ಶಿವಮೊಗ್ಗ,ಫೆ.24:
ಕೋಟೆ ಶ್ರೀ ಮಾರಿಕಾಂಬ ದೇವಿ ಜಾತ್ರೆಗೆ ವಿದ್ಯುಕ್ತ ಚಾಲನೆ ಸಿಕ್ಕಿದೆ. ಪರದೆ ಸರಿದು ಪ್ರಥಮ ಪೂಜೆ ನೆರವೇರುತ್ತಿದ್ದಂತೆ ಭಕ್ತರು ಘೋಷಣೆಗಳನ್ನು ಕೂಗಿ, ದೇವಿಗೆ ನಮಸ್ಕರಿಸಿದರು. ಬೆಳಗ್ಗೆಯಿಂದ ಗಾಂಧಿ ಬಜಾರ್ನಲ್ಲಿ ಮಾರಿಕಾಂಬ ದೇವಿ ದರ್ಶನ ಆರಂಭವಾಗಿದೆ.

ಸರಿದ ಪರದೆ, ಮೊಳಗಿದ ಘೋಷಣೆ:
ಗಾಂಧಿ ಬಜಾರ್ ತಾಯಿಯ ತವರು ಮನೆ ಎಂಬ ನಂಬಿಕೆ ಇದೆ. ಈ ಹಿನ್ನೆಲೆ ಗಾಂಧಿ ಬಜಾರ್ನಲ್ಲಿ ಮಂಟಪ ನಿರ್ಮಿಸಿ ಶ್ರೀ ಮಾರಿಕಾಂಬ ದೇವಿಯನ್ನು ಪ್ರತಿಷ್ಠಾಪಿಸಲಾಗಿದೆ. ಪ್ರಥಮ ಪೂಜೆಗೂ ಮುನ್ನ ಪರದೆ ಸರಿಸಲಾಯಿತು. ಈ ಸಂದರ್ಭ ಭಕ್ತರು ಘೋಷಣೆಗಳನ್ನು ಮೊಗಳಗಿಸಿದರು.
ಪ್ರಥಮ ಪೂಜೆ ಸಲ್ಲಿಸಿ ಭಕ್ತರು ಪುನೀತರಾದರು.
ಬಿಬಿ ರಸ್ತೆಯ ಬ್ರಾಹ್ಮಣ ಸಮಾಜದ ನಾಡಿಗರ ಕುಟುಂಬವರು ಕೋಟೆ ಶ್ರೀ ಮಾರಿಕಾಂಬ ದೇವಿಗೆ ಪ್ರಥಮ ಪೂಜೆ ಸಲ್ಲಿಸಿದರು. ಮಂಗಳಾರತಿ ಬೆಳಗುತ್ತಿರುವುದನ್ನು ಕಂಡು ಭಕ್ತರು ಪುನೀತರಾದರು. ದೇವಿಗೆ ಪ್ರಾರ್ಥನೆ ಸಲ್ಲಿಸಿದರು.

ಹರಿದು ಬಂತು ಭಕ್ತ ಸಾಗರ ತಾಯಿಯ ತವರು ಗಾಂಧಿ ಬಜಾರ್ನಲ್ಲಿ ದರ್ಶನ ಪಡೆಯಲು ಭಕ್ತ ಸಾಗರ ಹರಿದು ಬಂದಿದೆ. ಬೆಳಗಿನ ಜಾವದಿಂದಲೇ ಸರತಿಯಲ್ಲಿ ನಿಂತಿರುವ ಜನರು, ದೇವಿಯ ದರ್ಶನ ಪಡೆಯುತ್ತಿದ್ದಾರೆ. ಪ್ರಯೋಜನಕ್ಕೆ ಬರದ ಪಾಸ್ ಗಳು, ಪತ್ರಕರ್ತರದೂ ಪೇಚಾಟ, ಕ್ಯಾಮರಾ ಇದ್ದರಷ್ಟೇ ಪತ್ರಕರ್ತರಾ? ಬ್ಯಾಡ್ಜ್ ಗಳು ಅವರವರ ಕುಟುಂಬಗಳಿಗೆ ಸೀಮಿತವಾಗಿವೆ ಎಂಬ ಆರೋಪ ಕೇಳಿಬಂತು.
ಸೂರ್ಯೋದಯಕ್ಕೂ ಮೊದಲೇ ಸರತಿ ಸಾಲು ಕೃಷ್ಣಕೆಫೆವರೆಗೆ ಇತ್ತು. ಈಗ ಒಂದೆಡೆ ಬಸ್ ನಿಲ್ದಾಣ, ಮತ್ತೊಂದೆಡೆ ಹೊಳೆ ಬಸ್ ನಿಲ್ದಾಣ ದಾಟಿದೆ.

ಇನ್ನು, ಭಕ್ತರು ಸರಾಗವಾಗಿ ದರ್ಶನ ಪಡೆಯಲು ಗಾಂಧಿ ಬಜಾರ್ನಲ್ಲಿ ಬ್ಯಾರಿಕೇಡ್ಗಳನ್ನು ಅಳವಡಿಸಲಾಗಿದೆ. ಗೊಂದಲ ಆಗದಂತೆ ತಡೆಯಲು ಸ್ವಯಂ ಸೇವಕರು, ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.
