ಹುಡುಕಾಟದ ವರದಿ
ಶಿವಮೊಗ್ಗ, ಜ.,30;
ಭದ್ರಾವತಿಯಲ್ಲಿ ನಡೆಯುತ್ತಿರುವ ತರಳಬಾಳು ಹುಣ್ಣಿಮೆ ಮಹೋತ್ಸವ ಅತ್ಯಂತ ಯಶಸ್ವಿಯಾಗಿ ಹಾಗೂ ಅತಿ ಹೆಚ್ಚು ಭಕ್ತರ ಜೊತೆ ನಡೆಯುತ್ತಿರುವುದು ಸಂತಸದ ವಿಷಯವೇ ಹೌದು. ಜಗದ್ಗುರು ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳ ನೇತೃತ್ವದಲ್ಲಿ ಪ್ರತಿವರ್ಷದಂತೆ ನಡೆಯುವ ತರಳಬಾಳು ಹುಣ್ಣಿಮೆ ಮಹೋತ್ಸವ ಈ ವರ್ಷ ಭದ್ರಾವತಿಯಲ್ಲಿ ನಡೆಯುತ್ತಿದ್ದು, ಶಾಸಕರು ಹಾಗೂ ಕೆ ಎಲ್ ಆರ್ ಡಿ ಸಿ ಅಧ್ಯಕ್ಷರೂ ಆದ ಬಿ.ಕೆ. ಸಂಗಮೇಶ್ವರ ಮುಂದಾಳತ್ವದಲ್ಲಿ ನಡೆಯುತ್ತಿದೆ.

ಭಕ್ತರು ಆಗಮಿಸಿದಾಗ ಅವರಿಗೆ ವ್ಯವಸ್ಥಿತವಾದ ವೇದಿಕೆ, ಆಸನ, ಊಟದ ವ್ಯವಸ್ಥೆ ಹಾಗೂ ಇತರ ವ್ಯವಸ್ಥೆಗಳು ನಿಜವಾಗಿಯೂ ಚೆನ್ನಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ.
ದುರಂತವೆಂದರೆ, ಈ ಬಾರಿಯ ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ಸಿರಿಗೆರೆ ತರಳಬಾಳು ಬೃಹನ್ಮಠದ ಪೀಠಕ್ಕೆ ಅತ್ಯಂತ ಆತ್ಮೀಯವಾಗಿ ಹಿಂದಿನಿಂದಲೂ ಕಾಯಾ, ವಾಚಾ, ಮನಸಾ ಗೌರವಿಸಿದವರನ್ನು ಹಾಗೂ ಮಠದ ಅಭಿವೃದ್ದಿಗಾಗಿ ನೆರವಾದವರನ್ನೇ ದೂರ ಇಟ್ಟಿರುವುದು ಯಾಕೆ ಎಂಬ ಪ್ರಶ್ನೆ ಸಹಜವಾಗಿ ಸಮಾಜದಲ್ಲಿ ಹಾಗೂ ಸಾರ್ವಜನಿಕವಾಗಿ ಮೂಡಿರುವುದು ಸುಳ್ಳೇನಲ್ಲ.
ರಾಜಕಾರಣಿ ಎಂಬುದಕ್ಕಿಂತ ಹೆಚ್ಚಿನದಾಗಿ ಅತ್ಯಂತ ನಿಷ್ಠೆಯ ಹಾಗೂ ಪ್ರಾಮಾಣಿಕ ವ್ಯಕ್ತಿತ್ವದ ಎಸ್. ರುದ್ರೇಗೌಡರು, ಶಿವಮೊಗ್ಗ ನಂಜಪ್ಪ ಆಸ್ಪತ್ರೆಯ ಮಾಲಿಕರಾದ ಬೆನಕಪ್ಪ, ಬಸವ ಕೇಂದ್ರದ ಬೆನಕಪ್ಪ, ಶಾಂತಿ ಏಜೆನ್ಸಿಸ್ ನ ಶಾಂತವೀರಪ್ಪ, ಹೆಚ್. ಎಂ. ಮಲ್ಲಪ್ಪ ಅವರ ಕುಟುಂಬದ ಕುಮಾರಣ್ಣ, ಷಡಾಕ್ಷರಪ್ಪ, ಮಾಜಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಹೆಚ್. ಸಿ. ಬಸವರಾಜಪ್ಪ ಸೇರಿದಂತೆ ವಿವಿಧ ಗಣ್ಯರನ್ನು ದೂರ ಇಟ್ಟಿರುವುದಾಗಿ ಈ ಬಾರಿಯ ತರಳಬಾಳು ಮಹೋತ್ಸವದಲ್ಲಿ ಕೇಳಿ ಬಂದಿದೆ.
ರುದ್ರೇಗೌಡರ ಬಗ್ಗೆ ಪಕ್ಷಾತೀತವಾಗಿ ಎಲ್ಲರೂ ಅತ್ಯಂತ ಪ್ರೀತಿ ವಿಶ್ವಾಸದಿಂದ ಗುರುತಿಸುತ್ತಾರೆ, ಗೌರವಿಸಿದ್ದಾರೆ ಎಂಬುದರಲ್ಲಿ ಎರಡು ಮಾತಿಲ್ಲ. ಅವರು ಪ್ರಸಕ್ತ ಹುಣ್ಣಿಮೆ ಮಹೋತ್ಸವದಲ್ಲಿ ಪಾಲ್ಗೊಳ್ಳದಿರುವುದು ಹಾಗೂ ಅವರನ್ನು ಹುಣ್ಣಿಮೆ ಮಹೋತ್ಸವದಲ್ಲಿ ಗುರುತಿಸದಿರುವುದು ಅತಿ ಹೆಚ್ಚು ಚರ್ಚಿತವಾಗುತ್ತಿರುವ ವಿಷಯ.
ಎಸ್. ರುದ್ರೇಗೌಡರು ಅನ್ಯ ಕಾರ್ಯದ ನಿಮಿತ್ತ ಹಾಗೂ ಲಿಂಗಾಯತ ಫೋರಂ ನ ಸಮಾವೇಶದಲ್ಲಿ ಪಾಲ್ಗೊಂಡಿದ್ದು, ಅವರನ್ನು ಇಲ್ಲಿ ಗಮನಿಸದೇ ಇರುವುದನ್ನು ಬಹಳಷ್ಟು ಜನ ಆಕ್ಷೇಪಿಸಿದ್ದಾರೆ. ಮಠಕ್ಕೆ ಸಾಕಷ್ಟು ಉದಾರತೆಯಿಂದ ನೆರವಾದವರನ್ನು ಈ ಬಾರಿ ದೂರ ಇಟ್ಟಿರುವುದು ಒಂದು ಬಗೆಯ ಮುಜುಗರದ ಹಾಗೂ ಚರ್ಚಿತ ವಿಷಯವಾಗಿರುವುದು ದುರಂತವೇ ಹೌದು.
ಈ ಮಠದ ಪೀಠಾಧ್ಯಕ್ಷರ ವಿಷಯವಾಗಿ ಒಂದಿಷ್ಟು ಗೊಂದಲಗಳು ನಡೆದಿದ್ದು, ಹಿಂದೆ ನೀವು ಬೇಡ ಎಂದವರನ್ನೇ ಇಂದು ಕರೆಸಿದ್ದಾದರೂ ಏಕೆ? ಅವರವರ ಭಕ್ತರ ಪರಿಸ್ಥಿತಿ ಏನಾಗುತ್ತೆ. ಯಾವ ಶ್ರೀಗಳ ಜೊತೆ ಗುರುತಿಸಿಕೊಳ್ಳಬೇಕು ಎಂಬ ಪ್ರಶ್ನೆ ಮೂಡಿದೆ.
ಜ್ಞಾನ ದೇಗುಲ ಎಂದೇ ಕರೆಸಿಕೊಳ್ಳುವ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಈ ಬಾರಿಯ ತರಳಬಾಳು ಮಹೋತ್ಸವದಲ್ಲಿ ಅತಿ ಹೆಚ್ಚು ಆತ್ಮೀಯರನ್ನು ಹೊರಗಿಟ್ಟಿರುವುದು ಏಕೆ ಎಂಬ ಪ್ರಶ್ನೆ ಇಲ್ಲಿ ಗಂಭೀರವಾಗಿದೆ. ಪೀಠಾಧ್ಯಕ್ಷರ ವಿಚಾರವಾಗಿ ನಡೆದಿದ್ದ ಭಕ್ತರ ಸಹಮತದ ಮಾತೇ ಎಂಬ ಅನುಮಾನ ಕಾಡುತ್ತಿದೆ.

ಈ ಹಿಂದಿನಿಂದಲೂ ನಮ್ಮ ಸಮಾಜದ ಕಾರು ಅಭಿವೃದ್ಧಿ ಕಾರ್ಯಗಳು ಹತ್ತಾರು ಅಭಿವೃದ್ಧಿ ಕಾರ್ಯಗಳು ಶಿಕ್ಷಣ ವ್ಯವಸ್ಥೆ ಬೆಳೆದಿರುವುದರ ಬಗ್ಗೆ ಹೆಚ್.ಸಿ. ಬಸವರಾಜಪ್ಪ ಸೇರಿದಂತೆ ಹಲವರು ಶ್ರೀಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರು. ಶಿವಮೊಗ್ಗದಲ್ಲಿ ನಿರ್ಮಾಣವಾಗಿರುವ ಗುರುಭವನ ವಿಷಯ ಒಂದು ಬಗೆಯ ಚರ್ಚೆಯಾದರೆ, ಕಳೆದ 25 ವರ್ಷಗಳಿಂದ ಇನ್ನೂ ಆಗದಿರುವ ಕಲ್ಯಾಣ ಮಂದಿರದ ಬಗ್ಗೆ ಮತ್ತೊಂದು ಚರ್ಚಿತ ವಿಷಯ.
ತಾವು ತರಳಬಾಳು ಪೀಠಾಧ್ಯಕ್ಷರಾಗಿ ಜೀವಿತಾವಧಿ ಕಾಲ ಪೂರ್ತಿ ಇರಬೇಕೆನ್ನುವುದು ನಮ್ಮ ಆಶಯ. ಆದರೆ ಈಗಿರುವ ಸಂಘರ್ಷದ ವಾತಾವರಣ ನೋಡಿದರೆ ಬೇರೆ ಮತಗಳ ರೀತಿ ನಮ್ಮ ಮಠದಲ್ಲೂ ಸೃಷ್ಟಿ ವಿವಾದ ಸೃಷ್ಟಿ ಆದೀತು ಎಂಬ ಆತಂಕ ನಮ್ಮದು ಎಂದಿರುವ ಅವರು ಪತ್ರದಲ್ಲಿ ಇನ್ನೂ ಹತ್ತಾರು ಪ್ರಮುಖ ವಿಷಯಗಳನ್ನು ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ಮಂಜಪ್ಪ, ರವಿಕುಮಾರ್, ಎಸ್ ಪಿ ಜಗನ್ನಾಥ್, ಪಿ. ವೀರಪ್ಪ ಸೇರಿದಂತೆ ಹಲವರು ಆ ಪತ್ರಕ್ಕೆ ಆ ಪತ್ರಗಳಿಗೆ ಸಹಿ ಮಾಡಿದ್ದರು.
ಈಗಲಾದರೂ ಶ್ರೀಗಳು ಮಠಕ್ಕೆ ನಡೆದುಕೊಂಡವರನ್ನು, ಮಠವನ್ನು ಬೆಳೆಸಿದವರನ್ನು ಹಾಗೂ ಶ್ರೀಗಳನ್ನು ಈಗಲೂ ಪೂಜ್ಯನೀಯ ಸ್ಥಾನದಲ್ಲಿ ಉಳಿಸಿಕೊಂಡವರನ್ನು ತರಳುಬಾಳು ಮಹೋತ್ಸವದಲ್ಲಿ ಪಾಲ್ಗೊಳ್ಳುವಂತೆ ಮಾಡಬೇಕೆನ್ನುವುದು ನಮ್ಮ ಆಶಯ ಎಂದು ಹಲವರು ಶ್ರೀಗಳಿಗೆ ವಿನಂತಿಸಿದ್ಹಾರೆ.