ಪ್ರೊ.ಕೇಶವ ಶರ್ಮ
ಶಿವಮೊಗ್ಗ ಜನವರಿ 21 ಗಾಂಧಿಯ ಮೇಲೆ ಪ್ರೀತಿ ಬೆಳೆಸಿಕೊಳ್ಳಬೇಕು. ಎಂದು ಪ್ರೊ.ಕೆ ಕೇಶವ ಶರ್ಮ ರವರು ಹೇಳಿದರು, ಅವರು ಡಿವಿಎಸ್ ಕಾಲೇಜಿನಲ್ಲಿ ನಡೆದ ಡಾ.ಉಮೇಶ್ ಅಂಗಡಿ ಯವರು ಬರೆದ ನವೋದಯ ಕಾವ್ಯದ ಮೇಲೆ ಗಾಂಧಿ ವಾದದ ಪ್ರಭಾವ ಕೃತಿ ಬಿಡುಗಡೆಯನ್ನು ಮಾಡಿ ಮಾತನಾಡುತ್ತಿದ್ದರು.
ಇಂದು ದೇಶದಲ್ಲಿ ಸುಳ್ಳು ಹೆಚ್ಚಾಗಿದೆ, ಮತ್ತು ಅಗತ್ಯ
ವಿಲ್ಲದಿದ್ದರೂ ಜನರು, ವಿದ್ಯಾರ್ಥಿಗಳು ಸುಳ್ಳು ಹೇಳಿ ಬದುಕುತ್ತಿದ್ದಾರೆ.ಆದರೆ ಸತ್ಯ ಹೇಳುವುದು ಕಷ್ಟ ಗಾಂಧಿ ಎಂತಹ ಕಷ್ಟ ಬಂದರೂ ಸುಳ್ಳು ಹೇಳುತ್ತಿರಲಿಲ್ಲ.ಆದರೆ ಇಂದು ಉದ್ದೇಶಪೂರ್ವಕವಾಗಿ ಗಾಂಧಿ ಹೆಸರು ಮರೆಯಲು ಪ್ರಯತ್ನಿಸಲಾಗುತ್ತಿದೆ.ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ, ಖಾಸಗಿ ಸಂಸ್ಥೆಗಳು ನಿರುದ್ಯೋಗಿಗಳಿಗೆ ಉದ್ಯೋಗ ನೀಡಿ ಕಡಿಮೆ ಸಂಬಳ ಕೊಟ್ಟು ಶೋಷಣೆ ಮಾಡುತ್ತಿದೆ.ಇಂದು ನಿರುದ್ಯೋಗಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ, ಭಾರತೀಯರು ಬದುಕ ಬೇಕೆಂದರೆ ಗಾಂಧಿ ಮಾರ್ಗದಲ್ಲಿ ನಡೆಯಬೇಕು. ಗಾಂದಿಯವರ ಹಿಂದ್ ಸ್ವರಾಜ್ ಪುಸ್ತಕ ಓದಿ ದೈರ್ಯ ತಂದುಕೊಳ್ಳಿ.ಆಡಂ ಸ್ಮಿತ್ ಓದಿ ಅರ್ಥಶಾಸ್ತ್ರ ಬದಲಿಸಲು ಸಾಧ್ಯವಿಲ್ಲ ಆದರೆ ಗಾಂಧಿ ಓದಿ ಜೀವನ ಉತ್ತಮ ಗೊಳಿಸಿ ಕೊಳ್ಳಬಹುದು ಎಂದರು.
ಕೃತಿಯನ್ನು ಕುರಿತು ಪ್ರಾಧ್ಯಾಪಕರಾದ ಪ್ರೊ.ತಾರಿಣಿ ಶುಭದಾಯಿನಿ ಮಾತನಾಡಿ ಇಂದು ನಾವು ಗಾಂಧಿ ಮೌಲ್ಯ ರಿಂದ ದೂರ ಹೋಗುತ್ತಿದ್ದೇವೆ.ಗಾಂಧಿ ಅನುಸರಿಸಿದ ಮೌಲ್ಯ ರಾಷ್ಟ್ರೀಯ ಮೌಲ್ಯವಾಗಿದೆ, ಅವರ ಪ್ರಕಾರ ಕನಸು ಎಂದರೆ ಅದು ಸರ್ವೋದಯದ ಕನಸಾಗಿದೆ, ಗಾಂಧಿ ರಾಜಕಾರಣ ಧರ್ಮದ ರಾಜಕಾರಣ ವಾಗಿದೆ ಅದು ನೀತಿಯ ಮೌಲ್ಯ ಒಳಗೊಂಡಿದೆ, ಗಾಂಧಿ ಒಳಗೆ ಮತ್ತು ಹೊರಗೆ ಒಂದೇ ಆಗಿದ್ದಾರೆ.ಸ್ವಾತಂತ್ರ ಮತ್ತು ಸರ್ವೋದಯ ಗಾಂಧಿಯ ಮೌಲ್ಯ ಆಗಿತ್ತು.ಎಂದರು.ಗಾಂಧಿಯ ಮೌಲ್ಯ ಪುಣ್ಯ ಕೋಟಿ ಗೋವು ಇದ್ದಂತೆ ಅದರಿಂದ ಹಿಂಸೆಯ ಅರ್ಬುದ ಹುಲಿಯನ್ನೆ ಸೋಲಿಸಿತು.ಕುವೆಂಪು ರವರ ಮೇಲೆ ಕೂಡ
ಗಾಂಧಿಯ ಪ್ರಭಾವ ಇದೆ.ಆದರೆ ನೇರವಾಗಿ ಗಾಂಧಿ ಬಗ್ಗೆ ಕುವೆಂಪು ಬರೆದಿಲ್ಲ ಆದರೆ ಗಾಂಧಿ ಸೂಚಿಸಿದ ಮೌಲ್ಯಗಳೇ
ಕುವೆಂಪು ಸಾಹಿತ್ಯದ ಅಂಶವಾಗಿದೆ.ಬೇಂದ್ರೇ ಪುತಿನ ಶಂಕರಭಟ್ಟರು ದಿನಕರ ದೇಸಾಯಿಯವರು ಕೂಡ ಗಾಂಧಿ ಚಿಂತನೆ ಅಳವಡಿಸಿಕೊಂಡರು ಎಂದರು,
ಡಿವಿಎಸ್ ಸಂಸ್ಥೆಯ ಸಹ ಕಾರ್ಯದರ್ಶಿ ಡಾ.ಸತೀಶ್ ಕುಮಾರ್ ಶೆಟ್ಟಿ ಮಾತನಾಡಿ ಇಂದು ಉದ್ಯೋಗ ಸೃಷ್ಟಿ ಮಾಡುವ ಸರ್ಕಾರಿ ವ್ಯವಸ್ಥೆ ಇಲ್ಲ ಕೇವಲ ಖಾಸಗೀಕರಣ ಉದ್ಯೋಗ ನೀಡುತ್ತಿದೆ.ಖಾಸಗಿಯವರು ಮಾತ್ರ ಜಗತ್ತಿನ ಶ್ರೀಮಂತರಾಗಿ ಬೆಳೆಯುತ್ತಿದ್ದಾರೆ.ಎಂದರು.
ಕೃತಿಯ ಲೇಖಕ ಉಮೇಶ್ ಅಂಗಡಿಯವರು ಮಾತನಾಡಿ ನನಗೆ ಬದುಕಿನ ಸತ್ಯ ಹೇಳಿಕೊಟ್ಟವರು ನಮ್ಮ ಗುರುಗಳು, ಗುರುಗಳು ಮಾತ್ರ ಜಗತ್ತಿನ ಎಲ್ಲಾ ವಿಷಯಗಳಲ್ಲು ಛಾಪು ಮೂಡಿಸುತ್ತಾರೆ.ಅದೇ ರೀತಿ ನನ್ನ ಪಿಹೆಚ್ ಡಿ ಮಾರ್ಗದರ್ಶಕರಾದ ಶರ್ಮಾರವರು ನನಗೆ ನಿಜವಾದ ಗಾಂಧಿಯನ್ನು ತೋರಿಸಿಕೊಟ್ಟರು,ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಿವಿಎಸ್ ಅಧ್ಯಕ್ಷರು ಆದ ಕೆ.ಬಸಪ್ಪಗೌಡ ಮಾತನಾಡಿ ವಿದ್ವಾಂಸರು ಸಂಸ್ಥೆಯ ಅಮೂಲ್ಯವಾದ ಮುತ್ತುಗಳು ಇದ್ದಂತೆ ಗಾಂಧಿವಾದ ಕೇವಲ ಪದವಾಗದೆ ಅದು ಸರ್ವೋದಯ ಉಂಟು ಮಾಡುವ ಯೋಜನೆ ಆಗಿದೆ.ಗಾಂಧಿ ವಿಶ್ವಮಾನವರು ಮತ್ತು ವಿಶ್ವ ಮಾನ್ಯರು ಆಗಿದ್ದಾರೆ.ಅವರು ತೀರಿಕೊಂಡಾಗ ವಿಶ್ವಸಂಸ್ಥೆಯ ಧ್ವಜವನ್ನು ಅರ್ಧಕ್ಕೆ ಇಳಿಸಲಾಗಿತ್ತು. ಇದೂವರೆಗೆ ಅಂತಹ ಮಾನ್ಯರು ಮತ್ತೆ ಜನಿಸಲಿಲ್ಲ ಎಂದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಡಿವಿಎಸ್ ಸಂಸ್ಥೆಯ ನಿಕಟ ಪೂರ್ವ ಅಧ್ಯಕ್ಷರಾದ ರುದ್ರಪ್ಪ ಕೊಳಲೆಯವರು ನೆರವೇರಿಸಿದರು ಆಶಯ ಭಾಷಣವನ್ನು ಡಾ.ಎಂ.ವೆಂಕಟೇಶ್ ರವರು ಮಾಡಿದರು.
ಕಾರ್ಯಕ್ರಮ ದಲ್ಲಿ,ಪ್ರಾಣಿಶಾಸ್ತ್ರ ದ ಮುಖ್ಯಸ್ಥ ಎನ್ ಕುಮಾರಸ್ವಾಮಿ, ಪಿ ಯು ಕಾಲೇಜ್ ಪ್ರಾಂಶುಪಾಲೆ ಸವಿತಾ, ನಿಥಿನ್, ಮಧುಸೂದನ್, ಸರಿದಂತೆ ಹಲವರಿದ್ದರು.
ಕನ್ನಡ ಪ್ರಾಧ್ಯಾಪಕಿ ರಾಜೇಶ್ವರಿ ನಿರೂಪಿಸಿ ವನಜಾಕ್ಷಿ ವಂದಿಸಿದರು.