ಶಿವಮೊಗ್ಗ,ಮೆ.20:
ಶಿವಮೊಗ್ಗ ನಗರದ ಗಾಂಧಿಬಜಾರ್ ಅಕ್ಕಪಕ್ಕ ಬಡಾವಣೆಗಳ ಸುಮಾರು ಹತ್ತಕ್ಕೂ ಹೆಚ್ಚು ವಾಹನಗಳ ಗ್ಲಾಸ್ ಗಳನ್ನುವಿಕೃತ ವ್ಯಕ್ತಿಗಳು ಪುಡಿಪುಡಿ ಮಾಡಿರುವ ಘಟನೆ ಮದ್ಯರಾತ್ರಿ ನಡೆದಿದೆ.
ಇಲ್ಲಿನ ಎಂಕೆಕೆ ರಸ್ತೆ, ಗಾಂಧಿಬಜಾರ್ ಹಾಗೂ ಸಿದ್ದಯ್ಯ ರಸ್ತೆ, ಮಂಜುನಾಥ ಟಾಕೀಸ್ ರಸ್ತೆಯಲ್ಲಿ ಮನೆಯ ಮುಂಭಾಗ ನಿಲ್ಲಿಸಿದ ಸುಮಾರು 10ರಿಂದ 12 ಕಾರುಗಳ ಗ್ಲಾಸ್ ಗಳನ್ನು ಹೊಡೆದು ಹಾಕಿರುವ ಪ್ರಕರಣ ಇಂದು ಬೆಳಗಿನ ಜಾವ ಬೆಳಕಿಗೆ ಬಂದಿದೆ.

  • ಶಿವಮೊಗ್ಗ ಮಹಾನಗರ ಪಾಲಿಕೆ ಪ್ರಕಟಣೆ
  • ಕೊರೋನಾ ಮಹಾಮಾರಿ ರಾಜ್ಯಾದ್ಯಂತ ವ್ಯಾಪಿಸುತ್ತಿದೆ.
    ಕೋವಿಡ್ ಮಾರ್ಗಸೂಚಿ ತಪ್ಪದೇ ಪಾಲಿಸಿ, ಆರೋಗ್ಯದಿಂದಿರಿ. ರಾಜ್ಯ ಸರ್ಕಾರದಿಂದ ಮೇ. 10 ರಿಂದ ಮೇ.24 ರ ಬೆಳಿಗ್ಗೆ 6 ರವರೆಗೆ ಲಾಕ್ ಡೌನ್ ವಿಧಿಸಲಾಗಿರುತ್ತದೆ.
    ” ಯಾವುದೇ ಮದುವೆಗೆ ಗರಿಷ್ಟ 40 ಜನರಿಗೆ ಮಾತ್ರ ಅವಕಾಶ. ಪಾಸ್ ಕಡ್ಡಾಯ.
    ” ನಿಧನ-ಶವಸಂಸ್ಕಾರ ಐವರಿಗೆ ಮಾತ್ರ ಅವಕಾಶ.
  • ಪ್ರತಿದಿನ ಬೆಳಿಗ್ಗೆ 6 ರಿಂದ 10 ಗಂಟೆಯವರೆಗೆ, ಮನೆಗೆ ಬೇಕಾದ ಅವಶ್ಯಕ ಸಾಮಾಗ್ರಿಗಳು, ಆಹಾರ, ದಿನಸಿ, ಹಣ್ಣು, ತರಕಾರಿ, ಮೀನು, ಮಾಂಸ ಹಾಗೂ ಮದ್ಯ , ಡೈರಿ ಮತ್ತು ಹಾಲಿನ ಬೂತ್ ಗಳು ಹೋಟೆಲ್ ಗಳಲ್ಲಿ ಪಾರ್ಸೆಲ್ ವ್ಯವಸ್ಥೆ ಕಾರ್ಯ ನಿರ್ವಹಿಸಲಿವೆ.
    ಶಿವಮೊಗ್ಗ ನಗರದ ಆರು ಭಾಗದಲ್ಲಿ ಮಾತ್ರ ತರಕಾರಿ ಮಾರಾಟಕ್ಕೆ ಅವಕಾಶ ನೀಡಲಾಗಿದೆ.
  • ಬ್ಯಾಂಕ್, ಎಟಿಎಂ ತೆರೆದಿರುತ್ತದೆ.
  • ಅಗತ್ಯ ವೈದ್ಯಕೀಯ ಸೇವೆಗಳು ದಿನದ 24 ಗಂಟೆಗಳು ಕಾರ್ಯನಿರ್ವಹಿಸಲಿವೆ.
    *ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ.
    *ನೀವು ಆರೋಗ್ಯವಾಗಿರಿ – ಸಮಾಜವನ್ನು ಆರೋಗ್ಯವಾಗಿಡಿ.
  • ನಿಯಮ ಪಾಲನೆ ಮಾಡಿ – ದಂಡ ಪಾವತಿಯಿಂದ ದೂರವಿರಿ.


ಮದ್ಯರಾತ್ರಿಯಿಂದ ಬೆಳಗಿನ ಜಾವ ನಾಲ್ಕರೊಳಗೆ ವಿಕೃತರು ಈ ರೀತಿ ದ್ವಂಸ ಮಾಡಿದ್ದಾರೆನ್ನಲಾಗಿದೆ.
ಸ್ಥಳಕ್ಕೆ ಜಿಲ್ಲಾ ರಕ್ಷಣಾಧಿಕಾರಿ ಲಕ್ಷ್ಮಿಪ್ರಸಾದ್, ಹೆಚ್ಚುವರಿ ರಕ್ಷಣಾಧಿಕಾರಿ ಟಿ.ಹೆಚ್. ಶೇಖರ್, ದೊಡ್ಡಪೇಟೆ ಇನ್ಸ್ ಪೆಕ್ಟರ್ ಹರೀಶ್ ಪಾಟೀಲ್, ಕೋಟೆ ಇನ್ಸ್ ಸ್ಪೆಕ್ಟರ್ ಚಂದ್ರಶೇಖರ್ ಬೇಟಿ ನೀಡಿ ಪರಿಶೀಲಿಸಿದರು.

By admin

ನಿಮ್ಮದೊಂದು ಉತ್ತರ

error: Content is protected !!