ಶಿಕಾರಿಪುರ : ಅನುಮತಿ ಇಲ್ಲದೇ ಶಿಕಾರಿಪುರ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿರುವ ಮರಗಳನ್ನು ಕಡಿದಿರುವ ಹಿನ್ನೆಲೆಯಲ್ಲಿ ಇಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ತೆರಳಿ ಪರಿಶೀಲನೆ ನಡೆಸಿದರು.

ಕಾಲೇಜು ಪ್ರಾಂಶುಪಾಲರು ಶಾಸಕರ ಮತ್ತು ಸಂಬಂಧಪಟ್ಟ ಇಲಾಖಾಧಿಕಾರಿಗಳ ಅನುಮತಿಯಿಲ್ಲದೇ, ಕೆಲವು ಮರಗಳನ್ನು ಕಡಿಯಲಾಗಿದ್ದು ಈ ಕುರಿತು ಪ್ರಾಂಶುಪಾಲರನ್ನು ವಿಚಾರಣೆ ನಡೆಸಿದರು. ಅಲ್ಲದೇ, ಮರಗಳ ಕಡಿತದಿಂದಾಗಿ ನಷ್ಟವುಂಟಾಗಿದ್ದು,

ಎಚ್ಚರಿಕೆ ನೀಡಿ, ಕೂಡಲೇ ಪರ್ಯಾಯ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದರು. ಜೊತೆಗೆ ಈ ಘಟನೆ ಪುನರಾವರ್ತನೆಯಾಗದಂತೆ ಎಚ್ಚರಿಕೆ ವಹಿಸಲು ಸೂಚಿಸಿದರು.