ಶಿವಮೊಗ್ಗ ; ಮಹಾನಗರ ಪಾಲಿಕೆ ಯಲ್ಲಿ ಚುನಾಯಿತ ಜನಪ್ರತಿ ನಿಧಿಗಳಿಲ್ಲದೆ ೨ ವರ್ಷಕಳೆದಿದ್ದು, ಕೂಡಲೇ ಪಾಲಿಕೆಗೆ ಚುನಾವಣೆ ನಡೆಸಬೇಕು, ಇಲ್ಲದಿದ್ದರೆ ರಾಷ್ಟ್ರಭಕ್ತ ಬಳಗದಿಂದ ಪ್ರಕರಣ ದಾಖಲಿಸಲಾಗವುದು ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ಅವರು ಇಂದು ಪತ್ರಿಕಾಗೋಷ್ಟಿ ಯಲ್ಲಿ ಮಾತನಾಡಿ, ರಾಜ್ಯ ಚುನಾವಣೆ ಆಯುಕ್ತರಾದ ಜಿ. ಎಸ್. ಸಂಗ್ರೇಶಿ ಅವರು ೩೦೨೫ ಮೇ ನಲ್ಲಿ ಶಿವಮೊಗ್ಗಕ್ಕೆ ಬಂದಿದ್ದ ವೇಳೆ ರಾಷ್ಟ್ರ ಭಕ್ತರ ಬಳಗ ನಿಯೋಗ ಭೇಟಿ ಮಾಡಿ ಪಾಲಿಕೆಗೆ ಚುನಾವಣೆ ನಡೆಸುವಂತೆ ಮನವಿ ನೀಡಿತ್ತು . ಈ ವೇಳೆ ಮನವಿ ಸ್ವೀಕರಿಸಿದ ಚುನಾವಣಾ ಆಯುಕ್ತರು , ಶಿವಮೊಗ್ಗ ಮತದಾರರ ಪಟ್ಟಿ ಪರಿಷ್ಕರಣೆ ಪೋರ್ಣಗೊಂಡಿದ್ದು, ಸರ್ಕಾರದ ವತಿಯಿಂದ ವಾರ್ಡ್ ಮೀಸಲಾತಿಯ ಪರಿಷ್ಕೃತ ಪಟ್ಟಿಗಾಗಿ ಕಾಯುತ್ತಿದ್ದೇವೆ ಎಂದು ಹೇಳಿದ್ದರು. ಆದರೆ ಇದುವರೆಗೆ ರಾಜ್ಯ ಸರ್ಕಾರ ಮೀಸಲಾತಿ ಪಟ್ಟಿ ಬಿಡುಗಡೆ ಮಾಡಿಲ್ಲ ಎಂದರು.

ಅವರ ಹೇಳಿಕೆಯಂತೆ ಅವಧಿ ಮುಗಿದ ಪಾಲಿಕೆಗಳ ಪರಿಷ್ಕೃತ ಕ್ಷೇತ್ರ ಹಾಗೂ ವಾರ್ಡ್ ಮೀಸಲಾತಿ ಅಧಿಸೂಚನೆ ಹೊರಡಿಸದೆ ಇದ್ದಾಗ ಸುಪ್ರೀಂ ಕೋರ್ಟ್ ಆದೇಶದಂತೆ ಹಿಂದಿನ ಮೀಸಲಾತಿಗೆ ಅನುಗುಣವಾಗಿ ಚುನಾವಣೆ ನಡೆಸಲು ಕೋರ್ಟ್ ಮೊರೆ ಹೋಗಬೇಕಾಗುತ್ತದೆ ಎಂದು ತಿಳಿಸಿದ್ದರು. ಆದರೆ ಇದುವರೆಗೂ ರಾಜ್ಯ ಮೀಸಲಾತಿ ಪಟ್ಟಿ ಬಿಡುಗಡೆ ಮಾಡಿಲ್ಲ, ಅಲ್ಲದೆ ರಾಜ್ಯ ಚುನಾವಣಾ ಆಯೋಗವು ಕೂಡ ಈ ಸಂಬಂಧ ಯಾವುದೇ ಕ್ರಮಕೈಗೊಂಡಿಲ್ಲ. ಇದು ಪ್ರಜಾ ಪ್ರಭುತ್ವಕ್ಕೆ ಮಾಡಿದ ಅಪಮಾನ ಮತ್ತು ಕಗ್ಗೊಲೆ. ಅಲ್ಲದೆ ಸುಪ್ರೀಂ ಕೋರ್ಟ್ ಆದೇಶದ ಸ್ಪಷ್ಟ ಉಲ್ಲಂಘನೆ ಆಗಿದೆ. ಆದ್ದರಿಂದ ರಾಜ್ಯ ಸರ್ಕಾರ ಶೀಘ್ರವಾಗಿ ಪಾಲಿಕೆಯ ಪರಿಷ್ಕೃತ ಮೀಸಲಾತಿ ಪಟ್ಟಿಯನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸುತ್ತನೆ.ಹಾಗೂ ಕಾಲಮೀತಿಯೊಳಗೆ ಬಿಡುಗಡೆ ಮಾಡದಿದ್ದಲ್ಲಿ ಚುನಾವಣಾ ಆಯೋಗವು ನ್ಯಾಯಾಲಯದ ನಿರ್ದೇಶನದಂತೆ ಮಹಾನಗರ ಪಾಲಿಕೆಗಳ ಚುನಾವಣೆ ನಡೆಸಲು ಅಧಿಸೂಚನೆ ಹೊರಡಿಸಬೇಕೆಂದು ಒತ್ತಾಯಿಸಿದರು.
ನಿಗಧಿತ ಸಮಯದಲ್ಲಿ ಬೇಡಿಕೆ ಈಡೇರದಿದ್ದಲ್ಲಿ ರಾಷ್ಟ್ರ ಭಕ್ತರ ಬಳಗವು ಬಳಗದ ಮುಖಂಡರಾದ ಕೆ.ಈ.ಕಾಂತೇಶ್ ನೇತೃತ್ವದಲ್ಲಿ ಪಾಲಿಕೆಗೆ ತಕ್ಣ ಣ ಚುನಾವಣೆ ನಡೆಸುವಂತೆ ನ್ಯಾಯಾಲಯದ ಮೊರೆ ಹೋಗಿ ಶಿವಮೊಗ್ಗದ ಜನತೆಗೆ ನ್ಯಾಯ ಕೊಡಿಸಲು ಎಲ್ಲಾ ರೀತಿಯ ಪ್ರಯತ್ನ ಮಾಡಲಾಗುವುದು ಎಂದರು.

ಜನಪ್ರತಿನಿಧಿಗಳಿಲ್ಲದೆ ಶಿವಮೊಗ್ಹನಗರ ಆಡಳಿತ ಅಭಿವೃದ್ಧಿ ಶೂನ್ಯವಾಗಿದ್ದು, ಭ್ತಷ್ಟಾಚಾರ ತುಂಬಿ ತುಳುಕುತ್ತದೆ.ಚುನಾವಣಾ ಆಯುಕ್ತರ ಮಾತಿಗೆ ಬೆಲೆ ಇಲ್ಲವೇ? ಅವರು ಕೂಡ ಪೇಪರ್ ಭೂತವೇ? ಸರ್ಕಾರಕ್ಕೆ ಇದು ನಾಚಿಕೆಗೇಡಿನ ವಿಷಯ. ರಾಜ್ಯದಲ್ಲಿ ಚುನಾವಣಾ ಆಯೋಗವು ಮಲಗಿದೆ.ವಿಧಿಯಲ್ಲದೆ, ಈಮಾತು ಹೇಳಬೇಕಾಗಿದೆ. ಕಾಂಗ್ರೆಸ್ ಪಕ್ಷಕ್ಕೆ ಚುನಾವಣೆಯ ಭಯವಿದೆ. ಹಾಗಾಗಿ ಚುನಾವಣೆ ಮಾಡಿಸುತ್ತಿಲ್ಲ, ಸಚಿವ ಬೈರತಿ ಸುರೇಶ್ ಅವರು ಪಾಲಿಕೆಗಳಿಗೆ ೨೦೦ ಕೋಟಿ ಬಿಡುಗಡೆ ಮಾಡುತ್ತೇವೆ ಎಂದಿದ್ದರು.ಆದರೆ ಇದುವರೆಗೂ ನಯಾ ಪೈಸೆ ಬಂದಿಲ್ಲ.ಆಶ್ರಯ ಬಡಾವಣೆಯ
ಮೂಲಭೂತ ಸೌಲಭ್ಯಕ್ಕೆ ೧೨ಕೋಟಿ ರೂ. ಮಾಡುತ್ತೇನೆ ಎಂದುಹೇಳಿ ಹೋದ ಸಚಿವ ಜಮೀರ್ ಈ ಕಡೆ ತಲೆಹಾಕಿಲ್ಲ. ಸರ್ಕಾರಿಕೆಲಸಗಳು ಆಗುತ್ತಿಲ್ಲ.ಚುನಾವಣಾ ಆಯೋಗ ಮತ್ತು ಲೋಕಾಯುಕ್ತವನ್ಮುನಂಬ್ ಪರಿಸ್ಥಿಯಲ್ಲಿಜನರಿದ್ದಾರೆ. ಯಾಕೆಂದರೆಲೋಕಾಯುಕ್ತ ಪೊಲೀಸರುಹಲವಾರು ಪರಿಶೀಲನೆ ನೆಪದಲ್ಲಿಪಾಲಿಕೆಗೆ ಬಂದುಟೀ ಕುಡಿದು ಹೋಗಿದ್ದು ಬಿಟ್ಟರೆ ಪಾಲಿಕೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ ಎಂದು ದೂರಿದರು.ಗೋಷ್ಟಿಯಲ್ಲಿ ಪ್ರಮುಖರಾದ ಕೆ.ಈ.ಕಾಂತೇಶ್, ಈ ವಿಶ್ವಾಸ್.ಮೋಹನ್ ಜಾದವ್, ಕುಬೇರಪ್ಪ, ಗೋವಿಂದ,ಶಂಕರ ನಾಯ್ಕ್, ಲೋಕೇಶ್ ಮತ್ತಿತರಿದ್ದರು.