ಸಾಗರ(ಶಿವಮೊಗ್ಗ),ಫೆ,೨೭:ಕರ್ನಾಟಕದ ಚಿಕ್ಕ ತಿರುಪತಿಯಂತೆ ಸಾಗರದಲ್ಲಿ ನಿರ್ಮಾಣವಾಗುತ್ತಿರುವ ಶ್ರೀ ಅಯ್ಯಪ್ಪನ ಸನ್ನಿಧಿ ಮಲೆನಾಡಿನ ಚಿಕ್ಕ ಶಬರಿಮಲೆಯಾಗಬೇಕು ಎಂದು ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತಿ ಸ್ವಾಮಿಗಳು ನುಡಿದರು.
ಅವರು ಸಾಗರ ಪಟ್ಟಣದ ಗಾಂಧಿನಗರದ ಭೀಮನಕೋಣೆ ರಸ್ತೆಯಲ್ಲಿನ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ ಟ್ರಸ್ಟ್ ಆಶ್ರಯದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ನವನಿರ್ಮಾಣ ಭೂಪರಿಗ್ರಹ ಹಾಗೂ ಭೂಮಿ ಪೂಜಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಆಶಿರ್ವಚನ ನೀಡಿದರು.
ಇಲ್ಲಿನ ಭೂಪರಿಗ್ರಹ ಶಾಸ್ತ್ರ ಪದ್ಧತಿ ತುಂಬ ಸಂತೋಷವುಂಟುಮಾಡಿದೆ.ಇಂದು ಗ್ರಾಮಾಂತರ ಪ್ರದೇಶಗಳಲ್ಲಿಯೂ ನಶಿಸಿ ಹೋಗಿರುವಂತಹ ಜೋಡೆತ್ತುಗಳಿಗೆ ಮರದ ನೇಗಿಲು ಅಳವಡಿಸಿ ನೈಜ್ಯವಾಗಿ ಭೂಮಿ ಉಳುಮೆ ಮಾಡುವ ಮೂಲಕ ಸಾಗರ ಪಟ್ಟಣದಲ್ಲಿ ಅಪರೂಪದ ಪದ್ಧತಿಯನ್ನು ಶಾಸ್ತ್ರದ ಪ್ರಕಾರ ನೆರವೇರಿಸಿರುವುದು ಕಣ್ಯಂಬಿಕೊಳ್ಳುವ ಸುವರ್ಣಾವಕಾಶ ಎಂದು ಹರ್ಷ ವ್ಯಕ್ತಪಡಿಸಿದರು.
ಜೋಡೆತ್ತುಗಳು ಅಪ್ಪಟ ಮಲೆನಾಡು ಕಗ್ಗ ಅವಳಿಜವಳಿಯಂತಿರುವುದು ಜೋಡಿಯ ವಿಶೇಷತೆ.ಇಲ್ಲಿನ ದೇವಸ್ಥಾನ ನಿರ್ಮಾಣಕ್ಕೆ ಉತ್ತಮ ಸಮರ್ಥವಾದ ಶಾಸ್ತ್ರೊಕ್ತವಾಗಿರುವ ಸಲಹೆ ಮಾರ್ಗದರ್ಶನ ಮಾಡುವಂತಹ ತಂತ್ರಿಗಳು ಸಿಕ್ಕಿರುವುದು ದೇವಸ್ಥಾನ ನಿರ್ಮಾಣಕ್ಕೆ ಮುಂದಾಗಿರುವ ಸಮಿತಿಯವರ ಪುಣ್ಯ ಎಂದರು.

ಸಾಗರದಂತಹ ನಗರಪ್ರದೇಶದಲ್ಲಿ ವಿಶಾಲವಾದ ಜಾಗ ಅಯ್ಯಪ್ಪಸ್ವಾಮಿ ದೇವಸ್ಥಾನದ ಆಡಳಿತಮಂಡಳಿಗೆ ದೊರಕಿರುವುದು ವಿಶೇಷವಾಗಿದೆ.ದೇವರಿಗೆ ಮೂರ್ತಿ ಪ್ರತಿಷ್ಠಾಪನೆಗೆ ಗೋಪುರ ನಿರ್ಮಾಣಕ್ಕೆ ಸ್ವಲ್ಪ ಜಾಗ ಸಾಕಾಗುತ್ತದೆ.ಆದರೇ ಉಳಿದ ಜಾಗ ಬೇಕಾಗಿರುವುದು ಭಕ್ತರಿಗೆ.ಭಕ್ತರ ಸಭಾಂಗಣ,ಕಲ್ಯಾಣಮಂಟಪ ಭೋಜನಾಲಯ,ವಸತಿ ಸೇರಿದಂತೆ ವಾಣಿಜ್ಯವಹಿವಾಟಿಗೂ ಸೇರಿದಂತೆ ಜಾಗದ ಸದ್ಬಳಕೆಯಾಗಬೇಕು ಎಂದು ಮಾರ್ಗದರ್ಶನ ಮಾಡಿದರು.
ನೇಗಿಲ ಗೆರೆಯೇ ಬಾಗಿಲು ತೆರೆಯೆ ಬರುವಳು ಸಿರಿದೇವಿ ನಿರ್ಮಾನವಾಗುವುದು ವೈಕುಂಠ ಎಂಬ ನುಡಿಗಳ ಮೂಲಕ ಈ ಹಿಂದೆ ದೇವಸ್ಥಾನ ನಿರ್ಮಾಣಕ್ಕೆ ಬಂಗಾರದ ನೇಗಿಲು ಬಳಕೆ ಮಾಡುವ ಮೂಲಕ ಭೂಮಿಯ ತೆರೆದು ಬೀಜಗಲ ಬಿತ್ತಿ ಬೆಳೆ ಬೆಳೆದು ನಂತರ ದೇವಸ್ಥಾನ ನಿರ್ಮಿಸುವ ಪದ್ಧತಿ ಇಂದು ಅಯ್ಯಪ್ಪನ ಸನ್ನಿಧಿಯಲ್ಲಿ ಅನುಸರಿಸುತ್ತಿರುವುದು ಅವಿಸ್ಮರಣೀಯ ಕ್ರಮ ಎಂದರು.
ಸಾಗರದಲ್ಲಿ ಮುತ್ತು ರತ್ನಗಳು ದೊರೆಯುವಂತೆ ಇಲ್ಲಿನ ಸಾಗರದಲ್ಲಿಯೂ ಧಾರ್ಮಿಕ,ಸಾಮಾಜಿಕ ಕಾರ್ಯಗಳಿಗೆ ಕೈಜೋಡಿಸುವ ರತ್ನಗಳಂತಹ ವ್ಯಕ್ತಿತ್ವದವರು ಸಹಕಾರ ನೀಡುತ್ತಾರೆ.ಈ ಸ್ಥಳ ನಂದನವನವಾಗಲಿ,ಚಿಕ್ಕ ಶಬರಿಮಲೆಯನ್ನಾಗಿ ಪರಿವರ್ತಿಸಿ ಲೋಕಾರ್ಪಣೆಗೆ ಮತ್ತೆ ನಾವು ಬರುತ್ತೇವೆ.ನೀವೆಲ್ಲರೂ ಸಾಗರೋಪಾದಿಯಲ್ಲಿ ಸ್ಥಳದಲ್ಲಿ ಸೇರುವಂತಾಗಲಿ ಎಂದು ಆಶಿರ್ವದಿಸಿದರು.
ಕ್ಷೇತ್ರ ಶಾಸಕ ಗೊಪಾಲಕೃಷ್ಣಬೇಳೂರು ಮಾತನಾಡಿ ಶಾಸಕರ ಅನುದಾನದ ಜೊತೆಗೆ ಸರ್ಕಾರದಿಂದ ಅನುದಾನ ಕೊಡಿಸುತ್ತೇನೆ ಎಂದು ಭರವಸೆಯ ಮಾತುಗಳನ್ನಾಡಿದರು.
ಮಾಜಿಶಾಸಕ ಹೆಚ್.ಹಾಲಪ್ಪ ಹರತಾಳು ಮಾತನಾಡಿ ಮಲಿಯಾಳಿ ಸಮುದಾಯ ಪರಿಶ್ರಮದ ವ್ಯಕ್ತಿಗಳು.ಇಲ್ಲಿನ ಅಯ್ಯಪ್ಪನ ಸನ್ನಿಧಿ ಹೆಸರಿನಲ್ಲಿ ಸಂಘಟಿತರಾಗುತ್ತಿದ್ದಾರೆ.ಸಂಘಟನಾಶಕ್ತಿ ಹೆಚ್ಚಿಸಿಕೊಂಡು ಸತ್ಕಾರ್ಯ ಮುಂದುವರಿಸಲಿ ಎಂದರು.
ಈ ಸಂದರ್ಭದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ ಟ್ರಸ್ಟಿನ ಗೌರವಾಧ್ಯಕ್ಷ ಆರ್.ಚಂದ್ರ,ಅಧ್ಯಕ್ಷರು ಪಿ.ಆರ್.ರವೀಂದ್ರನ್,ಶ್ರೀ ಮಹಾಗಣಪತಿ ದೇವಸ್ಥಾನ ವ್ಯವಸ್ಥಾಪಕ ಸಮಿತಿ ಅಧ್ಯಕ್ಷ ಟಿ.ವಿ.ಪಾಂಡುರಂಗ, ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ ಟ್ರಸ್ಟಿನ ಉಪಾಧ್ಯಕ್ಷ ಪ್ರಸಾದ್ ಎಸ್,ಪ್ರಧಾನಕಾರ್ಯದರ್ಶಿ ಸುನೀಲ್ಕುಮಾರ್,ಸಹಕಾರ್ಯದರ್ಶಿ ಮನೂಜ್,ಖಜಾಂಚಿ ಮುಖೇಶ್,ಟ್ರಸ್ಟಿಗಳಾದ ಮುಕೇಶ್,ಜಿ.ಚಂದ್ರ,ರಾಜುನಾಯರ್,ಸಿ.ಎಸ್.ವಿಜಯಕುಮಾರ್,ಗುರುಸ್ವಾಮಿ ರಾಜುನಾಯರ್ ಉಪಸ್ಥಿತರಿದ್ದರು.ಐಸಿರಿ ಸುಬ್ಬಣ್ಣ ಕಾರ್ಯಕ್ರಮ ನಿರೂಪಿಸಿದರು.