
ಶಿವಮೊಗ್ಗ,ಡಿ.1: ಅಧಿಕಾರಕ್ಕಾಗಿ ಕಾಂಗ್ರೆಸ್ ನಾಯಕರು ಏನಾದರೂ ಮಾಡಲಿ ಆದರೆ ಅಭಿವೃದ್ಧಿಯನ್ನು ಮಾಡದೇ ಇರುವುದು ಸರಿಯಲ್ಲ, ಕಾಂಗ್ರೆಸ್ ಪಕ್ಷದ ರಾಜಕಾರಣ ಸ್ವಾರ್ಥಕ್ಕೆ ಬಳಕೆಯಾಗುತ್ತಿದೆ ಎಂದು ಬಿಜೆಪಿ ಮುಖಂಡ ಹಾಗೂ ಮಾಜಿ ಸಚಿವ ಕುಮಾರ್ ಬಂಗಾರಪ್ಪ ಹೇಳಿದರು.

ಅವರು ಇಂದು ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ಪಕ್ಷದಲ್ಲಿ ಅಧಿಕಾರಕ್ಕಾಗಿ ಗೊಂದಲಗಳು ಎದ್ದಿವೆ ನಿಜ. ಆದರೆ ಅದನ್ನು ಅವರು ನಿವಾರಿಸಿಕೊಳ್ಳುತ್ತಾರೆ. ಜನರ ಅಪೇಕ್ಷೆಯಂತೆ ಅಧಿಕಾರಕ್ಕೆ ಬಂದ ಅವರು, ರಾಜ್ಯದ ಜನತೆಗೆ ಅವಮಾನ ಮಾಡಿದ್ದಾರೆ. ಜನರ ನಿರೀಕ್ಷೆ ಹುಸಿಯಾಗಿವೆ. ಅಭಿವೃದ್ಧಿಗಳು ಕುಂಠಿತವಾಗಿದೆ. ಹಣಕಾಸು ಪರಿಸ್ಥಿತಿ ಉತ್ತಮವಾಗಿಲ್ಲ, ಭ್ರಷ್ಟಾಚಾರ ಕಂಡು ಬರುತ್ತಿದೆ. ಬಂಡವಾಳ ಹೂಡಿಕೆದಾರರು ರಾಜ್ಯಕ್ಕೆ ಬರುತ್ತಿಲ್ಲ ಈ ಬಗ್ಗೆ ಅವರು ಗಮನಹರಿಸಬೇಕಾಗಿದೆ ಎಂದರು.

ಬಿಜೆಪಿ ಪಕ್ಷದಲ್ಲಿ ಮಾತನಾಡುವ ಸ್ವಾತಂತ್ರ್ಯ ನಮಗೂ ಇದೆ. ಹಾಗಂತ ಪಕ್ಷದ ವಿರುದ್ಧ ಕೆಲಸ ಮಾಡುತ್ತಿಲ್ಲ. ನಮ್ಮದೂ ಒಂದು ಗುಂಪಿದೆ. ಆ ಗುಂಪಿನಲ್ಲಿ ನಮ್ಮ ಅಭಿಪ್ರಾಯವನ್ನು ಹೇಳುತ್ತೇವೆ ಅಷ್ಟೇ. ಇದು ಬಂಡಾಯವಲ್ಲ ಆಂತರಿಕ ಸ್ವಾತಂತ್ರ್ಯದಿಂದ ನಮ್ಮ ಅಭಿಪ್ರಾಯಗಳನ್ನು ಹೇಳಿದ್ದೇವೆ. ಯತ್ನಾಳ್ ಮಾತಿಗೆ ನಮ್ಮ ಸಹಮತವಿದೆ. ಆದರೆ ಅವರು ಪಕ್ಷ ಕಟ್ಟುವ ಬಗ್ಗೆ ನಮ್ಮ ಸಹಮತವಿಲ್ಲ ಯತ್ನಾಳ್ ಬಿಜೆಪಿಗೆ ಬಂದೇ ಬರುತ್ತಾರೆ. ಅವರು ನಮ್ಮ ಜೊತೆ ಸಂಪರ್ಕದಲ್ಲಿದ್ದಾರೆ ಎಂದರು.

ನಮ್ಮ ಗುಂಪು ಈಗಾಗಲೇ ರಾಜ್ಯದಲ್ಲಿ ನುಸುಳುಕೋರರ ಬಗ್ಗೆ, ಜನಗಣತಿಯ ವಿವಾದದ ಬಗ್ಗೆ, ಭ್ರಷ್ಟಾಚಾರ ಕುರಿತಂತೆ ಅಭಿವೃದ್ಧಿಯ ಹಿನ್ನಡೆ ಸೇರಿದಂತೆ ಹಲವು ವಿಷಯಗಳತ್ತ ಧ್ವನಿ ಎತ್ತಿದ್ದೇವೆ. ಬಿಜೆಪಿ ರಾಜ್ಯಾಧ್ಯಕ್ಷರ ನೇಮಕಕ್ಕೆ ಸಂಬಂಧಿಸಿದಂತೆ ಪ್ರಕ್ರಿಯೆಗಳು ಈಗಾಗಲೇ ನಡೆಯುತ್ತಿವೆ. ಪಕ್ಷದ ಹಿತದೃಷ್ಟಿಯಿಂದ ಅಧ್ಯಕ್ಷರ ಬದಲಾವಣೆ ಅನಿವಾರ್ಯ ಎಂಬುದು ನಮ್ಮ ಅಭಿಪ್ರಾಯ ಎಂದರು.
ಈ ಸುದ್ದಿಗಳನ್ನೂ ಓದಿ
ಮಕ್ಕಳಿಗೆ ಶಿಕ್ಷಣದ ಜೊತೆ ಜ್ಞಾನ, ಸಂಸ್ಕಾರವೂ ಮುಖ್ಯ: ಡಾ.ಚಂದ್ರಶೇಖರ್
ರಾಮಕೃಷ್ಣ ಗುರುಕುಲದಲ್ಲಿ ಜ್ಞಾನ, ವಿಜ್ಞಾನ, ಸೃಜನಶೀಲ ದಿನಾಚರಣೆ https://tungataranga.com/?p=47206
ಸಂಪೂರ್ಣ ಸುದ್ದಿ ಓದಲು ಆಯಾ ಲಿಂಕ್ ಬಳಸಿ
ಗಮನಿಸಿ ಕಿರಿಕಿರಿ ಇಲ್ಲದ ಸುದ್ದಿವಾಹಿನಿಯ ತುಂಗಾತರಂಗ ಗುಂಪಲ್ಲಿ ಇಲ್ಲದವರು ಮಾತ್ರ ಕೆಳಗಿನ ಲಿಂಕಲ್ಲಿ ಸೇರಿ
https://chat.whatsapp.com/H3sil66ffIHBiBPibzk7Nw?mode=wwc
ಡಿ.3 ರಂದು ಗುಡ್ಡೆಕಲ್ ಬಾಲಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಕಾರ್ತಿಕ ದೀಪೋತ್ಸವ https://tungataranga.com/?p=47229*
ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ- ಆರೋಪಿಗೆ10 ವರ್ಷ ಕಠಿಣ ಶಿಕ್ಷೆ/ 61 ಸಾವಿರ ದಂಡ https://tungataranga.com/?p=47220
ಸಂಪೂರ್ಣ ಸುದ್ದಿ ಓದಲು ಆಯಾ ಲಿಂಕ್ ಬಳಸಿ
ಗಮನಿಸಿ ಕಿರಿಕಿರಿ ಇಲ್ಲದ ಸುದ್ದಿವಾಹಿನಿಯ ತುಂಗಾತರಂಗ ಗುಂಪಲ್ಲಿ ಇಲ್ಲದವರು ಮಾತ್ರ ಕೆಳಗಿನ ಲಿಂಕಲ್ಲಿ ಸೇರಿ
https://chat.whatsapp.com/H3sil66ffIHBiBPibzk7Nw?mode=wwc
ಕಾಂಗ್ರೆಸ್ ಪಕ್ಷವನ್ನು ಬೀಳಿಸುವ ಇರಾದೆ ನಮಗಿಲ್ಲ. ಆ ಮೂಲಕ ರಾಜಕೀಯ ಅಸ್ಥಿರತೆ ಉಂಟಾಗಬಾರದು. ಸರ್ಕಾರವನ್ನು ಬೀಳಿಸಲೂ ಬಾರದು. ಅವರ ಪಕ್ಷದ ತೀರ್ಮಾನಗಳು ಅವರಿಗೇ ಬಿಟ್ಟದ್ದು ಆದರೆ ಈ ಸಂದರ್ಭದಲ್ಲಿ ಸಂಪುಟ ಬದಲಾವಣೆ ಸೂಕ್ತವಾದದ್ದು ಎಂಬುದು ನಮ್ಮ ಅಭಿಪ್ರಾಯ. ಸೊರಬ ಸೇರಿದಂತೆ ರಾಜ್ಯದ ಎಲ್ಲಿಯೂ ಅಭಿವೃದ್ಧಿಯಾಗಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಅಭಿವೃದ್ಧಿಯತ್ತ ಗಮನವನ್ನೇ ಹರಿಸಿಲ್ಲ. ಅವರಿಗೆ ಅನುಭವನದ ಕೊರತೆಯಿದೆ ಎಂದರು.