ಶಿವಮೊಗ್ಗ: ಕನ್ನಡ ರಾಜ್ಯೋತ್ಸವದ ಅಂಗವಾಗಿ ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘ, ಜಿಲ್ಲಾ ಶಾಲೆ ಶಿವಮೊಗ್ಗದ ವತಿಯಿಂದ ನವೆಂಬರ್ 16ರಂದು ಸಂಘದ ಸದಸ್ಯರಿಗೆ ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಕ್ರೀಡೆಯಲ್ಲಿ ಸಂಘದ ಎಲ್ಲಾ ಸದಸ್ಯರುಗಳು ಭಾಗವಹಿಸಲು ಸಂಘದ ಅಧ್ಯಕ್ಷರಾದ ಎಸ್.ಆರ್. ಚಂದ್ರಪ್ಪ ಹಾಗೂ ಪ್ರಧಾನ ಕಾರ್ಯದರ್ಶಿ ಎಸ್.ಷಣ್ಮುಖಪ್ಪ ಇವರು ಕೋರಿದ್ದಾರೆ.

ವಯೋಮಿತಿಯ ಆಧಾರದ ಮೇರೆಗೆ ಎರಡು ಭಾಗಗಳಾಗಿ ಮಹಿಳೆಯರು ಮತ್ತು ಪುರುಷರಿಗೆ ಅನ್ವಯವಾಗುವಂತೆ 1ನೇ ವಿಭಾಗದಲ್ಲಿ 70 ವರ್ಷದೊಳಗಿನ ಸದಸ್ಯರಿಗೆ ಹಾಗೂ ಎರಡನೇ ವಿಭಾಗದಲ್ಲಿ 70 ವರ್ಷ ಮೇಲ್ಪಟ್ಟವರಿಗಾಗಿ ಏರ್ಪಡಿಸಲಾಗಿದೆ.
ಬೆಳಿಗ್ಗೆ 10 ಗಂಟೆಗೆ ಕ್ರೀಡೆಗಳು ಪ್ರಾರಂಭವಾಗಲಿವೆ. ಅದೇ ದಿನ ತಾಲ್ಲೂಕು ಪಂಚಾಯಿತಿ ರಸ್ತೆಯ ಜಿಲ್ಲಾಧಿಕಾರಿ ಕಚೇರಿ ಆವರಣದ ಸಂಘದ ಕಚೇರಿಯಲ್ಲಿ ಹೆಸರು ನೋಂದಾಯಿದಿಕೊಳ್ಳಬೇಕು.
ಮಹಿಳೆಯರಿಗೆ:1) ಚಮಚದಲ್ಲಿ ನಿಂಬೆಹಣ್ಣಿನ ನಡಿಗೆ, 2) ಬೇಬಿ ಪಾಸ್ ರಿಲೇ ನಡೆಯಲಿವೆ.

ಪುರುಷರಿಗೆ:1) ಗುಂಡು ಎಸೆತ (ಷಾಟ್ ಪುಟ್),2) ಬ್ಲಾಸ್ಟ್ ಇನ್ ದ ಸಿಟಿ, ಸಾಂಸ್ಕೃತಿಕ ಸ್ಪರ್ಧೆ: ಅದೇ ದಿನ ಸಂಜೆ 5 ಗಂಟೆಗೆ ಜನಪದ ಗೀತೆ, ಭಾವಗೀತೆ ಗಾಯನ ಇರಲಿದೆ. ಮಹಿಳೆಯರು ಮತ್ತು ಪುರುಷರಿಗೆ ಪ್ರತ್ಯೇಕ ಸ್ಪರ್ಧೆ ನಡೆಯಲಿವೆ.
ವಿ.ಸೂ: ಸ್ಪರ್ಧೆಯಲ್ಲಿ ಭಾಗವಹಿಸುವವರು ಯಾವುದಾದರೂ ಎರಡು ಸ್ಪರ್ಧೆಯಲ್ಲಿ ಮಾತ್ರ ಭಾಗವಹಿಸತಕ್ಕದ್ದು. ಸಂಘದ ಸದಸ್ಯತ್ವ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ತರಬೇಕು ಎಂದು ತಿಳಿಸಿದ್ದಾರೆ.