
ಹಾವೇರಿ: ಮೈಲಾರಲಿಂಗೇಶ್ವರ ಕಾರ್ಣಿಕೋತ್ಸವವು(Mailaralingeshwara Karnika) “ಸಂಪಾಯಿತಲೇ ಪರಾಕ್” ಎಂಬ ಅಚ್ಚರಿ ಭವಿಷ್ಯವಾಣಿಯೊಂದಿಗೆ ಮಳೆ, ಬೆಳೆ ಮತ್ತು ನಾಡಿನ ಸಮೃದ್ಧಿಯನ್ನು ಸೂಚಿಸಿದೆ. ಜಾತ್ರಾ ಮಹೋತ್ಸವದ ವೇಳೆ ಗೊರವಯ್ಯ ನೀಲಪ್ಪ ಮಾಕಪ್ಪ ಕಾರ್ಣಿಕ ನುಡಿದಿದ್ದಾರೆ.
ಮುತ್ತು ಉತ್ಪತ್ತಿ ಆಯಿತು; ಶಿಶುವಿಗೆ ಹಾಲೇರಿಯಿತಲೇ ಪರಾಕ್ ಎಂದು ಹೇಳಿದ್ದಾರೆ. ಇದರ ಅರ್ಥ ಈ ವರ್ಷ ಉತ್ತಮ ಮಳೆ, ಬೆಳೆಯಾಗಲಿದೆ. ಎಲ್ಲರೂ ಸಂತೋಷದಿಂದ ಇರಲಿದ್ದಾರೆ ಎಂದಾಗಿದೆ.




ಗೊರವಯ್ಯ ನೀಲಪ್ಪ ಮಾಕಪ್ಪನವರ ಬಿಲ್ಲುಏರಿ ‘ಮುತ್ತು ಉತ್ಪತ್ತಿ ಆಯಿತು, ಶಿಶುವಿಗೆ ಹಾಲೇರಿಯಿತಲೇ ಪರಾಕ್’ ಎಂಬ ಕಾರ್ಣಿಕ ನುಡಿದಾಗ ಭಕ್ತರು ಏಳು ಕೋಟಿ, ಏಳು ಕೋಟಿಗೋ.. ಛಾಂಗ್ ಮಲೋ ಎಂದು ನುಡಿದರು.
ಮಾರ್ಚ್ 1 ರಿಂದ ಮಾರ್ಚ್ 22 ವರೆಗೆ ನಾಲ್ಕು ಭಾನುವಾರ ಮೈಲಾರಲಿಂಗೇಶ್ವರ ದೇವರಿಗೆ ಹಣ್ಣು ಕಾಯಿ ಸಮರ್ಪಣೆ ಮಾಡಿ, ಪಲ್ಲಕ್ಕಿ ಉತ್ಸವ ಡೋಣಿ ತುಂಬಿಸುವ ಕಾರ್ಯಕ್ರಮ ನಡೆಯಿತು. ಕೊನೆಯದಾಗಿ ರಾಮನವಮಿ ದಿನ ಬೆಳಗ್ಗೆ 9ಕ್ಕೆ ಭಕ್ತಾದಿಗಳಿಂದ ಹಣ್ಣು ತುಪ್ಪ ಡೋಣಿ ತುಂಬಿಸಿದ ಬಳಿಕ ಪಲ್ಲಕ್ಕಿ ಉತ್ಸವ ನಡೆಯಿತು. ಡೊಳ್ಳು, ಮಜಲು, ಭಜನೆ ವಾದ್ಯ, ವೈಭವಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿಸಂಚರಿಸಿ ಗ್ರಾಮದ ದೇವರುಗಳಿಗೆ ಅಭಿಷೇಕ ಉಡಿ ತುಂಬಲಾಯಿತು.


ಕಾರ್ಣಿಕದ ಅರ್ಥ ?
ಈ ವರ್ಷ ಮಳೆ, ಬೆಳೆ ಚನ್ನಾಗಿ ಆಗಿ ಎಲ್ಲರಿಗೂ ಒಳ್ಳೆಯದಾಗುವದು ಎಂಬುದು ಕಾರ್ಣಿಕದ ತಾತ್ಪರ್ಯ ಎಂದು ನೆರೆದ ಭಕ್ತ ಸಮೂಹ ವಿಮರ್ಶೆ ಮಾಡಿದರು. ನಂತರ ಮೈಲಾರಲಿಂಗೇಶ್ವರ ದೇವಸ್ಥಾನ ಎದುರಿಗೆ ಗ್ರಾಮದ ಗೊರವಯ್ಯರಾದ ಮಾಲತೇಶ ಓಲೇಕಾರ, ಮಂಜುನಾಥ ಭೀಮನವರ, ದೇವೇಂದ್ರಪ್ಪ ಕಾಳಿ, ಅಣ್ಣಯ್ಯ ಪೂಜಾರ, ಶಿವುಕುಮಾರ ಸುಣಗಾರ, ನಿಂಗಪ್ಪ ಕಾಳಿ ಅವರು ಕಬ್ಬಿಣದ ಸರಪಳಿಗಳನ್ನು ಹರೆಯುವ ಮೂಲಕ ಸರಪಳಿ ಪವಾಡ ನಡೆಸಿದರು. ನಂತರ ಮಹಾಪ್ರಸಾದ ಜರುಗಿತು.
ಮುತ್ತಿನ ಗಿಣಿ: ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಎಂಬುದು ಮತ್ತೊಂದು ಕಾರ್ಣಿಕದ ಅರ್ಥ, ಇದು ಧನಾತ್ಮಕ ಸೂಚನೆ ನೀಡುತ್ತದೆ.