. ಶಿವಮೊಗ್ಗ, ಜನವರಿ 02 : ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯ ವಿವಿಧ ರಸ್ತೆ, ಫುಟ್ ಪಾತ್ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಬೀದಿ ಬದಿ ವ್ಯಾಪಾರದ ಕೈಗಾಡಿಗಳು ನಿಷ್ಕ್ರಿಯ, ಅನುಪಯುಕ್ತ, ಕಬ್ಬಿನ ಹಾಲಿನ ಗಾಡಿ, ಐಸ್ ಕ್ರೀಂ ಗಾಡಿ ಇತ್ಯಾದಿ ಮಾರಾಟ ಪರಿಕರಗಳು, ತಾತ್ಕಾಲಿಕ ಶಡ್ಗಳು ಇತ್ಯಾದಿಯನ್ನು ಅ

ನಧಿಕೃತವಾಗಿ ಬಿಟ್ಟಿರುವುದು ಕಂಡು ಬಂದಿದ್ದು, ಅದನ್ನು ತೆರವುಗೊಳಿಸಲು ಪಾಲಿಕೆ ಕ್ರಮಕೈಗೊಳ್ಳಲು ತೀರ್ಮಾನಿಸಿದೆ.
ಈ ಸಾರ್ವಜನಿಕ ಪ್ರಕಟಣೆಯ 15 ದಿನದ ಒಳಗೆ ಸಂಬಂಧಿಸಿದವರು ಕೂಡಲೇ ತಮ್ಮ ತಮ್ಮ ಅನುಪಯುಕ್ತ, ನಿಷ್ಕ್ರಿಯ ಅಥವಾ ವ್ಯಾಪಾರ ಮುಗಿದ ನಂತರ ಅಲ್ಲೇ ಬಿಟ್ಟಿರುವ ಗಾಡಿ ಅನುಪಯುಕ್ತ ವಸ್ತು ಇತ್ಯಾದಿ ತೆರವುಗೊಳಿಸುವುದು. ತಪ್ಪಿದಲ್ಲಿ ಪೋಲೀಸ್ ಇಲಾಖೆ

ಸಹಯೋಗದೊಂದಿಗೆ ಪಾಲಿಕೆ ವತಿಯಿಂದ ಈ ಸಾಮಗ್ರಿಗಳನ್ನು ವಶಪಡಿಸಿಕೊಂಡು ” ಸ್ಕ್ರಾಪ್ ” ಮಾಡುವುದಲ್ಲದೇ ಸಂಬಂಧಿಸಿದವರ ಮೇಲೆ ದಂಡ ಹಾಗೂ ಕಾನೂನು ಕ್ರಮವಿಡಲಾಗುವುದು ಎಂದು ಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.