ಶಿವಮೊಗ್ಗ, ಫೆ.18:
ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತ ಮಾಯಣ್ಣಗೌಡ ಅವರ ನಿರ್ದೇಶನದಂತೆ ಸಾರ್ವಜನಿಕ ಪ್ರದೇಶದಲ್ಲಿ ಅನಧಿಕೃತವಾಗಿ ಬೈಪಾಸ್ ರಸ್ತೆಯಲ್ಲಿ ತ್ಯಾಜ್ಯ ಸುರಿಯುತ್ತಿರುವವರಿಗೆ ದಂಡ ವಿಧಿಸುವ ವಿಷಯದಲ್ಲಿ ಪಾಲಿಕೆಯ ಆರೋಗ್ಯ ಇಲಾಖೆ ಬಿಗಿ ನಿಲುವಿನ ಕ್ರಮ ಕೈಗೊಂಡಿದೆ.

ಇನ್ನು ಮುಂದೆ ಈ ರೀತಿ ಸಾರ್ವಜನಿಕ ಪ್ರದೇಶದಲ್ಲಿ ಎಲ್ಲಿಯೂ ಕೂಡ ಸುರಿಯದಂತೆ ಆರೋಗ್ಯ ನಿರೀಕ್ಷಕರಾದ ವಿಕಾಸ್ ಆರ್ ಮತ್ತು ಶಿವಮೂರ್ತಪ್ಪ ಲಕ್ಕಣ್ಣನವರ್ ರವರು ತಿಳುವಳಿಕೆ ನೀಡಿ ಇಂದು ಅಂತಿಮ ಎಚ್ಚರಿಕೆ ನೀಡಿದರು.
