ಶಿವಮೊಗ್ಗ : ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಪ್ರತಿ ತಿಂಗಳು ಏರ್ಪಡಿಸುವ ಮನೆ-ಮನ ಸಾಹಿತ್ಯ ಕಾರ್ಯಕ್ರಮ ಸಾಹಿತ್ಯ ಹುಣ್ಣಿಮೆ 244 ನೆಯ ತಿಂಗಳ ಸಂಭ್ರಮ ಡಿಸೆಂಬರ್ 20 ರಂದು ಶನಿವಾರ ಸಂಜೆ 6 ಕ್ಕೆ ವಿನೋಬನಗರ ಮೊದಲ ಹಂತದಲ್ಲಿರುವ ಶ್ರೀ ಆಂಜನೇಯ ಸ್ವಾಮಿ ದೇವಾಲಯದ ಆವರಣದಲ್ಲಿ ನಡೆಯಲಿದೆ.
ಕಾರ್ಯಕ್ರಮವನ್ನು ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತ ಉಂಬಳೇಬೈಲು ಮೋಹನ್ ಉದ್ಘಾಟಿಸಲಿದ್ದಾರೆ. ಕಸಾಸಾಂ ವೇದಿಕೆ ಅಧ್ಯಕ್ಷರಾದ ಡಿ. ಮಂಜುನಾಥ ಅಧ್ಯಕ್ಷತೆ ವಹಿಸಲಿದ್ದಾರೆ. ಹಿಂದಿನ 243 ನೇ ಸಾಹಿತ್ಯ ಹುಣ್ಣಿಮೆ ಆತಿಥ್ಯ ನೀಡಿದ್ದ ಸಾಗರದ ಲಯನ್ಸ್ ಕ್ಲಬ್ ಅಧ್ಯಕ್ಷರು, ಪ್ರಾಧ್ಯಾಪಕರಾದ ಡಾ. ಟಿ. ಪ್ರಸನ್ನ , ರಾಷ್ಟ್ರೀಯ ಶಿಕ್ಷಣ ಸಮಿತಿ ನಿರ್ದೇಶಕರಾದ ಟಿ. ಆರ್. ಅಶ್ವತ್ಥನಾರಾಯಣ ಶೆಟ್ಟಿ, ಮುಖಂಡರಾದ ಟಿ. ಕೃಷ್ಣಪ್ಪ, ಹಿರಿಯ ವಕೀಲರಾದ ಎಸ್. ಎಸ್. ಶೇರೇಗಾರ್, ಕಸಾಪ ತಾಲ್ಲೂಕು ಅಧ್ಯಕ್ಷರಾದ ಮಹಾದೇವಿ, ಕಸಾಸಾಂ ವೇದಿಕೆ ಉಪಾಧ್ಯಕ್ಷರಾದ ಭಾರತಿ ರಾಮಕೃಷ್ಣ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಭಜನಾ ಮಂಡಳಿಯವರಿಂದ ಭಜನೆ, ಕದಂಬ ಕರೋಕೆ ಗಾಯನ ತಂಡದ ರವಿ ಚವ್ಹಾಣ್, ಸಂದೇಶ್, ಸುಪ್ರಜಾ ಕಾಮತ್, ಮಂಗಳ ಅವರು ಹಾಡು ಹೇಳಲಿದ್ದಾರೆ.

ಕವಿಗಳಾದ ಮೇಗರವಳ್ಳಿ ರಮೇಶ್, ಶ್ರೀನಿವಾಸ ನಗಲಾಪುರ, ಶುಭಾ ಕುಸ್ಕೂರು ಕವನ ವಾಚಿಸುವರು. ಹು. ಮಾ. ಸತೀಶ್, ಗಾಯತ್ರಿ ರಾಮಚಂದ್ರ ಹನಿಗವನ ವಾಚಿಸಲಿದ್ದಾರೆ. ಕು. ಸ್ಪಂದನಾ ಚರಂತಿಮಠ ಕಥೆ ಹೇಳಲಿದ್ದಾರೆ.
ಕಾರ್ಯಕ್ರಮಕ್ಕೆ ಸಾಹಿತ್ಯ ಸಾಂಸ್ಕೃತಿಕ ಮನಸ್ಸುಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲು ಡಿ. ಮಂಜುನಾಥ ಮನವಿ ಮಾಡಿದ್ದಾರೆ.