ಶಿವಮೊಗ್ಗ : ಕೋಟೆ ಶ್ರೀ ಮಾರಿಕಾಂಬಾ ಜಾತ್ರೆ ಪ್ರಯುಕ್ತ ಶ್ರೀ ಕೋಟೆ ಮಾರಿಕಾಂಬಾ ಗೆಳೆಯರ ಬಳಗದ ವತಿಯಿದ ಮಾರಿಕಾಂಬಾ ಕ್ರಿಕೆಟ್ ಪಂದ್ಯಾವಳಿಯನ್ನು ಫೆ.೭ ಮತ್ತು ೮ರಂದು ಬಾಪೂಜಿ ನಗರದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಆಯೋಜಿಸಲಾಗಿದೆ ಎಂದು ಬಳಗದ ಅಧ್ಯಕ್ಷ ಕಿರಣ್ ಇಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಜಾತ್ರೆ ಪ್ರಯುಕ್ತ ಇದೇ ಪ್ರಥಮ ಬಾರಿಗೆ ಟೆನ್ನಿಸ್ಬಾಲ್ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗುತ್ತಿದೆ. ಪಂದ್ಯಾವಳಿಯಲ್ಲಿ ೪೦ ತಂಡಗಳು ಭಾಗವಹಿಸಲು ಅವಕಾಶವಿದ್ದು, ಪ್ರವೇಶ ಶುಲ್ಕ ೨೦೦೦ ರೂ. ನಿಗದಿ ಪಡಿಸಲಾಗಿದೆ. ಫೆ.೬ರೊಳಗಾಗಿ ತಂಡಗಳು ಹೆಸರು ನೋಂದಾಯಿಸಲು ಕಡೆಯ ದಿನವಾಗಿದ್ದು, ಈಗಾಗಲೇ ೩೦ ತಂಡಗಳು ಹೆಸರು ನೊಂದಾಯಿಸಿವೆ ಎಂದರು.
ಪಂದ್ಯಾವಳಿಯು ಪ್ರತಿದಿನ ಬೆಳಿಗ್ಗೆ ೯ ರಿಂದ ಸಂಜೆ ೬ರವರೆಗೆ ನಡೆಯಲಿದೆ. ಶಿವಮೊಗ್ಗ ಜಿಲ್ಲೆಯ ಆಟಗಾರರಿಗೆ ಮಾತ್ರ ಅವಕಾಶವಿದೆ. ಪ್ರತೀ ಪಂದ್ಯಗಳು ನಾಕೌಟ್ ಪಂದ್ಯಗಳಾಗಿರುತ್ತದೆ. ಪ್ರತೀ ಪಂದ್ಯವು ೫ ಓವರ್ಗೆ ಸೀಮಿತವಾಗಿದ್ದು, ಪ್ರತೀ ಪಂದ್ಯಕ್ಕೂ ಪಂದ್ಯ ಪುರುಷೋತ್ತಮ ಪ್ರಶಸ್ತಿ ಇದ್ದು, ಗೆಲುವು ಸಾಧಿಸಿದ ತಂಡಗಳಿಗೆ ಪ್ರಥಮ ಬಹುಮಾನವಾಗಿ ೩೦ ಕೆ.ಜಿ. ತೂಕದ ೨ ಟಗರು, ದ್ವಿತೀಯ ೩೦ ಕೆ.ಜಿ. ತೂಕದ ಒಂದು ಟಗರು, ತೃತೀಯ ೧೦,೦೦೧ ರೂ. ಇದ್ದು ಎಲ್ಲಾ ವಿಭಾಗಗಳಿಗೂ ಆಕರ್ಷಕ ಟ್ರೋಫಿ ನೀಡಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪವನ್, ರಘು, ಸಂಜು, ಶ್ರೀಧರ್, ಕಾರ್ತಿಕ್, ಶಬರೀಶ್, ಸಂಜಯ್, ಶಿವು, ತಿಪ್ಪೇಶ್, ಸುಮನ್ ಉಪಸ್ಥಿತರಿದ್ದರು.