ಶಿವಮೊಗ್ಗ ಫೆಬ್ರವರಿ 09 ಡೈರೆಕ್ಟೋರೇಟ್ ಜನರಲ್ ರಿಸೆಟ್ಲ್ ಮೆಂಟ್ ಇವರ ಪ್ರಾಯೋಜಕತ್ವದಲ್ಲಿ ಮಾಜಿ ಸೈನಿಕರಿಗಾಗಿ ಮದ್ರಾಸ್ ಎಂಜಿನಿಯರಿಂಗ್ ಗ್ರೂಪ್ ಅಂಡ್ ಸೆಂಟರ್, ಬೆಂಗಳೂರು ಇಲ್ಲಿ ಫೆ 27 ರಂದು ಉದ್ಯೋಗ ಮೇಳವನ್ನು ಹಮ್ಮಿಕೊಳ್ಳಲಾಗಿದೆ.

ಆಸಕ್ತ ಮಾಜಿ ಸೈನಿಕರು, ಮಾಜಿ ಸೈನಿಕ ಗುರುತಿನ ಚೀಟಿ ಮತ್ತು ಬಯೊಡೇಟದ 5 ಪ್ರತಿಗಳೊಂದಿಗೆ ನೇರವಾಗಿ

ಭಾಗವಹಿಸುವಂತೆ ಶಿವಮೊಗ್ಗ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಹೆಚ್ಚಿನ ವಿವರಗಳಿಗೆ ದೂರವಾಣಿ ಸಂಖ್ಯೆ 020-26341217/011-20863432 ಹಾಗೂ ವೆಬ್ಸೈಟ್ drzspne@desw.gov.in,/ seopadgr@desw.gov.in ಅನ್ನು ಸಂಪರ್ಕಿಸಬಹುದು.