ಶಿವಮೊಗ್ಗ, ಜ.26:
ನಮ್ ಶಿವಮೊಗ್ಗ ರೋಲರ್ ಸ್ಕೇಟಿಂಗ್ ಸಂಸ್ಥೆಯಿಂದ ಗಣರಾಜ್ಯೋತ್ಸವದ ನಿಮಿತ್ತ ಇಂದು ಆಯೋಜಿಸಿದ್ದ ನಗರದ ಸ್ಕೇಟಿಂಗ್ ಕ್ರೀಡಾಪಟುಗಳ ಮ್ಯಾರಥಾನ್ ಗೆ ಸಚಿವ ಮಧು ಬಂಗಾರಪ್ಪ ಚಾಲನೆ ನೀಡಿದರು.
ನಮ್ಮ ಸಂಸ್ಥೆ ಹಾಗೂ ಇತರ ಸಂಸ್ಥೆಗಳ ಎಲ್ಲಾ ಸ್ಕೇಟಿಂಗ್ ಪಟುಗಳು ಭಾಗವಹಿಸಲು ಮುಕ್ತ ಅವಕಾಶ ನೀಡಲಾಗಿದ್ದು ನಮ್ಮ ಸಂಸ್ಥೆ ಹಾಗೂ ಡೆಲ್ಲಿ ವರ್ಡ್ ಶಾಲೆ, ನ್ಯಾಷನಲ್ ಪಬ್ಲಿಕ್ ಶಾಲೆ, ಪೆಸೆಟ್ ಶಾಲೆ, ಅಕ್ಷರ ಶಾಲಾ ಕ್ರೀಡಾಪಟುಗಳು ಸೇರಿ ಸುಮಾರು ಎಂಬತ್ತು ಕ್ರೀಡಾಪಟುಗಳು ಬಾಗವಹಿಸಿದ್ದರು.
ಕ್ರೀಡಾಕೂಟಕ್ಕೆ ಚಾಲನೆ ನೀಡಿದ ಸಚಿವರು ಶಿವಮೊಗ್ಗ ನಗರದಲ್ಲಿ ಇಷ್ಟೊಂದು ಮಕ್ಕಳು ಸ್ಕೇಟಿಂಗ್ ಕಲಿಕೆಯಲ್ಲಿ ಯಶ ಸಾಧಿಸುತ್ರಿರುವುದು ಸಂತಸದ ವಿಚಾರ. ತರಬೇತಿ ನೀಡುವ ಸಂಸ್ಥೆ ಹಾಗೂ ಕ್ರೀಡಾಪಟುಗಳಿಗೆ ಶುಭಹರಸಿದರು.
ನಗರದ ನೆಹರೂ ಕ್ರೀಡಾಂಗಣದಿಂದ ಹೊರಟು ಉಷಾ ನರ್ಸಿಂಗ್ ಹೋಮ್, ಲಕ್ಷ್ಮಿ ಚಿತ್ರಮಂದಿರ ಬಳಿಯ ಫ್ರೀಡಂ ಪಾರ್ಕ್ ವರೆಗೆ ನಡೆದ ಸ್ಕೇಟಿಂಗ್ ಮ್ಯಾರಥಾನ್ ಹಾಗೂ ಗಣರಾಜ್ಯೋತ್ಸವದ ಘೋಷಣೆ, ಭಾತರ ಬಾವುಟ ಪ್ರದರ್ಶನ ಮನಮೋಹಕವಾಗಿತ್ತು.
ಮ್ಯಾರಥಾನ್ ನಲ್ಲಿ ಆರರಿಂದ ಹದಿನಾಕು ವರುಷದ ಮಕ್ಕಳು ಬಾಗವಹಿಸಿದ್ದರು. ಪುಟಾಣಿಗಳು ಸುಮಾರು ಎರಡು ಕಿಮಿ ದೂರ ಸ್ಕೇಟಿಂಗ್ ನಲ್ಲಿ ಕ್ರಮಿಸಿ ತೋರಿದ ಸಾಧನೆಗೆ ಸಾರ್ವಜನಿಕರು ಅಭಿನಂದಿಸಿದರು.
ಈ ಸಂದರ್ಭದಲ್ಲಿ ಸ್ಕೇಟಿಂಗ್ ಸಂಸ್ಥೆಯ ಉಪಾಧ್ಯಕ್ಷ ಎಸ್. ಕೆ. ಗಜೇಂದ್ರ ಸ್ವಾಮಿ, ಕಾರ್ಯದರ್ಶಿ ಎಂ ರವಿ, ಪಾಲಿಕೆ ಮಾಜಿ ಕಾರ್ಪೂರೇಟರ್ ವಿಶ್ವಾಸ್, ಪ್ರಮುಖರಾದ ಶಿ.ಜು. ಪಾಶಾ, ಕೆ. ನಾಗರಾಜ್, ಎಂ. ಸುದೀರ್, ಆತೀಶ್, ರಾಘು ಹಾಗೂ ಪೋಷಕರಿದ್ದರು.