ಹುಡುಕಾಟದ ವರದಿ- ಸ್ವಾಮಿ
ಶಿವಮೊಗ್ಗ, ಅ.30:
ಮಹಾನಗರ ಪಾಲಿಕೆ ಆಸ್ತಿ ದಾಖಲೆಗಳ ಇ ಸ್ವತ್ತು ಮಾಡುವ ವಿಚಾರದಲ್ಲಿ ಮಹತ್ತರವಾದ ಕೆಲಸ ಮಾಡುತ್ತಿದೆ. ಅದರಲ್ಲೂ ಶಿವಮೊಗ್ಗ ನಗರದ 95 ಸಾವಿರದಷ್ಟು ಆಸ್ತಿಯಲ್ಲಿ ಅತಿ ಹೆಚ್ಚು ಆಸ್ತಿಯ ಇ ಸ್ವತ್ತು ಮಾಡಬೇಕಾದಂತಹ ವಿನೋಬನಗರ ವಲಯ ಒಂದರ ಕಾರ್ಯ ನಿಜಕ್ಕೂ ಅತ್ಯಂತ ಪ್ರಶಂಸನೀಯವಾಗಿದೆ ಎಂದು ಅಂಶಗಳು ಹೇಳುತ್ತಿವೆ.
45,000 ಆಸ್ತಿಗಳ ಈ ಸ್ವತ್ತು ಮಾಡಬೇಕಾದ ವಲಯ ಒಂದರ ವಿನೋಬನಗರ ಮಹಾನಗರ ಪಾಲಿಕೆಯ ಕಾರ್ಯದಲ್ಲಿ ಈಗಾಗಲೇ 11000 ಹೆಚ್ಚು ಆಸ್ತಿಗಳ ಈ ಸ್ವತ್ತನ್ನು ಮಾಡಲಾಗಿದೆ. ಶಿವಮೊಗ್ಗ ಮಹಾನಗರ ಪಾಲಿಕೆಯ ಆಯುಕ್ತ ಮಾಯಣ್ಣಗೌಡ ಅವರ ನೇತೃತ್ವದಲ್ಲಿ ಮೂರು ವಿಭಾಗಗಳು ನಡೆಯುತ್ತಿದ್ದು, ಪ್ರತಿವಾರ ಮಾಯಣ್ಣಗೌಡ ಅವರ ಭೇಟಿ ವಲಯಗಳ ಕಾರ್ಯವನ್ನು ಅತ್ಯಂತ ಕ್ಷಿಪ್ರವಾಗಿ ಮಾಡುವಂತೆ ಮಾಡಿದೆ ಎಂದರೆ ತಪ್ಪಾಗಲಿಕ್ಕಿಲ್ಲ.
ವಲಯ ಒಂದರ ಕಂದಾಯ ಅಧಿಕಾರಿ ನಾಗೇಂದ್ರ ಹಾಗೂ, ಎ ಆರ್ ಓ ಯಶವಂತ್, ಆರ್. ಐ.ಗಳಾದ ಕುಮಾರ್, ಜಗದೀಶ್, ಮಂಜಣ್ಣ, ರಂಗನಾಥ್ ಹಾಗೂ ಪ್ರಥಮ ಮತ್ತು ದ್ವಿತೀಯ ದರ್ಜೆ ನೌಕರರು ಮತ್ತು ಏಳು ಮಂದಿ ಡಾಟಾ ಎಂಟ್ರಿಗಳು ಈ 45,000 ಆಸ್ತಿಗಳ ಇ ಸ್ವತ್ತಿನ ಜವಾಬ್ದಾರಿ ಹೊತ್ತುಕೊಂಡಿದ್ದು ಎಲ್ಲಿಯೂ ಅನಗತ್ಯವಾಗಿ ದಾಖಲೆಗಳ ಪರಿಶೀಲನೆ ಹಾಗೂ ಇ ಸೊತ್ತಿನ ಪ್ರಕ್ರಿಯೆ ತೊಂದರೆಯಾಗದಂತೆ ನೋಡಿಕೊಳ್ಳುತ್ತಿರುವುದು ವಿಶೇಷವೆಂದು ಹೇಳಲಾಗುತ್ತಿದೆ.

ಬಹುತೇಕ ಸಾರ್ವಜನಿಕರು ವಲಯ ಒಂದರ ಕಾರ್ಯವನ್ನು ಅತ್ಯಂತ ಮುಕ್ತವಾಗಿ ಪ್ರಶಂಶಿಸಿದ್ದಾರೆ.
ಇನ್ನು ವಲಯ ಎರಡರ ಗೋಪಿ ಸರ್ಕಲ್ ಮಹಾನಗರ ಪಾಲಿಕೆ ಕಚೇರಿಯ ಒಟ್ಟು ವ್ಯಾಪ್ತಿಯ 34,000 ಆಸ್ತಿಗಳ ಈ ಸ್ವತ್ತು ನಡೆಯಬೇಕಿದ್ದು, ಕಂದಾಯ ಅಧಿಕಾರಿ ಪೂಜಾರ್ ನೇತೃತ್ವದಲ್ಲಿ 7500 ಇ ಸ್ವತ್ತಿನ ದಾಖಲೆಗಳು ಆಗಿವೆ .

ಇನ್ನೂ ಮಹಾನಗರ ಪಾಲಿಕೆಯಲ್ಲಿ ಇರುವಂತಹ ವಲಯ ಮೂರರ ವಿಭಾಗದಲ್ಲಿ 29,800 ಆಸ್ತಿಗಳ ಈ ಸ್ವತ್ತು ನಡೆಯಬೇಕಿದ್ದು, ಇಲ್ಲಿ ಇಲ್ಲಿಯವರೆಗೆ ಆರು ಸಾವಿರದಷ್ಟು ಈ ಸ್ವತ್ತಿನ ಪ್ರಕ್ರಿಯೆಗಳು ನಡೆದಿದೆ.ಇಲ್ಲಿ ಕಂದಾಯ ಅಧಿಕಾರಿ ವಿಜಯಕುಮಾರ್ ನೇತೃತ್ವ ವಹಿಸಿದ್ದಾರೆ.
ಇ ಸ್ವತ್ತು ಪಡೆಯುವುದು ಆಸ್ತಿಗಳ ದಾಖಲೆಗಳನ್ನು ಭದ್ರವಾಗಿ ಇಟ್ಟುಕೊಳ್ಳುವ ಉದ್ದೇಶದಿಂದ. ಕೇವಲ ಆಸ್ತಿ ಮಾರುವ ಅಥವಾ ಕೊಳ್ಳುವ ಉದ್ದೇಶದಿಂದ ಈ ಸ್ವತ್ತು ಪಡೆಯಲೇ ಬೇಕೆಂಬ ಕಟ್ಟುಪಾಡು ಇಲ್ಲ. ಇ ಸ್ವತ್ತು ಮಾಡಿಸಿಕೊಂಡಾಗ ನಿಮ್ಮ ಆಸ್ತಿಯ ದಾಖಲೆಗಳು ಸಮಗ್ರವಾಗಿ ಕ್ರೂಡೀಕರಣವಾಗಿರುತ್ತದೆ.
ಕಂದಾಯ ಕಟ್ಟುವುದು ಹಾಗೂ ಇದ್ದರೆ ಯಾವುದೇ ಸಾಲ ಸೌಲಭ್ಯ ಪಡೆಯುವುದು ಮತ್ತು ಆಸ್ತಿಯ ದಾಖಲೆಗಳ ವಿಷಯದಲ್ಲಿ ಇ ಸ್ವತ್ತು ಅತ್ಯಂತ ಅಗತ್.
ಶಿವಮೊಗ್ಗ ಮಹಾನಗರ ಪಾಲಿಕೆಯ ಆಯುಕ್ತರಾಗಿ ಮಾಯಣ್ಣ ಗೌಡ ಅವರು ಬರುವ ಪೂರ್ವದಲ್ಲಿ ಇದ್ದಂತಹ ವ್ಯವಸ್ಥೆ ಈಗ ಸಂಪೂರ್ಣವಾಗಿ ಬದಲಾವಣೆಯಾಗಿದೆ ಎಂದರೆ ತಪ್ಪಾಗಲಿಕ್ಕಿಲ್ಲ. ಏಕೆಂದರೆ ಇ ಸುತ್ತಿನ ವಿಚಾರದಲ್ಲಿ ಹಿಂದೆ ನಗರಪಾಲಿಕೆಯ ಅಧಿಕಾರಿಗಳು ಹಾಗೂ ನೌಕರರು ನಾನಾ ಕಾರಣದಿಂದ ಸಾರ್ವಜನಿಕರ ನಿಂದನೆಗೆ ಒಳಗಾಗಿದ್ದರು. ಇ ಸ್ವತ್ತು ಮಾಡಲು ಹಣದ ವಸೂಲಾತಿ ನಡೆಯುತ್ತಿತ್ತು ಎನ್ನುವ ಆರೋಪ ಗಂಭೀರವಾಗಿ ಕೇಳಿ ಬಂದಿತ್ತು. ಈ ಸಂದರ್ಭದಲ್ಲಿ ಮಾಯಣ್ಣ ಗೌಡ ಅವರು ಈ ಇ ಸ್ವತ್ತು ದಾಖಲೆಗೆ ಸಂಬಂಧಪಟ್ಟಂತೆ ಅತ್ಯಂತ ಕಠಿಣ ಮತ್ತು ಶಿಸ್ತು ಬದ್ದ ಹಾಗೂ ಸರಳವಾಗಿ ಸಾರ್ವಜನಿಕರ ಕೆಲಸ ಆಗುವಂತಹ ನಿಟ್ಟಿನಲ್ಲಿ ವ್ಯವಸ್ಥೆಯನ್ನು ಬದಲಾಯಿಸಿದ್ದು ಹಾಗೂ ಪ್ರತಿವಾರ ಒಂದೊಂದು ವಲಯಗಳಲ್ಲಿ ಸಾರ್ವಜನಿಕರ ಜೊತೆಗೆ ಎಲ್ಲ ಅಧಿಕಾರಿಗಳನ್ನು ಹಾಗೂ ನೌಕರರನ್ನು ಕೂರಿಸಿಕೊಂಡು ಆದ ಪ್ರಕ್ರಿಯೆ ಬಗ್ಗೆ ಪರಿಶೀಲಿಸುತ್ತಿರುವುದು ನಿಜಕ್ಕೂ ಅತ್ಯಂತ ಉತ್ತಮ ಕೆಲಸ ಎಂಬುದರಲ್ಲಿ ಎರಡು ಮಾತಿಲ್ಲ.
ಈಗ ಸಾರ್ವಜನಿಕ ವಲಯ ಪಾಲಿಕೆಯ ಆಡಳಿತದತ್ತ ಇಷ್ಟಪಟ್ಟಿದ್ದು, ವಿಶೇಷವಾದ ಪ್ರೀತಿ ತೋರುತ್ತಿರುವುದು ನಿಜಕ್ಕೂ ಬದಲಾವಣೆ ಎಂದರೆ ತಪ್ಪಾಗಲಿಕ್ಕಿಲ್ಲ ಅಲ್ಲವೇ?