ಶಿವಮೊಗ್ಗ : ರೋಟರಿ ಮಿಡ್ಟೌನ್ ಸೆಲ್ಫ್ ಕೇರ್ ಫೌಂಡೇಶನ್ ವತಿಯಿಂದ ಸಮಾಜಮುಖಿ ಸೇವೆಯ ಅಂಗವಾಗಿ ಕಳೆದ ಸುಮಾರು 25 ವರ್ಷಗಳಿಂದ ವಿವಿಧ ಸಾಮಾಜಿಕ ಹಾಗೂ ಆರೋಗ್ಯ ಸಂಬಂಧಿತ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬರಲಾಗುತ್ತಿದೆ.
ಈ ಹಿನ್ನಲೆಯಲ್ಲಿ, ಸಾರ್ವಜನಿಕರ ಆರೋಗ್ಯದ ಮೇಲಿನ ಕಾಳಜಿಯನ್ನು ಗಮನದಲ್ಲಿಟ್ಟುಕೊಂಡು ಡಯಾಬಿಟಿಸ್ ಸ್ಕ್ರೀನಿಂಗ್ ಹಾಗೂ ಹೃದಯ ಸಮಸ್ಯೆಗಳಿಗಾಗಿ ಇಸಿಜಿ ಸಹಿತ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ.

ಈ ಶಿಬಿರದಲ್ಲಿ ರಕ್ತದಲ್ಲಿನ ಸಕ್ಕರೆ ಪರೀಕ್ಷೆ (ಬ್ಲಡ್ ಶುಗರ್ ಟೆಸ್ಟ್) ಸೇರಿದಂತೆ ವಿವಿಧ ಪ್ರಾಥಮಿಕ ಆರೋಗ್ಯ ತಪಾಸಣೆಗಳನ್ನು ನಡೆಸಲಾಗುತ್ತದೆ. ಅನುಭವೀ ವೈದ್ಯರು ಹಾಗೂ ಆರೋಗ್ಯ ತಜ್ಞರು ಭಾಗವಹಿಸಿ, ಅಗತ್ಯ ಆರೋಗ್ಯ ಸಲಹೆ ಮತ್ತು ಮಾರ್ಗದರ್ಶನವನ್ನು ನೀಡಲಿದ್ದಾರೆ.
ದಿನಾಂಕ: 01-03-2026 (ಭಾನುವಾರ) ಸ್ಥಳ: ರೋಟರಿ ರಕ್ತನಿಧಿ ಆವರಣ, ಸಮಯ: ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 1.00ವರೆಗೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಈ ಉಚಿತ ಆರೋಗ್ಯ ಶಿಬಿರದ ಸದುಪಯೋಗವನ್ನು ಪಡೆಯಬೇಕೆಂದು ಡಾ.ಶಿವರಾಮಕೃಷ್ಣ ಹಾಗೂ ಕ್ಲಬ್ ಅಧ್ಯಕ್ಷ ಶ್ರೀ ಹರ್ಷ ಕಾಮತ್ ಅವರು ವಿನಂತಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : ಕಾರ್ಯದರ್ಶಿ, ಜಿ. ಎನ್. ಮೂರ್ತಿ 9448038215.