ಶಿವಮೊಗ್ಗ : ನಿನ್ನೆ ರಾತ್ರಿ ೧೧.೩೦ರ ಸುಮಾರಿಗೆ ನಗರದ ಮಹಾವೀರ ವೃತ್ತದಲ್ಲಿ ಆಟೋ ಮತ್ತು ಕಾರು ಡಿಕ್ಕಿಯಾಗಿ ಆಟೋ ಚಾಲಕ ಅಣ್ಣಾನಗರ ನಿವಾಸಿ ಅಲ್ತಾಫ್ಪಾಷಾ (೨೫) ಸ್ಥಳದಲ್ಲೇ ಮೃತಪಟ್ಟಿದ್ದು, ಆಟೋ ಮತ್ತು ಕಾರಿನಲ್ಲಿದ್ದ ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿದೆ. ಕಾರಿನಲ್ಲಿದ್ದವರು ಮಣಿಪಾಲದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆಟೋ ಚಾಲಕನ ಪತ್ನಿ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಗೋಪಿವೃತ್ತದಿಂದ ರೈಲ್ವೇ ನಿಲ್ದಾಣಕ್ಕೆ ವೇಗವಾಗಿ ಬರುತ್ತಿದ್ದ ಆಟೋ ಶಿವಮೂರ್ತಿ ವೃತ್ತದಿಂದ ಡಿ.ವಿ.ಎಸ್. ವೃತ್ತದ ಕಡೆಗೆ ಚಲಿಸುತ್ತಿದ್ದ ಕಾರಿಗೆ ಡಿಕ್ಕಿಯಾಗಿದ್ದು, ಈ ಅವಘಡ ಸಂಭವಿಸಿದೆ.

ಸಂಚಾರಿ ಪೂರ್ವ ಠಾಣಾ ಪೊಲೀಸರು ಈ ಸಂಬಂಧ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.