ಶಿವಮೊಗ್ಗ : ನಗರದ ಗೋಪಿ ವೃತ್ತ ಮಲ್ಲಿಕಾರ್ಜುನ ಚಿತ್ರಮಂದಿರ ಎದುರು ಕರ್ನಾಟಕ ರತ್ನ ಅಪ್ಪು ಪುನೀತ್ ರಾಜಕುಮಾರ್ ರವರ 51ನೆ ಹುಟ್ಟು ಹಬ್ಬದ ಪ್ರಯುಕ್ತ ಸುಮಾರು ಐದು ಸಾವಿರ ಜನರಿಗೆ ವೆಜಿಟೆಬಲ್ ಧಮ್ ಬಿರಿಯಾನಿ ಹಾಗೂ ಜ್ಯೂಸ್ ವ್ಯವಸ್ಥೆಯನ್ನು ಅಪ್ಪು ಅಭಿಮಾನಿಗಳ ವತಿಯಿಂದ ನೆರವೇರಿತು ವಿಶೇಷವೆಂದರೆ ಅಡುಗೆ ಅನಿಲ ಕೊರತೆಯಿದ್ದು ಸೌದೆ ಕಟ್ಟಿಗೆ ಒಲೆ ಇಂದ ಅಡುಗೆ ಮಾಡಿ ಕೇಕ್ ಕಟ್ ಮಾಡುವ ಮೂಲಕ ಪುನೀತ್ ರಾಜಕುಮಾರ್ ರವರ ಹುಟ್ಟು ಹಬ್ಬ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿದ್ದಂತಹ ಹಾಗೂ ಮಾಜಿ ಮಹಾನಗರ ಪಾಲಿಕೆ ಸದಸ್ಯರಾದ ಹೆಚ್ ಸಿ ಯೋಗೇಶ್ ರವರು ಹಾಗೂ ಕಾರ್ಯಕ್ರಮ ಆಯೋಜಿಸಿದ ಅಪ್ಪು ಅಭಿಮಾನಿಗಳಾದ ಮಧುಸೂದನ್,ಜಗದೀಶ್, ಚಿರಂಜೀವಿ ಬಾಬು, ಎಂ.ಎಸ್.ಶಿವಕುಮಾರ್, ಡಿ.ಜಿ.ಕಿರಣ್, ಭಾನುಪ್ರಸಾದ್ ರವರು ಹಾಗೂ ಹಲವಾರು ಮಂದಿ ಅಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.