ಶಿವಮೊಗ್ಗ ಜ.30:
ಬರುವ ಫೆಬ್ರವರಿ 1 ರ ಭಾನುವಾರ ಶಿವಮೊಗ್ಗದ ಹೆಸರಾಂತ ಭರತನಾಟ್ಯ ಶಾಲೆಯಾದ ನಟನಂ ಬಾಲ ನಾಟ್ಯ ಕೇಂದ್ರದ ನರ್ತನಾಂಕುರ – ೨ ಎಂಬ ಭರತನಾಟ್ಯ, ಜಾನಪದ ಹಾಗೂ ಫ್ಯೂಶನ್ ನೃತ್ಯಗಳ ಕಾರ್ಯಕ್ರಮವನ್ನು ಕರ್ನಾಟಕ ಕಲಾಶ್ರೀ ವಿದ್ವಾನ್ ಡಾ. ಎಸ್ ಕೇಶವಕುಮಾರ್ ಪಿಳ್ಳೈ, ವಿದ್ವಾನ್ ಚೇತನ್ ಎಸ್. ಸಿ., ಹಾಗೂ ವಿದುಷಿ ನಾಟ್ಯಶ್ರೀ ಚೇತನ್ ಇವರು ಪ್ರಸ್ತುತಪಡಿಸಲಿದ್ದಾರೆ.
ಈ ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ಮಹಾಕಾಳಿ ಸ್ತುತಿ, ಈಜಿಪ್ಟಿಯನ್ ವಿನ್ ಡ್ಯಾನ್ಸ್ ಮತ್ತು ಜಪಾನ್ ಫ್ಯಾನ್ ಡ್ಯಾನ್ಸ್. ಈ ಕಾರ್ಯಕ್ರಮಕ್ಕೆ ರಾಯಚೂರಿನ ಶ್ರೀ ಮೂಕಾಂಬಿಕಾ ನೃತ್ಯಲಯದ ಗುರು ಶಿಲ್ಪ ಶಿವಕುಮಾರ ಇವರ ಶಿಷ್ಯ ವೃಂದದಿಂದ ನೃತ್ಯ ಪ್ರದರ್ಶನ ಹಾಗೂ ಶಿವಮೊಗ್ಗದ ನಾದಶಂಕರ ಸಂಗೀತ ಶಾಲೆಯ ಗುರು ವಿದುಷಿ ಭಾರ್ಗವಿ ರಜತ್ ಇವರಿಂದ ಸಂಗೀತ ಹಾಗೂ ಮಾಂಡಲಿಂಗ್ ವಾದನ.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆರ್ ಶೇಖರ್ ಅವರು ಹಾಗೂ ಕರ್ನಾಟಕ ಕಲಾಶ್ರೀ ವಿದ್ವಾನ್ ಡಾ. ಎಸ್ ಕೇಶವಕುಮಾರ್ ಅವರು ಉಪಸ್ಥಿತಿ ವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಸುಮಾರು 105 ವಿದ್ಯಾರ್ಥಿಗಳು ಭಾಗವಹಿಸಲಿದ್ದು, ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ನಾಟ್ಯ ಕೇಂದ್ರ ವಿನಂತಿಸಿದೆ.