ಶಿವಮೊಗ್ಗ, ಫೆ.06:
ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ , ರವಿವರ್ಮ ಬೀದಿ ಸೀಗೆಹಟ್ಟಿಯಲ್ಲಿ ಇಂದು ಎಸ್. ಬಿ.ಎಂ 2.0 ನಗರ, ಯೋಜನೆಯಡಿ ಸ್ವಚ್ಚತಾ ಅರಿವು (ಘನ ತ್ಯಾಜ್ಯ ನಿರ್ವಹಣೆ) ಕುರಿತು ಕಾರ್ಯಕ್ರಮವನ್ನು ಆಯೋಜಿಸಿದ್ದು ಶಾಲಾ ಮಕ್ಕಳಿಗೆ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಲಾಯಿತು.

ಹಸಿ – ತ್ಯಾಜ್ಯ, ಒಣ – ತ್ಯಾಜ್ಯ, ಗೃಹೋತ್ಪಾದಕ ಹಾನಿಕಾರಕ ತ್ಯಾಜ್ಯ ವನ್ನು ಪ್ರತ್ಯೇಕವಾಗಿ ಬೇರ್ಪಡಿಸಿ ಕಸ ಸಂಗ್ರಹಣ ವಾಹನಕ್ಕೆ ನೀಡಬೇಕು ಎಂದು ಅರಿವು ಮೂಡಿಸಲಾಯಿತು.
ಪ್ಲಾಸ್ಟಿಕ್ ನಿಷೇಧ, ಹಾಗೂ ನಿರ್ವಹಣೆಯ ಕುರಿತು ಜಾಗೃತಿ ಮೂಡಿಸಲಾಯಿತು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕಿ ಗಂಗಮ್ಮ , ಸಹ ಶಿಕ್ಷಕ ರಾಮಪ್ಪ, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಧನಂಜಯ್ ಮತ್ತು ರಾಜಪ್ಪ , ಮಹಾನಗರ ಪಾಲಿಕೆ ಆರೋಗ್ಯ ನಿರೀಕ್ಷಕರು ಮತ್ತು ಕಮ್ಯೂನಿಟಿ ಮೊಬಲೈಸರ್ ರವರು ಹಾಗೂ ಶಾಲಾ ಮಕ್ಕಳು ಹಾಜರಿದ್ದರು.