ರವಿ ಶಿವಮೊಗ್ಗ
ಶಿವಮೊಗ್ಗ,ಮಾ., 23: ಶಿವಮೊಗ್ಗದಲ್ಲಿ ಅಕ್ರಮ ಮರಳು ದಂಧೆಕೋರರ ವಿರುದ್ದ ಸಿಡಿದೆದ್ದ ಶಿವಮೊಗ್ಗದ ಉಪವಿಭಾಗಾಧಿಕಾರಿ ಸತ್ಯನಾರಾಯಣ್ ಅವರು ಹಲವಾರು ದಿನಗಳಿಂದ ಅಕ್ರಮ ಮರಳು,ಮಣ್ಣು ದಂಧೆಕೋರರರ ವಿರುದ್ದ ತೊಡೆ ತಟ್ಟಿ ಮರಳು ದಂಧೆಕೋರರಿಗೆ ನಿದ್ದೆಗೆಡಿಸಿದ್ದಾರೆ. ಶಿವಮೊಗ್ಗ ಸೇರಿದಂತೆ ಕೆಲ ಹಳ್ಳಿಗಳಲ್ಲಿ ಖಾಲಿ ಇರುವ ಜಾಗಗಳಲ್ಲಿ ಅಕ್ರಮ ಮರಳು ಸಂಗ್ರಯಿಸಿ ದುಬಾರಿ ಬೆಲೆಗೆ ಮಾರಾಟ ಮಾಡುವ ಕೆಲ ವ್ಯಕ್ತಿಗಳಿಗೆ ನಡುಕ ಹುಟ್ಟಿಸಿದ್ದಾರೆ

ಕೆಲ ದಿನಗಳ ಹಿಂದೆಯೇ ಹೊಳಲೂರು ಭಾಗದಲ್ಲಿ ಹಾಡೋನಹಳ್ಳಿ ಬಳಿ ತುಂಗಾನದಿಯಲ್ಲಿ ಮರಳು ತೆಗೆದು ಸಂಗ್ರಹಿಸಿದ ನೂರಾರು ಲೋಡ್ ಅಕ್ರಮ ಮರಳನ್ನು ವಶಕ್ಕೆ ಪಡೆದು ಸ್ಥಳದಲ್ಲೆ ಜೆಸಿಬಿ ಹಾಗೂ ಲಾರಿ ಮಾಲೀಕರಿಗೆ ಬರೋಬ್ಬರಿ ಮೂರು ಲಕ್ಷದಂಡ ಸಹ ಹಾಕಿ
ಮರಳು ದಂಧೆಕೋರರಿಗೆ ಖಡಕ್ ವಾರ್ನಿಂಗ್ ನೀಡಿದ್ದರು. ಅದರೂ ಕೂಡ ಎಸಿ ಸತ್ಯನಾರಾಯಣ್ ಹಾಗೂ ತಹಶೀಲ್ದಾರ್ ವಿ.ಎಸ್ ರಾಜೀವ್ ಅವರ ಮಾತಿಗೆ ಯಾವುದೇ ರೀತಿ ತಲೆಕೆಡಿಸಿಕೊಳ್ಳದ ಕೆಲವರು ರಾಜರೋಷವಾಗಿ

ಈಗಲೂ ಸಹ ಹಗಲು, ರಾತ್ರಿ ಎನ್ನದೇ ರಸ್ತೆಗಳಲ್ಲಿ ಕೆಲವೇ ಕೆಲವು ಪೊಲೀಸರಿಗೆ ಒಂದು ಸಾವಿರ , ಎರಡು ಸಾವಿರ , ಮಾಮೂಲಿಯನ್ನು ನೀಡುತ್ತಾ ಮರಳನ್ನು ನಗರ ಸೇರಿದಂತೆ ಹಳ್ಳಿಗಳಿಗೆ ಸಾಗಾಟ ಮಾಡುತ್ತಿದ್ದಾರೆ ಎಂಬ ಬಹಳಷ್ಟು ಅರೋಪಗಳಿವೆ. ಇದರಲ್ಲಿ ಶಾಸಕರೊಬ್ಬರ ಮಗನ ವ್ಯವಹಾರ ನಡೆಯುತ್ತಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.
ಯಾರ ಮಾತಿಗೂ ಬಗ್ಗದ, ಜಗ್ಗದ, ಯಾವ ರಾಜಕಾರಣಿಗಳ ಮಾತಿಗೆ ಕೇರ್ ಮಾಡದ ಎಸಿಯವರು ಜಿಲ್ಲೆಯ ಖಾಲಿ ಜಾಗಗಳಲ್ಲಿ ಅಕ್ರಮವಾಗಿ ಸಂಗ್ರಹಿಸಿದ ಮರಳನ್ನು ಹುಡುಕಿ ಹುಡುಕಿ ವಶಕ್ಕೆ ಪಡೆಯುದ್ದರೂ ಮರಳು ಮಾಲೀಕರು ಮರಳು ತಮ್ಮದೆಂದು ಬರುತ್ತಿಲ್ಲ
ಇತ್ತೀಚೆಗೆ ನ್ಯೂಮಂಡ್ಲಿಯ ಸರ್ವೆ ನಂ ೫ , ಹಾಗೂ ೧೫೯, ಮತ್ತು ೧೬೧, ರಲ್ಲಿ ಬರೋಬ್ಬರಿ ೩೦೦ ಮೆಟ್ರಿಕ್ ಟನ್ ಸಂಗ್ರಹಿಸಿದ ಅಕ್ರಮ ಮರಳಿನ ಮೇಲೆ ದಾಳಿ ನಡೆಸಿ ವಶಕ್ಕೆ ಪಡೆದು ಪ್ರೀಡಂ ಪಾರ್ಕ್ನಲ್ಲಿ ಸಂಗ್ರಹಿಸಿದ್ದಾರೆ.
ಮರಳು ಕ್ವಾರೆಗಳು ಟೆಂಡರ್ ಕರೆಯದೇ ಇದ್ದರೂ ಸಹ ಮರಳು ಎಲ್ಲಿಂದ ಬರುತ್ತಿದೆ ಯಾವ ಕ್ವಾರೆಯಿಂದ ಬರುತ್ತಿದೆ. ಇದರ ಹಿಂದೆ ಯಾರಿದ್ದಾರೆ ಯಾರ ಅನುಮತಿ ಮೇರೆಗೆ ಮರಳು ಜಿಲ್ಲೆಯಲ್ಲಿ ರಾಜರೋಷವಾಗಿ ಖಾಲಿ ಜಾಗಗಗಳಲ್ಲಿ
ಸಂಗ್ರಹವಾಗುತ್ತಿದೆ, ಈ ಅಕ್ರಮ ಮರಳು ದಂಧೆಕೋರರಿಗೆ ಯಾರ ರಕ್ಷೆಯಿದೇ? ಅಧಿಕಾರಿಗಳದ್ದಾ ಅಥವಾ ರಾಜಕಾರಣಿಗಳದ್ದಾ? ಯಾವ್ಯಾವ ಅಧಿಕಾರಿಗಳಿಗೆ ತಿಂಗಳಿಗೆ ಎಷ್ಟೆಷ್ಟು ಮಾಮೂಲಿ ಪಿಕ್ಸ್ ಅಗಿದೆ
ಎಂಬುದೇ ಬಹುದೊಡ್ಡ ಯಕ್ಷ ಪ್ರಶ್ನೆಯಾಗಿದೆ ? ಈ ಪ್ರಶ್ನೆಗೆ ಉತ್ತರಿಸಬೇಕಾದಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮಲಗಿದೆಯಾ. ಜಿಲ್ಲಾಧಿಕಾರಿಗಳು, ಎಸ್ಪಿ , ಹಾಗೂ ಸಂಬಂದಪಟ್ಟ ಅಧಿಕಾರಿಗಳು ಇತ್ತ ಗಮನಿಸಬೇಕು ಎಂಬುದು ಸಾರ್ವಜನಿಕರ ಅಭಿಪ್ರಾಯ.
ಜಿಲ್ಲೆಯಲ್ಲಿ ಒಳ್ಳೆಯ ಪ್ರಮಾಣಿಕ ಪೊಲೀಸ್ ಅಧಿಕಾರಿಗಳಿದ್ದಾರೆ. ಅದರೆ ಕೆಲ ಪೊಲೀಸರು ಟ್ರಾಫಿಕ್ನಲ್ಲಿ ಬೈಕ್ ಸವಾರರ ಮೇಲೆ ತೋರುವ ಬಂಡ ದೈರ್ಯವನ್ನು ಅಕ್ರಮ ಮರಳು ಸಾಗಾಟ ಮಾಡುವ ಲಾರಿ ಮಾಲೀಕರ ಮೇಲೆ ಏಕೆ ತೋರುತ್ತಿಲ್ಲ? ಅಕ್ರಮ ಮರಳುದಂಧೆ ಮಾಡುವ ಲಾರಿ ಮಾಲೀಕರು ನೀಡುವ ಮಾಮೂಲಿಗಾಗಿ ಕೈ ಒಡ್ಡಿ ಲಾರಿಗಳಿಗೆ ಯಾವುದೇ ಕೇಸ್ ಹಾಕದೇ ಲಾರಿಗಳನ್ನು ಕಳುಹಿಸಿಕೊಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ.