ಶಿವಮೊಗ್ಗ : ಪೈನಾನ್ಸೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದ ಯುವಕನೋರ್ವನ ಪ್ರೇಯಸಿ ಬೇರೆಯವರೊಂದಿಗೆ ಮದುವೆಯಾದ ಹಿನ್ನೆಲೆಯಲ್ಲಿ ತಾನಿದ್ದ ಕೊಠಡಿಯಲ್ಲಿ ನೇಣಿಗೆ ಶರಣಾದ ಘಟನೆ ಇಂದು ನಡೆದಿದೆ.
ಪೈನಾನ್ಸ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸಚಿನ್ ಜಯನಗರದ ರೂಮಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಹರಿಹರ ತಾಲ್ಲೂಕು ಕವಲತ್ತಿಯ ಸುಮಾರು ಇಪ್ಪತೈದು ವರುಷದ ಸಚಿನ್ ತನ್ನ ಪ್ರೇಯಸಿ ಕಳೆದ ವಾರ ಮದುವೆಯಾದ ದಿನದಿಂದ ಮಂಕುಕವಿದವನಂತಿದ್ದ ಎನ್ನಲಾಗಿದೆ. ಈ ಬಗ್ಗೆ ಜಯನಗರ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.