ಶಿವಮೊಗ್ಗ ಜ 27 : ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯ ಚಿಕ್ಕಲ್ ಗುಡ್ಡೇಕಲ್ ವಾಡ್ ೯ ಸಂಖ್ಯೆ 14 ರಲ್ಲಿ ಹೋಂ ಅಪ್ಲೈಯನ್ಸಸ್ ಉದ್ದಿಮೆ ನಡೆಸುತ್ತಿದ್ದು ಗಣರಾಜ್ಯೋತ್ಸವ ದಿನದಂದೇ ಸಿಡಿದೆದ್ದ ಜಿಲ್ಲೆಯ ಅಧಿಕಾರಿಗಳು ಧೀಡಿರ್ ದಾಳಿ ನಡೆಸಿ ಹೋಂ ಅಪ್ಲೈಯನ್ಸಸ್ ಗೆ ಖಡಕ್ ಎಚ್ಚರಿಗೆ ನೀಡಿ ಮಾಲೀಕನ ವಿರುದ್ದ ಪ್ರಕರಣ ದಾಖಲಿಸಿದ್ದಾರೆ


ಅಪರ ಜಿಲ್ಲಾಧಿಕಾರಿ ಅಭಿಷೇಕ್ ,ಎಸಿ ಸತ್ಯನಾರಾಯಣ, ಮತ್ತು ಅಂಕಿತ ಅಧಿಕಾರಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ , ತಹಶೀಲ್ದಾರ್ ರವರು ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ತಾಲೂಕ್ ಆರೋಗ್ಯ ಅಧಿಕಾರಿ ರವರು ಮತ್ತು ಶಿವಮೊಗ್ಗ ಮಹಾನಗರ ಪಾಲಿಕೆ ಆರೋಗ್ಯ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಪುಷ್ಪಾವತಿ ರವರು ಹಾಗೂ ಆರೋಗ್ಯ ನಿರೀಕ್ಷಕರು ನೇತೃತ್ವದ ತಂಡ
ಸ್ಥಳ ಪರೀಶಿಲನೇ ವೇಳೆಯಲ್ಲಿ ಅವಧಿ ಮುಗಿದಂತಹ ಸಾಕಷ್ಟು ,ಅಹಾರ ಪದಾರ್ಥಗಳು ಮಾರಾಟ ಮಾಡಲಾಗುತ್ತಿದ್ದು ಕಂಡು ಬಂದಿದ್ದು ಅವಧಿ ಮುಗಿದಂತಹ ಎಲ್ಲಾ ಅಹಾರ ಪದಾರ್ಥಗಳನ್ನು ವಶಪಡಿಸಿಕೊಂಡು ಹೋಂ ಅಪ್ಲೈಯನ್ಸಸ್ ಗೆ ಖಡಕ್ ಎಚ್ಚರಿಗೆ ನೀಡಿದ್ದಾರೆ ನಂತರ
ಅವಧಿ ಮುಗಿದಂತಹ ಎಲ್ಲಾ ಅಹಾರ ಪದಾರ್ಥಗಳನ್ನು ಶಿವಮೊಗ್ಗ ಮಹಾನಗರ ಪಾಲಿಕೆ ವತಿಯಿಂದ ಘನ ದ್ರವ ಅಹಾರ ಪದಾರ್ಥಗಳನ್ನು ಸೂಕ್ತ ರೀತಿಯಲ್ಲಿ ನಾಶಪಡಿಸಲಾಗಿದೆ

ಆರೋಗ್ಯ ನಿರೀಕ್ಷಕರಾದ ವಿಕಾಸ್, ಲಕ್ಕಣ್ಣನವರ್ ರ ಮುಂದಾಳತ್ವದಲ್ಲಿ, ಲೋಹಿತ್ ಯಾದವ್ ಹಾಗೂ ಸುರೇಶ್ ಕುಮಾರ್ ರವರ ಸಹಯೋಗದೊಂದಿಗೆ ದಾಳಿ ನಡೆಸಲಾಗಿದೆ