ಶಿವಮೊಗ್ಗ : ಮದುರೈನ ತಿರುಪ್ಪರನ್ ಕುಂದ್ರಂ ಬೆಟ್ಟದ ಮೇಲಿನ ಪುರಾತನ ದೀಪ ಸ್ತಂಭಗಳಲ್ಲಿ ಹಿಂದೂಗಳಿಗೆ ಕಾರ್ತಿಕ ದೀಪ ಬೆಳಗಿಸಲು ಮದ್ರಾಸ್ ಹೈಕೋರ್ಟ್ ನಿನ್ನೆ ಅನುಮತಿಸಿದ್ದು ಇದೇ ಸಂದರ್ಭದಲ್ಲಿ ಕಾಕತಾಳೀಯವಾಗಿ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಮತ್ತು ಕುಟುಂಬ ಅಲ್ಲಿಗೆ ಭೇಟಿನೀಡಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪವಿತ್ರ ಹಿಂದೂ ಶ್ರದ್ಧಾಕೇಂದ್ರಕ್ಕೆ ಇಂದೇ ಬೇಟಿ ನೀಡುವ ಅವಕಾಶ ಲಭಿಸಿದ್ದು ನಮ್ಮ ಸೌಭಾಗ್ಯ. ಹಿಂದೂ ವಿರೋಧಿ ಮನಃಸ್ಥಿತಿಯ ತಮಿಳುನಾಡು ರಾಜ್ಯ ಸರ್ಕಾರ ಮತ್ತು ವಕ್ಫ್ ಮಂಡಳಿ ಅಲ್ಲಿ ಹಿಂದೂಗಳು ಕಾರ್ತಿಕ ದೀಪೋತ್ಸವ ಮಾಡದಂತೆ ಕೋರ್ಟ್ ಮೊರೆ ಹೋಗಿದ್ದವು ಇತ್ತೀಚೆಗೆ ಜಸ್ಟೀಸ್ ಜಿ.ಆರ್.ಸ್ವಾಮಿನಾಥನ್ ಅವರ ಏಕಸದಸ್ಯ ನ್ಯಾಯ ಪೀಠ ತಮಿಳುನಾಡು ಸರ್ಕಾರ ಮತ್ತು ವಕ್ಫ್ ಬೋರ್ಡಿನ ಅರ್ಜಿ ತಿರಸ್ಕರಿಸಿ ಹಿಂದೂಗಳಿಗೆ ದೀಪ ಬೆಳಗಿಸಲು ಅವಕಾಶ ನೀಡಿದ್ದರು.

ಆದರೆ ಈ ತೀರ್ಪಿನ ವಿರುದ್ಧ ಹೈಕೋರ್ಟಿನ ಮದುರೈ ಪೀಠಕ್ಕೆ ಮೇಲ್ಮನವಿ ಸಲ್ಲಿಕೆ ಆಗಿತ್ತು. ಇಂದು ಮಾನ್ಯ ಉಚ್ಚ ನ್ಯಾಯಾಲಯವೂ ಸಹಾ ಹಿಂದೂಗಳ ಪರವಾಗಿ ತೀರ್ಪು ನೀಡಿದೆ. ಈ ಮೊದಲು ತೀರ್ಪು ನೀಡಿದ್ದ ಜಸ್ಟೀಸ್ ಸ್ವಾಮಿನಾಥನ್ ಅವರನ್ನು ಪದಚ್ಯುತಗೊಳಿಸಲು ತಮಿಳುನಾಡು ಸರ್ಕಾರ ಮತ್ತು ಹಿಂದೂ ವಿರೋಧಿಗಳು ಸಜ್ಜಾಗಿದ್ದರು ಇದಕ್ಕೆ ೫೦ಕ್ಕೂ ಹೆಚ್ಚು ಸಂಸದರು ಸಹಿ ಹಾಕಿದ್ದರು.

ಸಹಿ ಹಾಕಿದವರಲ್ಲಿ ಕರ್ನಾಟಕದ ಮೂರು ಸಂಸದರೂ ಸೇರಿದ್ದಾರೆ ಎಂಬುದು ಬೇಸರದ ಸಂಗತಿ. ಇಂದು ಮಾನ್ಯ ಮದ್ರಾಸ್ ಉಚ್ಚ ನ್ಯಾಯಾಲಯ ನೀಡಿದ ತೀರ್ಪು ಹಿಂದೂ ವಿರೋಧಿ ಮನಃಸ್ಥಿತಿಗಳ ಬಾಯಿ ಮುಚ್ಚಿಸಿದೆ. ಸತ್ಯಕ್ಕೆ, ಹಿಂದುತ್ವಕ್ಕೆ ಮತ್ತೊಮ್ಮೆ ಜಯವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಈಶ್ವರಪ್ಪನವರ ಪತ್ನಿ ಜಯಲಕ್ಷ್ಮೀ ಈಶ್ವರಪ್ಪ ಹಾಗೂ ಪುತ್ರ ಕೆ.ಈ. ಕಾಂತೇಶ್ ಮತ್ತು ಕುಟುಂಬ ಸದಸ್ಯರು ಉಪಸ್ಥಿತರಿದ್ದರು.
ಮದುರೈನ ತಿರುಪ್ಪರನ್ ಕುಂದ್ರಂ ಬೆಟ್ಟದ ಮೇಲಿನ ಪುರಾತನ ದೀಪ ಸ್ತಂಭಗಳಲ್ಲಿ ಹಿಂದೂಗಳಿಗೆ ಕಾರ್ತಿಕ ದೀಪ ಬೆಳಗಿಸಲು ಮದ್ರಾಸ್ ಹೈಕೋರ್ಟ್ ತೀರ್ಪಿನ ಹಿನ್ನಲೆಯಲ್ಲಿ ಶಿವಮೊಗ್ಗದಲ್ಲಿ ಕೋಟೆ ಸೀತಾರಾಮಾಂಜನೇಯ ಸ್ವಾಮಿಗೆ ರಾಷ್ಟ್ರಭಕ್ತರ ಬಳಗದಿಂದ ವಿಶೇಷ ಪೂಜೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ರಾಷ್ಟ್ರಭಕ್ತರ ಬಳಗದ ಪ್ರಮುಖರಾದ ಈ. ವಿಶ್ವಾಸ್ ಮಾತನಾಡಿ, ಹಿಂದೂಧರ್ಮ ವಿರೋಧಿಗಳಿಗೆ ನ್ಯಾಯಾಲಯದ ತೀರ್ಪು ಉತ್ತರ ನೀಡಿದೆ. ಧರ್ಮದ ಹೆಸರಿನಲ್ಲಿ ಹಿಂದೂ ಧರ್ಮಕ್ಕೆ ಕೈಹಾಕಿದರೆ ಅವರ ನಾಶ ಕಂಡಿತಾ ಕಟ್ಟಿಟ್ಟಬುತ್ತಿ. ತಮಿಳ್ ನಾಡಿನಲ್ಲಿ ಸಾವಿರಾರು ವರ್ಷದ ಇತಿಹಾಸ ಉಳ್ಳ ದೇವಾಲಯದಲ್ಲಿ ಕಾರ್ತೀಕ ದೀಪೋತ್ಸವಕ್ಕೆ ವಿರೋಧಮಾಡಿ ನ್ಯಾಯಾಲಯದ ಮೇಟ್ಟಿಲೇರಿದ ಹಿಂದೂ ವಿರೋಧಿಗಳಿಗೆ ತಕ್ಕಪಾಠ ಕಲಿಸಿದೆ. ಇಡೀ ತಮಿಳ್ನಾಡಿನಲ್ಲಿ ಹಿಂದೂಗಳು ತಮ್ಮ ಮನೆಯ ಮುಂದೆ ಕಾರ್ತೀಕೇಯನಿಗೆ ದೀಪಹಚ್ಚಿ, ಪಟಾಕಿ ಸಿಡಿಸಿ, ಸಿಹಿಹಂಚಿ ಸಂಭ್ರಮಿಸಿದ್ದಾರೆ. ಶಿವಮೊಗ್ಗದಲ್ಲೂ ಕೂಡ ಕೋಟೆ ದೇವಸ್ಥಾನದಲ್ಲಿ ಭಜನೆ ಮೂಲಕ ವಿಶೇಷ ಪೂಜೆಯನ್ನು ಸಲ್ಲಿಸಿ, ಪಟಾಕಿ ಸಿಡಿಸಿ, ಸಿಹಿಹಂಚಿ ವಿಜಯೋತ್ಸವ ಆಚರಿಸಿದರು. ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸದ್ಯಸರಾದ ಈ.ವಿಶ್ವಾಸ್, ಬಾಲು, ಶಿವಾಜಿ, ರಾಜು, ಶಂಕರನಾಯ್ಕ, ಜಾಥವ್, ಗುರುಶೇಟ್, ಪ್ರಕಾಶ್, ಜಗಣ್ಣ, ರಾಮಚಂದ್ರ, ಶಮಂತ್, ರಾಜಯ್ಯ, ಟಾಕ್ರನಾಯ್ಕ, ರವಿ, ದೊರೈಸ್ವಾಮಿ, ಗೀತಾ, ರಶ್ಮಿ, ರಾಜೇಶ್ವರಿ, ವರಲಕ್ಷ್ಮಿ ಹಾಗೂ ಹಲವು ರಾಷ್ಷ್ರ ಭಕ್ತರ ಬಳಗದ ಸದ್ಯಸರು ಉಪಸ್ಥಿತರಿದ್ದರು.