ಭದ್ರಾವತಿ, ಜ.೨೭:
ಇಲ್ಲಿನ ವಿಐಎಸ್ಎಲ್ ಕಾರ್ಖಾನೆಯ ಪುನಃಶ್ಚೇತನಕ್ಕೆ ?೧ ಕೋಟಿ ದೇಣಿಗೆ ನೀಡುವುದಾಗಿ ಶಾಸಕ ಬಿ.ಕೆ.ಸಂಗಮೇಶ್ವರ ತಮ್ಮ ಬಳಿ ವಾಗ್ದಾನ ಮಾಡಿದ್ದಾರೆ ಎಂದು ಸಿರಿಗೆರೆ ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಭದ್ರಾವತಿಯ ತರಳಬಾಳು ಹುಣ್ಣಿಮೆ ಮಹೋತ್ಸವದ ಆಶೀರ್ವಚನದಲ್ಲಿ ಈ ವಿಚಾರ ಪ್ರಸ್ತಾಪಿಸಿದ ಸ್ವಾಮೀಜಿ, ವಿಐಎಸ್ಎಲ್ ಕಾರ್ಖಾನೆಯ ಪುನಶ್ಚೇತನಕ್ಕೆ ಸಿರಿಗೆರೆ ಮಠದಿಂದ ೫ ಕೋಟಿ ಕೊಡುವುದಾಗಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಹೇಳಿದ್ದೇನೆ.
ಅದರಲ್ಲಿ ೧ ಕೋಟಿ ಕೊಡುವುದಾಗಿ ಬಿ.ಕೆ.ಸಂಗಮೇಶ್ವರ ಹೇಳಿದ್ದಾರೆ. ಉಳಿದ ೪ ಕೋಟಿ ಹೊಂದಿಸಲು ತರಳಬಾಳು ಹುಣ್ಣಿಮೆಗೆ ಸಂಗ್ರಹಿಸಿದ ದೇಣಿಗೆಯನ್ನು ಬಳಸಲಾಗುವುದು. ಅದರಲ್ಲಿ ಹಣ ಕಡಿಮೆ ಆದಲ್ಲಿ ಜೋಳಿಗೆ ಹಿಡಿದು ಉಳಿದ ಮೊತ್ತ ಸಂಗ್ರಹಿಸುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಹುಣ್ಣಿಮೆ ಮಹೋತ್ಸವದ ವೇದಿಕೆಯಲ್ಲಿದ್ದ ಬಿ.ಕೆ.ಸಂಗಮೇಶ್ವರ ಒಪ್ಪಿಗೆ ಸೂಚಿಸಿದರು ( ಸಿರಿಗೆರೆ ಶ್ರೀಗಳ ಮಾತು ಅಮೂಲ್ಯ, ಇನ್ಮುಂದೆ ನಿರಂತರ ಬರುತ್ತೆ)