ಭದ್ರಾವತಿ : ಭದ್ರಾವತಿಯಲ್ಲಿ ನಡೆಯುತ್ತಿರುವ ತರಳಬಾಳು ಹುಣ್ಣಿಮೆ ಮಹೋತ್ಸವ-೨೦೨೬ರಲ್ಲಿ ಮುಖ್ಯ ಅಥಿತಿಗಳಾಗಿ ಪಾಲ್ಗೊಂಡಿದ್ದ ಮಾಜಿ ಉಪ ಮುಖ್ಯಮಂತ್ರಿಗಳಾದ ಕೆ.ಎಸ್.ಈಶ್ವರಪ್ಪನವರನ್ನು ಕುರಿತು ಮಾತನಾಡಿದ ಶ್ರೀ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು, ಈ ಹಿಂದೆ ದಾವಣಗೆರೆ ಭಾಗದ ರೈತರು ಮತ್ತು ಹಲವು ಮಠಾಧೀಶರು ನೀರಿಗಾಗಿ ಆಮರಣಾಂತ ಉಪವಾಸ ಸತ್ಯಾಗ್ರಹ ಮಾಡುತ್ತಿರುವಾಗ ಸ್ಥಳಕ್ಕೆ ಬೇಟಿ ನೀಡಿದ ಈಶ್ವರಪ್ಪನವರು ರೈತರ ಸಮಸ್ಯೆಯನ್ನು ಬಗೆಹರಿಸುವುದಾಗಿ ಲಿಖಿತ ಪತ್ರ ಬರೆದು ಕೊಡುವುದಾಗಿ ವಾಗ್ಧಾನ ಮಾಡಿದ್ದರು. ಆಗ ನಾವು ಲಿಖಿತ ಪತ್ರದ ಅವಶ್ಯಕತೆಯಿಲ್ಲ ನೀವು ಈ ನೀರಾವರಿ ಯೋಜನೆಯನ್ನು ಕಾರ್ಯರೂಪಗೊಳಿಸಲು ಸಚಿವಸಂಪುಟದಲ್ಲಿ ಒಪ್ಪಿಗೆ ಪಡೆದು ಅದರ ಪತ್ರದ ಪ್ರತಿಯನ್ನು ನಮಗೆ ನೀಡಿದರೆ ಸಾಕು ಎಂದು ಹೇಳಿದ್ದೆವು. ಅದರಂತೆ ಈಶ್ವರಪ್ಪನವರು ಕೊಟ್ಟ ಮಾತಿನಂತೆ ನೀರಾವರಿ ಯೋಜನೆಯನ್ನುಸಚಿವ ಸಂಪುಟದಲ್ಲಿಟ್ಟು ಆಗಿನ ಮುಖ್ಯಮಂತ್ರಿಗಳಾಗಿದ್ದ ಯಡಿಯೂರಪ್ಪನವರ ಮೇಲೆ ಒತ್ತಡ ತಂದು ಮಂಜೂರು ಮಾಡಿಸಿದ್ದರು ಎಂದು ಶ್ರೀಗಳು ಈಶ್ವರಪ್ಪನವರ ಬಗ್ಗೆ ಮೆಚ್ಚುಗೆಯ ಮಾತನಾಡಿದರು.
ಈ ಹಿಂದೆಯೂ ಸಹಾ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಈಶ್ವರಪ್ಪನವರನ್ನು ಶ್ರೀಗಳು ಈ ಭಾಗದ “ಆಧುನಿಕ ಭಗೀರತ” ಎಂದು ಕರೆದಿದ್ದನ್ನು ಸ್ಮರಿಸಿಕೊಳ್ಳಬಹುದು.