ಶಿವಮೊಗ್ಗ, ಫೆ.03:
ಫೆ. 4ರ ನಾಳೆ ಸಂಜೆ 5:30ಕ್ಕೆ ಶಿವಮೊಗ್ಗದ ಹೆಸರಂತ ಭರತನಾಟ್ಯ ಶಾಲೆಯಾದ ನಟನಂ ಬಾಲ ನಾಟ್ಯ ಕೇಂದ್ರದ ನರ್ತನಾಂಕುರ – 3 ಎಂಬ ಭರತನಾಟ್ಯ, ಜಾನಪದ ಹಾಗೂ ಫ್ಯೂಶನ್ ನೃತ್ಯಗಳ ಕಾರ್ಯಕ್ರಮವನ್ನು ಕುವೆಂಪುರಂಗಮಂದಿರದಲ್ಲಿ ಆಯೋಜಿಸಲಾಗಿದೆ.
ಕರ್ನಾಟಕ ಕಲಾಶ್ರೀ ವಿದ್ವಾನ್ ಡಾ. ಎಸ್ ಕೇಶವಕುಮಾರ್ ಪಿಳ್ಳೈ, ವಿದ್ವಾನ್ ಚೇತನ್ ಎಸ್, ಸಿ ಹಾಗೂ ವಿದುಷಿ ನಾಟ್ಯಶ್ರೀ ಚೇತನ್ ಇವರು ಪ್ರಸ್ತುತಪಡಿಸಲಿದ್ದಾರೆ.
ಈ ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ಮಹಾಕಾಳಿ ಸ್ತುತಿ, ಈಜಿಪ್ಟಿಯನ್ ವಿನ್ ಡ್ಯಾನ್ಸ್ ಮತ್ತು ಜಪಾನ್ ಫ್ಯಾನ್ ಡ್ಯಾನ್ಸ್ ನಡೆಯಲಿದೆ.
ಈ ಕಾರ್ಯಕ್ರಮಕ್ಕೆ ಶಿಕಾರಿಪುರದ ಶ್ರೀ ಶಾಂತಲಾ ಭರತನಾಟ್ಯ ಕೇಂದ್ರದ ಗುರು ಶಾಂತಲಾ ಪ್ರವೀಣ್ ಇವರ ಶಿಷ್ಯ ವೃಂದದಿಂದ ನೃತ್ಯ ಪ್ರದರ್ಶನ ಇರುತ್ತದೆ.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪನ್ನೀರ್ ಸೆಲ್ವಂ ಅವರು ಹಾಗೂ ಕರ್ನಾಟಕ ಕಲಾಶ್ರೀ ವಿದ್ವಾನ್ ಡಾ. ಎಸ್ ಕೇಶವಕುಮಾರ್ ಅವರು ಉಪಸ್ಥಿತಿ ವಹಿಸಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಸುಮಾರು 85 ವಿದ್ಯಾರ್ಥಿಗಳು ಭಾಗವಹಿಸಲಿದ್ದು ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿಸಲಾಗಿದೆ.