ಶಿವಮೊಗ್ಗ, ಮಾರ್ಚ್ 14, 2026: ಭಾರತದ ಪ್ರಮುಖ ನಗರ ಗ್ಯಾಸ್ ವಿತರಣ ಕಂಪನಿಗಳಲ್ಲಿ ಒಂದಾದ ಥಿಂಕ್ ಗ್ಯಾಸ್, ಈ ಪ್ರದೇಶದಲ್ಲಿ ಕಂಪ್ರಸ್ಡ್ ನ್ಯಾಚುರಲ್ ಗ್ಯಾಸ್ (ಸಿಎನ್ ಜಿ) ಮತ್ತು ಪೈಪ್ಡ್ ನ್ಯಾಚುರಲ್ ಗ್ಯಾಸ್ (ಪಿಎನ್ ಜಿ) ಸರಬರಾಜು ಸ್ಥಿರವಾಗಿದ್ದು, ಪ್ರಸ್ತುತ ದರಗಳಲ್ಲಿ ಯಾವುದೇ ಬದಲಾವಣೆ ಇಲ್ಲದೆ ತನ್ನ ವಿತರಣಾ ಜಾಲದಾದ್ಯಂತ ಸಾಮಾನ್ಯ ಕಾರ್ಯಾಚರಣೆಗಳನ್ನು ಮುಂದುವರಿಸುತ್ತಿದೆ ಎಂದು ಗ್ರಾಹಕರಿಗೆ ಭರವಸೆ ನೀಡಿದೆ.

ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಉಂಟಾದ ಅಸ್ಥಿರತೆಯ ಬಗ್ಗೆ ವ್ಯಕ್ತವಾಗುತ್ತಿರುವ ಆತಂಕಗಳನ್ನು ಗಮನದಲ್ಲಿಟ್ಟುಕೊಂಡು, ಕಂಪನಿಯು ತನ್ನ ಕಾರ್ಯಾಚರಣೆ ಪ್ರದೇಶಗಳಲ್ಲಿ ಗ್ಯಾಸ್ ಸರಬರಾಜಿನಲ್ಲಿ ಯಾವುದೇ ವ್ಯತ್ಯಯ ಇಲ್ಲ ಎಂದು ತಿಳಿಸಿದೆ. ಗೃಹ ಬಳಕೆದಾರರು, ಅಗತ್ಯ ಸೇವೆಗಳು ಹಾಗೂ ಸಾರಿಗೆ ಕ್ಷೇತ್ರದ ಗ್ರಾಹಕರಿಗೆ ಸಿಎನ್ ಜಿ ಮತ್ತು ಪಿಎನ್ ಜಿ ಸೇವೆಗಳು ಎಂದಿನಂತೆ ಮುಂದುವರಿಯುತ್ತಿವೆ ಮತ್ತು ಪ್ರಸ್ತುತ ದರಗಳಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಕಂಪನಿ ತಿಳಿಸಿದೆ.
ಜಾಗತಿಕ ಇಂಧನ ಪರಿಸ್ಥಿತಿಗಳ ಕುರಿತು ಪ್ರತಿಕ್ರಿಯಿಸಿದ ಥಿಂಕ್ ಗ್ಯಾಸ್ ನ ಚೀಫ್ ಮಾರ್ಕೆಟಿಂಗ್ & ಕಮರ್ಷಿಯಲ್ ಆಫೀಸರ್ ವಿನುಕುಮಾರ ಬಾಲಕೃಷ್ಣನ್ ಹೇಳಿದರು:
“1955ರ ಅಗತ್ಯ ವಸ್ತುಗಳ ಕಾಯ್ದೆ ಅಡಿಯಲ್ಲಿ ಇರುವ ವಿಧಿಗಳನ್ನು ಜಾರಿಗೆ ತಂದು ನ್ಯಾಚುರಲ್ ಗ್ಯಾಸ್, 2026 ಅನ್ನು ಹೊರಡಿಸುವ ಭಾರತದ ಸರ್ಕಾರದ ನಿರ್ಧಾರವು ಸಹಜ ಅನಿಲದ ಲಭ್ಯತೆಯನ್ನು ರಕ್ಷಿಸಲು ಕೈಗೊಂಡ ಮುನ್ನೆಚ್ಚರಿಕಾ ಕ್ರಮವನ್ನು ಪ್ರತಿಬಿಂಬಿಸುತ್ತದೆ. ಮಧ್ಯಪ್ರಾಚ್ಯದಲ್ಲಿ ಉಂಟಾದ ಯುದ್ಧಸಮಾನ ಪರಿಸ್ಥಿತಿಯಿಂದ ಮೂಲಕ LNG ಸಾಗಣೆಯಲ್ಲಿ ವ್ಯತ್ಯಯ ಉಂಟಾಗಿದ್ದು, ಕೆಲವು ಪೂರೈಕೆದಾರರು ಘೋಷಿಸಿರುವುದು ಈ ಪರಿಸ್ಥಿತಿಗೆ ಕಾರಣವಾಗಿದೆ. ಥಿಂಕ್ ಗ್ಯಾಸ್ ಸಂಸ್ಥೆಯಾಗಿ, ಸರ್ಕಾರದ ಆದ್ಯತಾ ಹಂಚಿಕೆ ಚೌಕಟ್ಟಿನ ಪ್ರಕಾರ ಗೃಹ ಬಳಕೆಯ ಅಡುಗೆ ಅಗತ್ಯಗಳಿಗೆ ಪಿಎನ್ ಜಿ ಗ್ರಾಹಕರಿಗೂ ಹಾಗೂ ಸಾರಿಗೆ ಕ್ಷೇತ್ರಕ್ಕೆ ಸಿಎನ್ ಜಿ ಸರಬರಾಜನ್ನು ನಿರಂತರವಾಗಿ ಒದಗಿಸುವುದೇ ನಮ್ಮ ತಕ್ಷಣದ ಆದ್ಯತೆಯಾಗಿದೆ.”
ಕಂಪನಿಯು ಗ್ರಾಹಕರಿಗೆ ತಿಳಿಸಿರುವುದೇನೆಂದರೆ ಶಿವಮೊಗ್ಗದಲ್ಲಿ ಸಿಎನ್ ಜಿ ಸ್ಟೇಷನ್ಗಳು ಮತ್ತು ಪಿಎನ್ ಜಿ ಸೇವೆಗಳು ಸಾಮಾನ್ಯವಾಗಿ ಕಾರ್ಯನಿರ್ವಹಿಸುತ್ತಿವೆ. ಆದ್ದರಿಂದ ಗ್ರಾಹಕರು ಯಾವುದೇ ಚಿಂತೆ ಇಲ್ಲದೆ ಸಹಜ ಅನಿಲ ಸೇವೆಗಳನ್ನು ಮುಂದುವರಿಸಿ ಬಳಸಬಹುದು.
ಪ್ರಸ್ತುತ ಪಿಎನ್ ಜಿ ಯ ಚಿಲ್ಲರೆ ಬೆಲೆ ಒಂದು ಎಸ್ ಸಿಎಮ್ ಗೆ ₹51 ಆಗಿದ್ದು, ಸಿಎನ್ ಜಿ ಯ ಬೆಲೆ ಒಂದು ಎಸ್ ಸಿಎಮ್ ಗೆ ₹85 ಆಗಿದೆ.