ಶಿವಮೊಗ್ಗ : ಕರ್ನಾಟಕದಲ್ಲಿ ಮುಂದಿನ ಎರಡುವರೆ ವರ್ಷದ ಅವಧಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ರವರನ್ನು ರಾಜ್ಯದ ಮುಖ್ಯಮಂತ್ರಿ ಆಗಲಿ ಎಂದು ಆಗ್ರಹಿಸಿ ಇಂದು ಬೆಳಗ್ಗೆ ಶಿವಮೊಗ್ಗ ನಗರದ ಗೋಪಿ ಸರ್ಕಲ್ನಲ್ಲಿ ಕೆಪಿಸಿಸಿ ಕಾರ್ಯದರ್ಶಿ ಕೆ.ದೇವೇಂದ್ರಪ್ಪನವರ ನೇತೃತ್ವದಲ್ಲಿ ಪ್ಲೇಕಾರ್ಡ್ ಹಿಡಿದು ಪಕ್ಷದ ವರಿಷ್ಟರಿಗೆ ಒತ್ತಾಯಿಸಲಾಯಿತು.
ಡಿ.ಕೆ.ಶಿವಕುಮಾರ್ ಅವರು, ದೇಶದ ಯಾವುದೇ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸಂಕಷ್ಟ ಬಂದಾಗ ಆ ಸಂಕಷ್ಟವನ್ನು ತಮ್ಮದೇ ರೀತಿಯಲ್ಲಿ ಬಗೆಹರಿಸಿದ್ದಾರೆ. ಟ್ರಬಲ್ ಶೂಟರ್ ಎಂದೆ ಹೆಸರು ಮಾಡಿರುವ ಡಿ.ಕೆ. ಶಿವಕುಮಾರ್ ಅವರು ವಿದ್ಯಾರ್ಥಿ ಕಾಂಗ್ರೆಸ್, ಯುವ ಕಾಂಗ್ರೆಸ್, ಸೇರಿದಂತೆ ಕಾಂಗ್ರೆಸ್ನ ವಿವಿಧ ಜವಾಬ್ದಾರಿವಹಿಸಿ ಕೆಲಸಮಾಡಿ ಬೆಳೆಸಿ ವಿದ್ಯಾರ್ಥಿ ಮತ್ತು ಯುವಕರನ್ನು ಹೋರಾಟಗಾರರಾಗಿ ರೂಪಿಸಿ ಸಮಾಜಕ್ಕೆ ಒಂದು ಕೊಡುಗೆಯಾಗಿ ಕೊಟ್ಟಿದ್ದಾರೆ.

ಕಳೆದ ೩೦ ವರ್ಷಗಳಿಂದ ಹಲವರು ಹೋರಾಟದ ರೂಪುರೇಷೆಗಳನ್ನು ಸಿದ್ಧಪಡಿಸಿಕೊಂಡು ಕಾಂಗ್ರೆಸ್ ಪಕ್ಷವನ್ನು ರಾಜ್ಯದಲ್ಲಿ ಬಲಿಷ್ಠವಾಗಿ ಪಕ್ಷವನ್ನು ಕಟ್ಟಿದ್ದಾರೆ. ಕಳೆದ ಹತ್ತು ವರ್ಷಗಳಿಂದ ಡಿ.ಕೆ. ಶಿವಕುಮಾರ್ ಕಾಲಿಗೆ ಚಕ್ರವನ್ನು ಕಟ್ಟಿಕೊಂಡು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಬಲಿಷ್ಠವಾಗಿ ಕಟ್ಟಿ ಹಿಂದುಳಿದ ವರ್ಗದ ನಾಯಕರು ಆದಂತಹ ಸಿದ್ದರಾಮಯ್ಯನವರನ್ನು ಈಗಾಗಲೇ ಐದು ವರ್ಷಗಳ ಕಾಲ ಮುಖ್ಯಮಂತ್ರಿಯನ್ನಾಗಿ ಮಾಡಿ ಸಿದ್ದರಾಮಯ್ಯನವರು ರಾಜ್ಯದಲ್ಲಿ ಸಮರ್ಥ ಆಡಳಿತವನ್ನು ಕೊಟ್ಟು ಬಡವರ ದಲಿತರ ಕಾರ್ಮಿಕರ ಕಾರ್ಯಕ್ರಮಗಳನ್ನು ರೂಪಿಸಿ ಅನ್ನ ರಾಮಯ್ಯ ಎಂದು ಪ್ರಸಿದ್ಧಿಯಾಗಿ ಸಮರ್ಥ ಆಡಳಿತ ಮಾಡಿದ್ದಾರೆ.

ಮತ್ತೆ ಚುನಾವಣೆ ಬಂದು ಕಳೆದ ಎರಡು ವರ್ಷಗಳಿಂದ ಪಂಚ ಗ್ಯಾರಂಟಿಗಳಿಂದ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈಗಾಗಲೇ ರಾಜ್ಯದಲ್ಲಿ ಸಮರ್ಥ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಮತ್ತು ಸಮರ್ಥ ಸರ್ಕಾರವನ್ನು ನಿಭಾಯಿಸುವಲ್ಲಿ ಹೆಸರಾಗಿದ್ದಾರೆ.. ಕಳೆದ ಏಳು ವರೆ ವರ್ಷಗಳ ಕಾಲ ರಾಜ್ಯದ ಮುಖ್ಯಮಂತ್ರಿ ಆಗಿರೋದು ನಮ್ಮೆಲ್ಲರ ಭಾಗ್ಯ. ಅದೇ ರೀತಿ ಕರ್ನಾಟಕ ರಾಜ್ಯದಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷವನ್ನ ಬಲಿಷ್ಠವಾಗಿ ಕಟ್ಟಿದ್ದಾರೆ.
ಅವರನ್ನು ಮುಂದಿನ ಎರಡುವರೆ ವರ್ಷದ ಅವಧಿಗೆ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯನ್ನಾಗಿ ನೇಮಕಮಾಡಿ ಕರ್ನಾಟಕದಲ್ಲಿ ರಾಜ್ಯದ ಜನರ ಸೇವೆ ಮಾಡಲು ಹಾಗೂ ಮುಂದಿನ ದೀರ್ಘವಾದಂತಹ ಕಾಂಗ್ರೆಸ್ ಪಕ್ಷವನ್ನು ಕಟ್ಟಲು ಅವರ ಸೇವೆ ಅನಿವಾರ್ಯವಾಗಿದ್ದು ಕೂಡಲೇ ಅವರಿಗೆ ಮುಂದಿನ ಎರಡು ವರ್ಷದ ಅವಧಿಗೆ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸಲು ಕೇಂದ್ರದ ವರಿಷ್ಠರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ವೇಣುಗೋಪಾಲ್, ಸುರ್ಜೆವಾಲ ಅವರು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಅವರ ಗಮನ ಸೆಳೆಯಲು ಇಂದು ಶಿವಮೊಗ್ಗ ನಗರದ ಗೋಪಿ ಸರ್ಕಲ್ನಲ್ಲಿ ಪ್ಲೇ ಕಾರ್ಡ್ ಮೂಲಕ ಕೇಂದ್ರ ಕಾಂಗ್ರೆಸ್ ನಾಯಕರನ್ನು ಒತ್ತಾಯಿಸಲಾಯಿತು.
ಈ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲಾ ಐಎನ್ಟಿಯುಸಿ ಅಧ್ಯಕ್ಷೆ ಕವಿತಾ ರಾಘವೇಂದ್ರ, ಎಂ. ಮಕ್ಬುಲ್ ಅಹಮದ್, ಹಿಂದುಳಿದ ವರ್ಗಗಳ ಮುಖಂಡರಾದ ಹರ್ಷ, ಫ್ಲವರ್ ಕುಮಾರ್, ಕೆಪಿಸಿಸಿ ಸಂಯೋಜಕಿ ಹಾಗೂ ಮರಾಠ ಸಮಾಜದ ಕವಿತಾ, ಮಾಜಿ ಕಾರ್ಪೊರೇಟರ್ ಹಾಗೂ ಅಲ್ಪಸಂಖ್ಯಾತ ಮುಖಂಡರು, ಜಿಲ್ಲಾ ಕಾಂಗ್ರೆಸ್ ಮುಖಂಡರಾದ ನಿಸಾರ್ ಅಹಮದ್, ಶಮೀಮ್ ಬಾನು, ಲೇಬರ್ ಕಾಂಗ್ರೆಸ್ ನಗರ ಅಧ್ಯಕ್ಷರಾದ ರಮೇಶ್, ಶ್ರೀನಿವಾಸ್, ಸಾಮಾಜಿಕ ಮುಖಂಡ, ಜಮಿಲ್ ಅಹಮದ್, ಬೊಮ್ಮನಕಟ್ಟೆ ಅನಂತು, ನವುಲೆ ಸಂತೋಷ್, ಪ್ರೇಮ್ ಕುಮಾರ್ ಮುಂತಾದ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಭಾಗವಹಿಸಿದರು.