ಶಿವಮೊಗ್ಗ, ಮಾ.03:
ಶಿವಮೊಗ್ಗ ವಿನೋಬನಗರ ಆದರ್ಶ ಕಾಲೋನಿಯಲ್ಲಿ ಸುರಿದ ಭಾರಿ ಮಳೆಯಿಂದಾಗಿ ಸುಮಾರು 30ಕ್ಕೂ ಹೆಚ್ಚು ಮನೆಗಳು ಜಲಾವೃತವಾಗಿದ್ದು ನೀರಿನ ಸಂಪರ್ಕ ಹೊರಹೋಗುವ ಸ್ಲಾಬ್ ಅನ್ನು ಎತ್ತರ ಮಟ್ಟಕ್ಕೆ ಕಟ್ಟುವ ಕೋರಿಕೆಯನ್ನು ಈಡೇರಿಸದ ಹಿನ್ನೆಲೆಯಲ್ಲಿ ಈ ಅವಾಂತರ ಸಂಭವಿಸಿದೆ.

ಇಂದು ಅಲ್ಲಿನ ಸ್ಥಳೀಯರು ರಾಷ್ಟ್ರಭಕ್ತ ಬಳಗದ ಪ್ರಮುಖರು ಹಾಗೂ ಯುವ ಮುಖಂಡರು ಆದ ಕೆ.ಈ. ಕಾಂತೇಶ್ ಅವರನ್ನು ಸ್ಥಳಕ್ಕೆ ಆಹ್ವಾನಿಸಿದ್ದು ಸಮಸ್ಯೆ ಇತ್ಯರ್ಥಕ್ಕೆ ಪರಿಹಾರ ಮಾಡಿಸಿಕೊಡುವಂತೆ ಕೋರಿದರು.

ಈ ಸಂದರ್ಭದಲ್ಲಿ ಕಾಂತೇಶ್ ಅವರು ಪಾಲಿಕೆಯ ಆಯುಕ್ತರು ಹಾಗೂ ಅಭಿಯಂತರರ ಜೊತೆಗೆ ಮಾತನಾಡಿದ್ದು, ನಾಳೆಯಿಂದಲೇ ಈ ಕಾರ್ಯದ ಬಗ್ಗೆ ಸಮರ್ಪಕ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ ಎಂದು ಹೇಳಿದರು.
ಅಂತೆಯೇ ಮಾಜಿ ಉಪಮುಖ್ಯಮಂತ್ರಿ ಕೆ. ಎಸ್ ಈಶ್ವರಪ್ಪ ಅವರು ಮಂಗಳವಾರ ಈ ಸ್ಥಳಕ್ಕೆ ಭೇಟಿ ಮುಂದಿನ ಕ್ರಮಕೈಗೊಳ್ಳಲಿದ್ದಾರೆ ಎಂದರು.
ಈ ಸಮಸ್ಯೆ ಇತ್ಯರ್ಥವಾಗುವವರೆಗೂ ಜನರ ಜೊತೆಗೆ ನಿರಂತರ ಸಂಪರ್ಕದಲ್ಲಿ ಇರುವುದಾಗಿ ಕಾಂತೇಶ್ ತಿಳಿಸಿದರು.
ಈ ಸಂದರ್ಭದಲ್ಲಿ ಆದರ್ಶ ಕಾಲೋನಿ ನಿವಾಸಿಗಳಾದ ಕಲ್ಲೂರು ಮೇಘರಾಜ್, ಕೆ. ನಾಗರಾಜ್, ಲತಾ, ಈಶ್ವರ್, ಬಿ. ನಾಗರಾಜ್, ಟೈಲ್ಸಮ್ಮ, ಚಂದ್ರಪ್ಪ , ಜಯಾ ನಾಗರಾಜ್, ಲಕ್ಷ್ಮೀ ಶಾಂತವೀರ್, ಉಷಾ ಶ್ರೀನಿವಾಸ್ ಹಾಗೂ ಇತರರಿದ್ದು. ರಾಷ್ಟ್ರಭಕ್ತಿ ಬಳಗದ ಪ್ರಮುಖರಾದ ವಿಶ್ವಾಸ್, ಶ್ರೀಕಾಂತ್, ಬಾಲು, ಜಾದವ್ ಹಾಗೂ ಇತರರು ಸಾರ್ವಜನಿಕರ ಸಮಸ್ಸೆ ಬಗ್ಗೆ ಚರ್ಚಿಸಿದರು.