ರಾಕೇಶ್, ಶಿವಮೊಗ್ಗ

ಶಿವಮೊಗ್ಗ: ರಾಜ್ಯ ಸರ್ಕಾರ ಕೊರೊನಾ ನಿಯಂತ್ರಣಕ್ಕಾಗಿ ಕಠಿಣ ನಿಯಮ ಜಾರಿಯಲ್ಲಿದ್ದರೂ ಸಹ ಶಿವಮೊಗ್ಗದಲ್ಲಿ ಜನ ಮಾತ್ರ ತಲೆಕೆಡಿಸಿಕೊಳ್ಳದೇ ಅನಗತ್ಯವಾಗಿ ಓಡಾಡುತ್ತಿದ್ದಾರೆ.
ಶಿವಮೊಗ್ಗದಲ್ಲಿ ಬೇರೆ ಜಿಲ್ಲೆಯಲ್ಲಿ ಹೋಲಿಕೆ ಮಾಡಿದರೆ ಕೊರೊನಾ ಸೋಂಕಿತರ ಹಾಗೂ ಸಾವಿನ ಸಂಖ್ಯೆ ಹೆಚ್ಚಳವಾಗುತ್ತಿದ್ದರು ಸಹ ಪ್ರತಿನಿತ್ಯ ಅಗತ್ಯ ವಸ್ತುಗಳ ಖರಿದಿ ನೆಪದಲ್ಲಿ ಜನರು ಮಾತ್ರ ರಸ್ತೆಗೆ ಬರುತ್ತಲೆ ಇದ್ದಾರೆ ಎಂದರೆ ತಪ್ಪಗಲಾರದು.


ಸರ್ಕಾರ ಹಾಗೂ ಪೊಲೀಸರು ಎಷ್ಟೇ ಬುದ್ದಿ ಹೆಳಿದರೂ ಜನರು ಮಾತ್ರ ಎಚ್ಚೆತ್ತುಕೊಂಡಿಲ್ಲ ಒಂದಿಲ್ಲೋಂದು ಕಾರಣ ವಿಟ್ಟುಕೊಂಡು ಮನೆಯಿಂದ ಹೊರಬರುತ್ತಿದ್ದಾರೆ.
ನಗರದಲ್ಲಿ ಬೆಳಗ್ಗೆ ಸರ್ಕಲ್‌ಗಳನ್ನು ಹೊರತುಪಡಿಸಿ ಕೆಲ ರಸ್ತೆಗಳಲ್ಲಿ ವಾಹನಗಳದ್ದೆ ಕಾರುಬಾರು ಇದರಿಂದ ಟ್ರಾಫಿಕ್ ಜಾಮ್ ಉಂಟಾಗಿ ಅಗತ್ಯ ತುರ್ತು ಕಾರ್ಯಗಳಿಗೆ ತೆರಳುತ್ತಿರುವವರಿಗೂ ತೊಂದರೆಯಾಗುತ್ತಿದೆ. ಮ್ಯಾಕ್ಸ್ ಆಸ್ಪತ್ರೆ ರಸ್ತೆ, ಕುವೆಂಪು ರಸ್ತೆ ಸೇರಿದಂತೆ ಕೆಲವು ಕಡೆ ಇಂದು ಬೆಳಗ್ಗೆ ಎಂದಿನಂತೆ ಸಂಚಾರ ದಟ್ಟಣೆ ಕಂಡು ಬಂತು.


ಶಿವಮೊಗ್ಗದಲ್ಲಿ ಸಾರ್ವಜನಿಕರು ಮಾರುಕಟ್ಟೆ, ದಿನಸಿ ಅಂಡಿಗಳ ಮುಂದೆ ಸಾಮಾಜಿಕ ಅಂತರ, ಮಾಸ್ಕ್ ಹಾಕದೇ ಬೇಕಾ ಬಿಟ್ಟಿಯಾಗಿ ಜನರು ಓಡಾಡುತ್ತಿದ್ದಾರೆ. ಇದೇ ರೀತಿ ಮುಂದುವರೆದರೆ ಶಿವಮೊಗ್ಗ ನಗರದಲ್ಲಿ ಸೋಂಕಿತರ ಸಂಖ್ಯೆ ಹಾಗೂ ಸಾವಿನ ಸಂಖ್ಯೆ ಹೆಚ್ಚಾಗಬಹುದು. ಹಾಗಾಗಿ ಸಾರ್ವಜನಿಕರು ನಿರ್ಲಕ್ಷ ಮಾಡದಿರಿ ಅನಗತ್ಯವಾಗಿ ಮನೆಯಿಂದ ಹೊರಬಾರದಿರಿ.


ಶಿವಮೊಗ್ಗ ನಗರದಲ್ಲಿ ೧೦ ಗಂಟೆ ನಂತರವೂ ಕೆಲವರು ಅನಗತ್ಯವಾಗಿ ರಸ್ತೆಗಿಳಿದು ಪೊಲೀಸರಿಂದ ತಪ್ಪಿಸಿಕೊಳ್ಳಲು ಹಲವು ಕಾರಣಗಳನ್ನು ನೀಡುತ್ತಾ ಓಡಾಡುತ್ತಿರುವುದು ಕಂಡುಬರುತ್ತಿದೆ ವ್ಯಾಕ್ಸಿನೇಷನ್, ಆಸ್ಪತ್ರೆಗೆ, ಸಿಲಿಂಡರ್, ಮೆಡಿಕಲ್ ಎಂಬ ಹಲವಾರು ಕಾರಣಗಳನ್ನು ನೀಡುತ್ತಾ ಅನಗತ್ಯವಾಗಿ ಓಡಾಟವನ್ನು ಮುಂದುವರೆಸಿದ್ದಾರೆ.

ಶಿವಮೊಗ್ಗ ಮಹಾನಗರ ಪಾಲಿಕೆ ಪ್ರಕಟಣೆ

  • ಕೊರೋನಾ ಮಹಾಮಾರಿ ರಾಜ್ಯಾದ್ಯಂತ ವ್ಯಾಪಿಸುತ್ತಿದೆ. ಕೋವಿಡ್ ಮಾರ್ಗಸೂಚಿ ತಪ್ಪದೇ ಪಾಲಿಸಿ, ಆರೋಗ್ಯದಿಂದಿರಿ. ರಾಜ್ಯ ಸರ್ಕಾರದಿಂದ ಮೇ. 10 ರಿಂದ ಮೇ.24 ರ ಬೆಳಿಗ್ಗೆ 6 ರವರೆಗೆ ಲಾಕ್ ಡೌನ್ ವಿಧಿಸಲಾಗಿರುತ್ತದೆ.
  • ಯಾವುದೇ ಮದುವೆಗೆ ಗರಿಷ್ಟ 40 ಜನರಿಗೆ ಮಾತ್ರ ಅವಕಾಶ. ಪಾಸ್ ಕಡ್ಡಾಯ.
  • ನಿಧನ-ಶವಸಂಸ್ಕಾರ ಐವರಿಗೆ ಮಾತ್ರ ಅವಕಾಶ.
  • ಪ್ರತಿದಿನ ಬೆಳಿಗ್ಗೆ 6 ರಿಂದ 10 ಗಂಟೆಯವರೆಗೆ, ಮನೆಗೆ ಬೇಕಾದ ಅವಶ್ಯಕ ಸಾಮಾಗ್ರಿಗಳು, ಆಹಾರ,
  • ದಿನಸಿ, ಹಣ್ಣು, ತರಕಾರಿ, ಮೀನು, ಮಾಂಸ ಹಾಗೂ ಮದ್ಯ , ಡೈರಿ ಮತ್ತು ಹಾಲಿನ ಬೂತ್ ಗಳು ಹೋಟೆಲ್ ಗಳಲ್ಲಿ ಪಾರ್ಸೆಲ್ ವ್ಯವಸ್ಥೆ ಕಾರ್ಯ ನಿರ್ವಹಿಸಲಿವೆ.
  • ಶಿವಮೊಗ್ಗ ನಗರದ ಆರು ಭಾಗದಲ್ಲಿ ಮಾತ್ರ ತರಕಾರಿ ಮಾರಾಟಕ್ಕೆ ಅವಕಾಶ ನೀಡಲಾಗಿದೆ.
  • ಬ್ಯಾಂಕ್, ಎಟಿಎಂ ತೆರೆದಿರುತ್ತದೆ.
  • ಅಗತ್ಯ ವೈದ್ಯಕೀಯ ಸೇವೆಗಳು ದಿನದ 24 ಗಂಟೆಗಳು ಕಾರ್ಯನಿರ್ವಹಿಸಲಿವೆ.
  • ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ.
  • ನೀವು ಆರೋಗ್ಯವಾಗಿರಿ – ಸಮಾಜವನ್ನು ಆರೋಗ್ಯವಾಗಿಡಿ.
  • ನಿಯಮ ಪಾಲನೆ ಮಾಡಿ – ದಂಡ ಪಾವತಿಯಿಂದ ದೂರವಿರಿ.


ನಗರದಲ್ಲಿ ಪೊಲೀಸರು ಪ್ರತಿ ದಿನ ವಾಹನಗಳನ್ನು ವಶಪಡಿಸಿಕೊಳ್ಳುತ್ತಿದ್ದರೂ ಸಹ ಸಾರ್ವಜನಿಕರು ಬುದ್ದಿ ಕಲಿತಿಲ್ಲ. ಅನಗತ್ಯ ಒಡಾಡುತ್ತಾ ಸರ್ಕಾರದ ಕೊರೊನಾ ನಿಯಮಗಳನ್ನು ಗಾಳಿಗೆ ತೂರುತ್ತಿದ್ದಾರೆ.

ಶಿವಮೊಗ್ಗ ನಗರದ ವಿನೋಬನಗರ ಠಾಣಾ ವ್ಯಾಪ್ತಿಯಲ್ಲಿ ಕೆಲ ಜಿಮ್‌ಗಳನ್ನು ತೆರೆಯುತ್ತಿದ್ದು, ಪೊಲೀಸರಿಗೆ ಕಾಣದ ಹಾಗೇ ಬಾಗಿಲು ಹಾಕಿಕೊಂಡು, ವಾಹನಗಳನ್ನು ಬೇರೆಡೆ ನಿಲ್ಲಿಸಿ ಜಿಮ್ ಮಾಡುತ್ತಿರುವ ವರದಿಗಳು ಪತ್ರಿಕೆ ಲಭಿಸಿದ್ದು, ಹಾಗೆಯೇ ಇದೇ ಠಾಣಾ ವ್ಯಾಪ್ತಿಯಲ್ಲಿ ರಾತ್ರಿ ೯ಗಂಟೆಯಾದರೂ ಸಹ ಚಿಕನ್ ಅಂಗಡಿಗಳು ಬಾಗಿಲು ತೆಗೆದಿರುವುದನ್ನು ಸಹ ನೋಡಬಹುದಾಗಿದೆ. ಒಟ್ಟಾರೆ ಶಿವಮೊಗ್ಗದಲ್ಲಿ ರಾಜ್ಯ ಸರ್ಕಾರದ ಕಠಿಣ ಲಾಕ್‌ಡೌನ್‌ಗೆ ಬೆಲೆ ಇಲ್ಲದಂತಾಗಿದೆ

By admin

ನಿಮ್ಮದೊಂದು ಉತ್ತರ

error: Content is protected !!