ಶಿವಮೊಗ್ಗ, ನ.18:
ಇಲ್ಲಿನ ಬೊಮ್ಮನಕಟ್ಟೆ ನಿವಾಸಿ, ವಕೀಲ ಗಿರೀಶ್ ರವರು ನಿಧನ ಹೊಂದಿದ್ದಾರೆ.
ಸಾಧುಶೆಟ್ಟಿ ಸಮಾಜದ ಪ್ರಮುಖರೂ ಆದ ಗಿರೀಶ್ ಸರಳ ಸಜ್ಹನಿಕೆಯ, ಆತ್ಮೀಯ ಸ್ನೇಹಜೀವಿ. ಅವರಿಗೆ 42 ವರ್ಷ ವಯಸ್ಸಾಗಿತ್ತು.
ಮೃತರು ಪತ್ನಿ, ಮಗಳು, ಮಗ ಸೇರಿದಂತೆ ಅಪಾರ ಕುಟುಂಬದ ಬಂಧುಬಳಗ ಹಾಗೂ ಸ್ನೇಹ ಜೀವಿ ಗೆಳೆಯರನ್ನ ಬಿಟ್ಟು ಅಗಲಿದ್ದಾರೆ.
ಇವರ ಆತ್ಮಕ್ಕೆ ಪರಮಾತ್ಮನು ಶಾಂತಿಯನ್ನು ಕರುಣಿಸಲಿ ಹಾಗೂ ಇವರ ಅಗಲಿಕೆಯ ದುಃಖವನ್ನು ಭರಿಸುವಂತಹ ಶಕ್ತಿಯನ್ನ ಪರಮಾತ್ಮನು ಅವರ ಕುಟುಂಬಕ್ಕೆ ನೀಡಲೆಂದು ಸ್ನೇಹಿತರು, ಹಿರಿಯರೂ ಪ್ರಾರ್ಥಿಸಿದ್ದಾರೆ.