
ಶಿಕಾರಿಪುರ,ಜ.23:
ತಾಲೂಕಿನ ಹಾರೋಗೊಪ್ಪ ಗ್ರಾಮದ ರೈತ ಸೋಮ್ಲಾ ನಾಯ್ಕ್ ಅವರಿಗೆ ನಿನ್ನೆ ಬೆಳಿಗ್ಗೆ 5 ಗಂಟೆಗೆ ಭತ್ತದ ಗದ್ದೆಗೆ ನೀರು ಬಿಡಲು ಹೋದಾಗ 2 ಕರಡಿಗಳು ಮೇಲೆ ದಾಳಿ ಮಾಡಿ ಗಂಭೀರವಾಗಿ ಗಾಯ ಮಾಡಿರುತ್ತವೆ.

ಈಗ ಇವರು ಶಿವಮೊಗ್ಗ ದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗ್ರಾಮದ ಜನ ಭಯಬೀತರಾಗಿದ್ದಾರೆ.
ಕೂಡಲೇ ಈ ಕರಡಿಗಳನ್ನು ಹಿಡಿಯಲು ಅರಣ್ಯ ಇಲಾಖೆಗೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
