ಜಿಲ್ಲಾ ಬಿಜೆಪಿ ಕಛೇರಿಗೆ ಮುತ್ತಿಗೆ ಹಾಗೂ ಕಾಂಗ್ರೆಸ್ ಪ್ರತಿಭಟನೆಯ ಸಂದರ್ಭದಲ್ಲಿ ಬಂದೋಬಸ್ತಿಗೆ ನೂರಾರು ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಇದರಲ್ಲಿ ಮಹಿಳಾ ಪೊಲೀಸರು ಕರ್ತವ್ಯ ನಿರ್ವಹಿಸುತ್ತಿದ್ದರು.

ಈ ಸಂದರ್ಭದಲ್ಲಿ ಕೋಟೆ ಠಾಣೆಯ ಎಎಸ್ಐ ಅಮೃತಾಬಾಯಿಯವರ ಸುಮಾರು 60 ಗ್ರಾಂ ತೂಕದ 7 ಲಕ್ಷ ರೂ. ಮೌಲ್ಯದ ಮಾಂಗಲ್ಯಸರ ಕಳೆದು ಹೋಗಿದ್ದು, ಆತಂಕಕ್ಕೆ ಕಾರಣವಾಯಿತು. ಮಾಂಗಲ್ಯಸರ ಕಳೆದುಕೊಂಡ ಅಮೃತಾಬಾಯಿ ಕಣ್ಣೀರು ಹಾಕಿದರು. ಸರ ಕಳುವಾಗಿದೆಯಾ ಅಥವಾ ಕಳೆದು ಹೋಗಿದೆಯಾ ಎಂಬುದು ತನಿಖೆಯ ಬಳಕವಷ್ಟೇ ಗೊತ್ತಾಗಬೇಕಿದೆ.
ಪೊಲೀಸರು ಕರ್ತವ್ಯ ನಿರ್ವಹಿಸುತ್ತಿರುವಾಗಲೇ ಪ್ರತಿಭಟನೆಯ ನೂಕುನುಗ್ಗಲಿನಲ್ಲಿ ಸರ ನಾಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದ್ದು, ಇದೊಂದು ಗಂಭೀರ ಪ್ರಕರಣವಾಗಿದೆ. ಪೊಲೀಸರ ಸರವನ್ನೇ ಅಪಹರಿಸುತ್ತಾರೆ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದರು. ಅಮೃತ ಬಾಯಿಯವರು ಈ ಬಗ್ಗೆ ದೂರು ಕೊಡುವುದಾಗಿ ತಿಳಿಸಿದರು.