ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಾಲಾ ಸಾಕ್ಷರತಾ ಶಿಕ್ಷಣ ಸಚಿವರಾದ ಎಸ್. ಮಧು ಬಂಗಾರಪ್ಪನವರ ಹುಟ್ಟು ಹಬ್ಬದ ಅಂಗವಾಗಿ ಇಂದು ನಗರದ ಮೆಗಾನ್ ಆಸ್ಪತ್ರೆಯಲ್ಲಿ ಶರತ್ ಮರಿಯಪ್ಪ ಸ್ನೇಹಿತರ ಬಳಗದಿಂದ ರೋಗಿಗಳಿಗೆ ಹಣ್ಣು ಬ್ರೆಡ್, ಮತ್ತು ಬಿಸ್ಕೆಟ್ಸ್ ವಿತರಣೆ ಮಾಡುವ ಮುಖಾಂತರ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಆರ್ ಪ್ರಸನ್ನ ಕುಮಾರ್, ಜಿಲ್ಲಾ ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿ ಕೆ. ರಂಗನಾಥ್, ಶಿವಾನಂದ್, ಸೂಡ ಸದಸ್ಯ ಎಂ ಪ್ರವೀಣ್ ಕುಮಾರ್, ಕಾಂಗ್ರೆಸ್ ಹಿಂದುಳಿದ ವರ್ಗಗಳ ರಾಜ್ಯ ಸಂಯೋಜಕ ಜಿ.ಡಿ. ಮಂಜುನಾಥ್, ಯುವ
ಕಾಂಗ್ರೆಸ್ನ ಮುಖಂಡರುಗಳಾದ ಹೆಚ್.ಪಿ ಗಿರೀಶ್, ವಿನಯ್ ತಾಂಧಲೆ, ಬಿ. ಲೋಕೇಶ್, ಪ್ರಮುಖರಾದ ಟಿ. ಗುರುಪ್ರಸಾದ್, ಗಿತೇಂದ್ರ ಗೌಡ, ಮಂಜು ಪುರ್ಲೆ, ಪುನೀಲ್, ಮಲ್ಲಿಕಾರ್ಜುನ್, ರಾಹಿಲ್, ಶಿವಕುಮಾರ್, ಪ್ರದೀಪ್, ಮಂಜು ಸಿಗೆಹಟ್ಟಿ, ವಿನಯ್ ಬಜಾರ್, ಮೋಹನ್, ಹಾಗೂ ಇತರರು ಇದ್ದರು.