ್ಕೆ ಹೊರಟಿದ್ದ ಮಹಿಳೆಯ ಪರ್ಸ್ನಲ್ಲಿದ್ದ 179 ಗ್ರಾಂ ಚಿನ್ನದ ಸರ ಹಾಗೂ ₹ 35 ಸಾವಿರ ನಗದನ್ನು ಕಳ್ಳರು ದೋಚಿದ್ದಾರೆ.
ಭದ್ರಾವತಿ ತಾಲ್ಲೂಕಿನ ಆನವೇರಿ ನಿವಾಸಿ ವಾಸಂತಿ ಅವರು ಮಗಳೊಂದಿಗೆ ಶಿವಮೊಗ್ಗದಿಂದ ಸಾಗರಕ್ಕೆ ಹೊರಟಿದ್ದರು. ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಸಾಗರಕ್ಕೆ ತೆರಳುವ ಬಸ್ ಹತ್ತುವಾಗ ವಿಪರೀತ ಜನ ದಟ್ಟಣೆಯಿದ್ದು, ಅವರ ವ್ಯಾನಿಟಿ ಬ್ಯಾಗ್ ಒಳಗೆ ಮತ್ತೊಂದು ಪರ್ಸ್ನಲ್ಲಿ ಇಟ್ಟಿದ್ದ ಚಿನ್ನಾಭರಣ ಹಾಗೂ ನಗದು ಸೇರಿ ₹ 8,47 ಲಕ್ಷ ಮೌಲ್ಯದ ವಸ್ತುಗಳನ್ನು ಕಳವು ಮಾಡಿದ್ದಾರೆ.
ಬಸ್ನಲ್ಲಿ ಕಂಡಕ್ಟರ್ ಬಳಿ ಟಿಕೆಟ್ ತೆಗೆದುಕೊಳ್ಳುವಾಗ ಪರ್ಸ್ ಕಳ್ಳತನ ಆಗಿರುವುದು ವಾಸಂತಿ ಅವರ ಗಮನಕ್ಕೆ ಬಂದಿದೆ. ಆ ಬಗ್ಗೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಿವಮೊಗ್ಗದಲ್ಲಿ ನರ್ಸ್ ಆಗಿದ್ದ ಕಾಫಿನಾಡ ಮಹಿಳೆ ಹೊಳೆಗೆ ಹಾರಿ ಆತ್ಮಹತ್ಯೆ

ಚಿಕ್ಕಮಗಳೂರು : ಹೊಳೆಗೆ ಹಾರಿ ನರ್ಸ್ ಆತ್ಮಹತ್ಯೆಗೆ ಶರಣಾಗಿರೋ ಘಟನೆ ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ತಾಲೂಕಿನ ಮುಡುಬ ಬಳಿ ನಡೆದಿದೆ. ಮೃತರನ್ನ ರನ್ಯಾ ಬೇಸಿಲ್ (30) ಎಂದು ಗುರುತಿಸಲಾಗಿದೆ. ಎನ್.ಆರ್ ಪುರ ತಾಲೂಕಿನ ಮುತ್ತಿನಕೊಪ್ಪ ಮೂಲಕದ ಮೃತ ರನ್ಯಾ ಬೇಸಿಲ್ ಶಿವಮೊಗ್ಗದ ನಾರಾಯಣ ಹೃದಯಾಲಯದಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು. ನಿನ್ನೆ ಕೂಡ ಆಸ್ಪತ್ರೆಗೆ ಹೋಗಿ ತನ್ನ ಕೆಲಸ ಮುಗಿಸಿ ಮನೆಗೆ ಬಂದಿದ್ದರು. ನಿತ್ಯ ಶಿವಮೊಗ್ಗಕ್ಕೆ ಓಡಾಡುತ್ತಿದ್ದ ರನ್ಯಾ ನಿನ್ನೆ ಸಂಜೆ ಕೆಲಸ ಮುಗಿಸಿ ಮನೆಗೆ ಬಂದಿದ್ದರು. ಮನೆಗೆ ಬಂದಿದ್ದ ರನ್ಯಾ ಮತ್ತೆ ಮುಡುಬ ಬಳಿ ಹೋಗಿ ಸೇತುವೆ ಮೇಲಿಂದ ಹೊಳೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. 12 ವರ್ಷದ ಹಿಂದೆ ಮದುವೆಯಾಗಿದ್ದ ರನ್ಯಾಗೆ ಇಬ್ಬರು ಮಕ್ಕಳಿದ್ದು, ಪತಿ ಕಾಫಿ ಬೆಳೆಗಾರರಾಗಿದ್ದಾರೆ. ಎನ್.ಆರ್ ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆಕಸ್ಮಿಕ ವಿದ್ಯುತ್ ಅವಘಡ ಮನೆ ಸಂಪೂರ್ಣ ಭಸ್ಮ
ರಿಪ್ಪನ್ಪೇಟೆ: ಹುಂಚ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಠದಜಡ್ಡು ಗ್ರಾಮದ ಸಾವಿತ್ರಮ್ಮ ಎಂಬುವವರ ವಾಸದ ಮನೆ ಈಚೆಗೆ ವಿದ್ಯುತ್ ಅವಘಡದಿಂದ ಬೆಂಕಿ ತಗುಲಿ ಸಂಪೂರ್ಣ ಸುಟ್ಟು ಹೋಗಿದೆ.
ಶಾಸಕ ಆರಗ ಜ್ಞಾನೇಂದ್ರ ಭೇಟಿ ನೀಡಿ ಕುಟುಂಬಕ್ಕೆ ಧೈರ್ಯ ತುಂಬಿದರು. ಗೃಹೋಪಯೋಗಿ ವಸ್ತುಗಳು, ಒಂದು ತಿಂಗಳಿಗಾಗುವಷ್ಟು ದವಸ-ಧಾನ್ಯದ ಜೊತೆಗೆ ಆರ್ಥಿಕ ನೆರವು ನೀಡಿದರು.
ತೀವ್ರ ಆಘಾತಕ್ಕೊಳಗಾಗಿರುವ ಸಾವಿತ್ರಮ್ಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನಾ ಸ್ಥಳಕ್ಕೆ ಹೊಸನಗರದ ಮೆಸ್ಕಾಂ ಎಇಇ ಚಂದ್ರಶೇಖರ್, ಕಂದಾಯ ಇಲಾಖೆಯ ಉಪತಹಶೀಲ್ದಾರ್, ರಿಪ್ಪನ್ಪೇಟೆ ಪಿಎಸ್ಐ ರಾಜುರೆಡ್ಡಿ, ಗ್ರಾಮ ಲೆಕ್ಕಾಧಿಕಾರಿ ಹಾಗೂ ಹುಂಚ ಗ್ರಾಮ ಪಂಚಾಯಿತಿ ಪಿಡಿಒ ಮತ್ತು ಸಿಬ್ಬಂದಿ ಭೇಟಿ ನೀಡಿದ್ನೀಡಿದ್ದರು. ಭದ್ರಾವತಿ: ಜೇನು ನೊಣಗಳ ದಾಳಿ; 18 ಜನರಿಗೆ ಗಾಯ
ದ್ರಾವತಿ: ನಗರದ ವಿಐಎಸ್ಎಲ್ ಕ್ರೀಡಾಂಗಣದಲ್ಲಿ ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಿ ನಡೆಯುತ್ತಿದ್ದ ವೇಳೆ ಜೇನು ನೊಣಗಳು ದಾಳಿ ನಡೆಸಿದ್ದು, 18 ಜನ ಗಾಯಗೊಂಡಿದ್ದಾರೆ.
ರಾಜಸ್ಥಾನ ಸಮಾಜ್ ವತಿಯಿಂದ ಕ್ರಿಕೆಟ್ ಟೂರ್ನಿ ಆಯೋಜಿಸಲಾಗಿತ್ತು. ಮೊದಲನೇ ಪಂದ್ಯ ಫೈರ್ ಬರ್ಡ್ಸ್ ಹಾಗೂ ಜೈನ್ ಡ್ಯೂಡ್ಸ್ ತಂಡಗಳ ನಡುವೆ ನಿಗದಿಯಾಗಿತ್ತು.
ಬೆಳಿಗ್ಗೆ 9 ಗಂಟೆಗೆ ಟಾಸ್ ಮುಗಿಯುತ್ತಿದ್ದಂತೆ ಜೇನು ನೊಣಗಳು ನೆರೆದಿದ್ದವರ ಮೇಲೆ ದಾಳಿ ನಡೆಸಿವೆ. ಅವುಗಳಿಂದ ತಪ್ಪಿಸಿಕೊಳ್ಳಲು ಆಟಗಾರರು ಹಾಗೂ ಪ್ರೇಕ್ಷಕರು ತಕ್ಷಣ ದಿಕ್ಕಾಪಾಲಾಗಿ ಓಡಿದರು.
ಗಾಯಗೊಂಡಿದ್ದ 18 ಜನರ ಪೈಕಿ ಇಬ್ಬರು ಯುವಕರನ್ನು ಭದ್ರಾವತಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದವರು ಹೊರ ರೋಗಿಗಳಾಗಿ ಚಿಕಿತ್ಸೆ ಪಡೆದಿದ್ದಾರೆ.