ಸಾಗರ(ಶಿವಮೊಗ್ಗ),ಏ,೦೬:ಸಾಗರ ಸಮೀಪದ ಮಂಕಳಲೆಯಲ್ಲಿನ ಶ್ರೀ ಶಂಭುಲಿಂಗೇಶ್ವರ ಮತ್ತು ಶ್ರಿ ಮಹಾಕಾಳಿ ಸನ್ನಿದಾನದಲ್ಲಿ ಶ್ರೀಮತ್ ಸ್ಯಂದನ ಮಹಾ ರಥೋತ್ಸವ ಏ.೨ ಮತ್ತು ೩ ರಂದು ಅತ್ಯಂತ ವಿಜೃಂಭಣೆ ಹಾಗೂ ಧಾರ್ಮಿಕ ವಿಧಿ ವಿಧಾನಗಳಿಂದ ಸಂಪನ್ನಗೊಂಡಿತು.
ಸ್ವಸ್ತಿ ಶ್ರೀ ವಿಜಯಾ ಭ್ಯುದಯ ಪ್ರವರ್ತಮಾನ ೧೯೪೯ ನೃಪ ಶಾಲಿವಾಹನ ಶಕವರ್ಷೇ ಪರಾಭವ ನಾಮ ಸಂವತ್ಸರದ ಚೈತ್ರ ಶುಕ್ಲ ಪೌರ್ಣಿಮೆ ಗುರುವಾರ ಏ.೦೨- ರಂದು ಶ್ರೀಮತ್ ಸ್ಪಂದನ ಮಹಾರಥೋತ್ಸವದ ನಿಮಿತ್ತವಾಗಿ ಇಕ್ಕೇರಿ ಪುರವ ರಾಧೀಶ್ವರರಾದ ಶ್ರೀ ಶಂಭು ಲಿಂಗೇಶ್ವರ ಶ್ರೀ ಮಹಾಕಾಳೀ ಸಾನ್ನಿಧ್ಯವು ಕಾರುಣ್ಯದಿಂದ ಕಳುಹಿಸಿದ ನಿರೂಪವು. ಸಕಲ ದೇಶಕ್ಕೂ, ಸೀಮೆಯವರಿಗೂ ಸುವೃಷ್ಟಿ, ಸುಭಿಕ್ಷೆ ಸುಫಲವಾಗ ಬೇಕೆಂದು ನಾವು ಚೈತ್ರ ಶುಕ್ಲ ದ್ವಾದಶಿಯಿಂದ (೩೦-೦೩-೨೦೨೬) ಚೈತ್ರ ಕೃಷ್ಣ ಬಿದಿU ಯವರೆಗೆ (೦೪-೦೪-೨೦೨೫) ಶ್ರೀಮತ್ ಸೈಂದನ ಮಹಾ ರಥೋತ್ಸವದ ಅಧಿವಾಸ, ಹವನ, ಉತ್ಸವಗಳ ಯಾಗ ದೀಕ್ಷೆಯನ್ನು ಸ್ವೀಕರಿಸಿದರು.
ಏ.೨ರಂದು ವಿವಿಧ ಧಾರ್ಮಿಕ ಕಾರ್ಯಕ್ರಮ ಗಳು,ಪಲ್ಲಕ್ಕಿ ಉತ್ಸವಾದಿಗಳು ಜೊತೆಗೆ ಪುಷ್ಪ ರಥೋತ್ಸವ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.
ಚೈತ್ರ ಶುದ್ಧ ಪೌರ್ಣಿಮೆ ಏ.೨ ರಂದು ಗುರುವಾರ ಬೆಳಿಗ್ಗೆ ೧೦-೩೦ ರಿಂದ ೧೦-೪೫ ರ ಸಮಯದಲ್ಲಿ ವೃಷಭ ಲಗ್ನದ ಶುಭಾಂಶದಲ್ಲಿ ರಥ ರೋಹಣ,ಧಾನ್ಯವೃಷ್ಠಿ, ಸುವರ್ಣವೃಷ್ಠಿ,ಮಹಾಪೂಜೆ ದೇವರಿಗೆ ಹಣ್ಣು ಕಾಯಿ ಪೂಜೆ ನೆರವೇರಿತು.
ಹಣ್ಣು-ಕಾಯಿ ಸಮ ರ್ಪಣೆ, ರಥದ ಚಕ್ರಕ್ಕೆ ಕಾಯಿ ಒಡೆಯುವುದು, ಕಾಣಿಕೆ ಸಮ ರ್ಪಣೆ, ರುದ್ರಹವನ ಮತ್ತು ಮಹಾ ಕಾಳೀ ಹವನ,ರ್ಸಾ ಹುತಿ, ತೀರ್ಥ ಪ್ರಸಾದ ವಿನಿ ಯೋಗ ಮಧ್ಯಾಹ್ನ ಮಧ್ಯಾಹ್ನ ಹ್ನ ೧೨ ಕ್ಕೆ ಪೂರ್ಣಾಹುತಿ ಅನ್ನ ಸಂತರ್ಪಣೆ ಅಚ್ಚುಕಟ್ಟಾಗಿ ನೆರವೇರಿತು.
ಮಧ್ಯಾಹ್ನ ೩ ರಿಂದ ಸಂಜೆ ೬ ರವರೆಗೆ ಜಬೀದಿ ರಥೋತ್ಸವ,ಕಲಶಪೂಜೆ, ಅಂಕುರಪೂಜೆ,ಅಷ್ಟಾವದಾನ ಸೇವೆ,ರಾತ್ರಿ ೦೮ ಕ್ಕೆ ಪ್ರಸಾದ ಭೋಜನ ಏರ್ಪಡಿಸಿದ್ದರು.
ಮಧ್ಯಾಹ್ನ ೧೧.೩೦ರಿಂದ ೨.೩೦ ಸಾಂಸ್ಕೃತಿಕ ಕಾರ್ಯಕ್ರಮ ಸಂಜೆ ೬ ಗಂಟೆಯಿಂದ ಭಜನೆ, ಭಕ್ತಿ ಸಂಗೀತ ಕಾರ್ಯಕ್ರಮಗಳು-ವಿವಿಧ ತಂಡಗಳಿಂದ ವಿಶೇಷ ಆಹ್ವಾತ ಕಾರ್ಯಕ್ರಮ ಮಲೆನಾಡು ಕೋಗಿಲೆ ಹಾಗೂ ೨೦೨೫ರ ರಾಜ್ಯ ಯುವಸಿರಿ ಪ್ರಶಸ್ತಿ ವಿಜೇತ ಶ್ರೀ ಗಿರೀಶ್ ಕರ್ಕಿಕೊಪ್ಪ ಮತ್ತು ತಂಡದವರಿಂದ ಪ್ರೇಕ್ಷಕರ ಆಕರ್ಷಿಸಿತು.
ರಾತ್ರಿ ೯ ಗಂಟೆಗೆ ವಿದ್ವಾನ್ ದತ್ತಮೂರ್ತಿ ಭಟ್ ಸಂಚಾಲಕತ್ವದ ನಾಟ್ಯಶ್ರೀ ಕಲಾತಂಡ (ರಿ.) ಶಿವಮೊಗ್ಗ ಇವರಿಂದ ಕಾಲಮಿತಿ ಯಕ್ಷಗಾನ ಪ್ರದರ್ಶನ ಯಕ್ಷಪ್ರಿಯರನ್ನು ಆಕರ್ಷಿಸಿತು.
ತಹಶೀಲ್ದಾರ್ ಮತ್ತು ಮುಜರಾಯಿ ಅಧಿಕಾರಿಗಳು, ಸಾಗರ ಅಧ್ಯಕ್ಷರು, ಪದಾಧಿಕಾರಿಗಳು, ಶ್ರೀ ಶಂಭುಲಿಂಗೇಶ್ವರ ಮತ್ತು ಶ್ರೀ ಮಹಾಕಾಳೀ ದೇವಾಲಯ ಸಮಿತಿ ಮತ್ತು ಉಪಾಧಿ ವಂತರುಗಳ ಸಮ್ಮುಖದಲ್ಲಿ ರಥೋತ್ಸವ ಕಾರ್ಯಕ್ರಮಗಳು ಜರುಗಿತು.