ವಿಧಾನ ಪರಿಷತ್ತಿನಲ್ಲಿ
ರಾಜ್ಯಪಾಲರ ಭಾಷಣಕ್ಕೆ ವಂದನಾ ನಿರ್ಣಯ ಮೇಲಿನ ಚರ್ಚೆಯ ಸಮಯದಲ್ಲಿ ಸಿಎಂ ರಾಜಕೀಯ ಕಾರ್ಯದರ್ಶಿ ನಜೀರ್ ಅಹ್ಮದ್ ರವರು ಪ್ರಧಾನಿಯವರನ್ನು ದೇಶದ್ರೋಹಿ ಎಂದು ಕರೆದಿರುವುದು ಕೇವಲ ಒಬ್ಬ ಪ್ರಧಾನಿ ಒಬ್ಬರಿಗೆ ಮಾಡಿದ ಅಪಮಾನವಲ್ಲ ಇಡೀ ದೇಶಕ್ಕೆ ಮಾಡಿದ ಅಪಮಾನವಾಗಿದೆ.

ನಜೀರ್ ಅಹ್ಮದ್ ರವರ ಈ ವರ್ತನೆಯಿಂದಲೇ ಅವರ ಪರದೇಶ ಪ್ರೇಮದ ಮನಸ್ಥಿತಿ ನೇರವಾಗಿ ತಿಳಿಯುತ್ತದೆ ಅವರಿಗೆ ಬಾಂಗ್ಲಾ ಹಾಗೂ ಪಾಕಿಸ್ತಾನದ ದೇಶಪ್ರೇಮವಿದ್ದರೆ ದಯವಿಟ್ಟು ಭಾರತ ಬಿಟ್ಟು ತೊಲಗಲಿ ಹಾಗೂ ಆ ದೇಶದಲ್ಲೆ ನೆಲಸಿ ಅಲ್ಲಿನ ಪೌರತ್ವವನ್ನು ಪಡೆಯಲಿ ಭಾರತದಲ್ಲಿದ್ದು ಬಾಂಗ್ಲಾದೇಶ ಅಥವಾ ಪಾಕಿಸ್ತಾನ ಜಿಂದಾಬಾದ್ ಎನ್ನುವವರ ವಿರುದ್ಧ ವಕಲತ್ತು ವಹಿಸುವ ನಜೀರ್ ಅಹ್ಮದ್ ಹಾಗೂ ಆ ಮನಸ್ಸಿರುವವರು ನಿಜವಾದ ದೇಶದ್ರೋಹಿಗಳು.
ಇಂದು ಪ್ರಪಂಚದಲ್ಲಿಯೇ ಭಾರತ ದೇಶವನ್ನು ವಿಶ್ವಗುರು ದೇಶವನ್ನಾಗಿ ಮಾಡಿ ದಿನದ 24 ಗಂಟೆಯೂ ದೇಶದ ಜನರ ಹಿತ ಹಾಗೂ ದೇಶದ ಅಭಿವೃದ್ಧಿಗೆ ಶ್ರಮಿಸುತ್ತಿರುವ ದೇಶಭಕ್ತ ಮೋದಿ ಅವರನ್ನು ಅವಮಾನ ಮಾಡಿರುವ ನಜೀರ್ ಅಹಮದ್ ಅವರ ಹೇಳಿಕೆ ತೀವ್ರವಾಗಿ ಖಂಡಿಸುತ್ತೇನೆ ಹಾಗೂ ಅವರು ದೇಶದ ಜನರ ಕ್ಷಮೆ ಕೋರುವಂತೆ ದೇಶದ ಜನರ ಪರವಾಗಿ ಆಗ್ರಹಿಸುತ್ತೇನೆ.