ಸೊರಬ: ಕರ್ನಾಟಕ ಕಂಡ ವರ್ಣ ರಂಜಿತ ರಾಜಕಾರಣಿ, ಬಡವರ ಬಂಧು ಮಾಜಿಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರ ೯೩ನೇ ವರ್ಷದ ಹುಟ್ಟುಹಬ್ಬವನ್ನು ಭಾನುವಾರ ಸೊರಬದ ಬಂಗಾರ ಧಾಮ ಮತ್ತು ಡಾ.ರಾಜ್ ಕುಮಾರ್ ರಂಗಮಂದಿರದ ಆವರಣದ ಭವ್ಯ ವೇದಿಕೆಯಲ್ಲಿ ತುಂಬಾ ವಿಶೇ ವಾಗಿ ಆಚರಿಸಲಾಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಆಹಾರ ಸಚಿವ ಕೆಎಚ್. ಮುನಿಯಪ್ಪ ಈ ಕಾರ್ಯಕ್ರಮ ನನ್ನ ಜೀವನದಲ್ಲಿ ಅತ್ಯಂತ ಪವಿತ್ರವಾದ ಕಾರ್ಯಕ್ರಮವಾಗಿದೆ. ನನ್ನ ಭವಿಷ್ಯ ವನ್ನು ಬರೆದವರು ಬಂಗಾರಪ್ಪನವರು. ಅವರ ಆಶೀರ್ವಾದದಿಂದ ಏಳು ಬಾರಿ ಪಾರ್ಲಿಮೆಂಟ್ ಗೆ ಆಯ್ಕೆಯಾಗಿ ವಿವಿಧ ಹುದ್ದೆಗಳನ್ನು ಅನುಭವಿಸಿ ರಾ? ನಾಯಕನಾಗಲು ಅವರೇ ಕಾರಣ ಶೋಷಿತ ವರ್ಗಗಳ ಕಣ್ಮಣಿ ಬಡವರ ಬಂಗಾರ ಬಂಗಾರಪ್ಪನವರು ಎಂದು ಬಣ್ಣಿಸಿದರು.

ಅವರು ಬಡವರಿಗೆ ನೀಡಿದ ಆಶ್ರಯ, ಆರಾಧನಾ. ರೈತರಿಗೆ ಉಚಿತ ವಿದ್ಯುತ್ ಎಲ್ಲವೂ ಕೂಡ ಇಂದಿಗೂ ಜನರು ನೆನೆಸಿಕೊಳ್ಳುತ್ತಾರೆ. ಸಾಮಾನ್ಯ ತಾಲೂಕು ಬೋರ್ಡ್ ಸದಸ್ಯನಾದ ನನ್ನನ್ನು ಗುರುತಿಸಿ ರಾಜೀವ್ ಗಾಂಧಿ ಅವರ ಬಳಿ ಕರೆದುಕೊಂಡು ಹೋಗಿ ಪಾರ್ಲಿಮೆಂಟ್ ಚುನಾವಣೆಗೆ ಸೀಟು ಕೊಡಿಸಿ ನನ್ನ ಕ್ಷೇತ್ರದ ಎಂಟು ಅಸೆಂಬ್ಲಿಯ ಕ್ಷೇತ್ರಗಳಲ್ಲಿ ಪ್ರಚಾರ ಮಾಡಿ ನನ್ನನ್ನು ಗೆಲ್ಲಿಸಿ ಕಳಿಸಿದರು. ರಾಜೀವ್ ಗಾಂಧಿಯವರಿಗೆ ಕೊಟ್ಟ ಮಾತನ್ನು ನಡೆಸಿಕೊಟ್ಟರು. ಅವರು ಯಾವತ್ತೂ ಗಟ್ಟಿ ನಿರ್ಧಾರ ತೆಗೆದುಕೊಳ್ಳುತ್ತಿದ್ದರು. ಮತ್ತು ಕೊಟ್ಟ ಮಾತನ್ನು ನಡೆಸಿಕೊಡುತ್ತಿದ್ದರು. ನನ್ನಂತ ಸಾಮಾನ್ಯ ಅನೇಕ ಕಾರ್ಯಕರ್ತರನ್ನು ನಾಯಕರನ್ನಾಗಿ ಮಾಡಿದವರು. ಅವರ ಋಣ ತೀರಿಸಲಾಗುವುದಿಲ್ಲ ಎಂದರು.
ನಾನು ಸದಾ ಅವರ ಕುಟುಂಬದ ಸೇವಕನಾಗಿರುತ್ತೇನೆ. ಅವರ ನಂತರ ಅವರ ಕುಟುಂಬದಿಂದ ಯಾರು ಇಲ್ಲವಲ್ಲ ಎಂಬ ದುಃಖ ನನಗೆ ಕಾಡುತ್ತಿತ್ತು. ತಂದೆ ತಾಯಿಗಳ ನೆನಪಿನಲ್ಲಿ ದೊಡ್ಡ ದೇವಾಲಯದಂತೆ ಪುತ್ರ ಮಧು ಬಂಗಾರಪ್ಪ ಸುಂದರ ಬಂಗಾರ ಧಾಮವನ್ನು ನಿರ್ಮಿಸಿದ್ದಾರೆ. ಇದು ನನಗೆ ತುಂಬಾ ಖುಷಿ ಕೊಟ್ಟಿದೆ. ಕೋಟ್ಯಾಂತರ ಬಂಗಾರಪ್ಪನವರ ಅಭಿಮಾನಿಗಳಿಗೂ ಖುಷಿಕೊಟ್ಟಿದ್ದು ರಾಜ್ಯ ಸರ್ಕಾರ ಕೂಡ ಇದನ್ನು ಪ್ರವಾಸಿ ತಾಣವನ್ನಾಗಿ ಘೋಷಿಸಿದೆ. ಪುತ್ರ ಮಧು ಬಂಗಾರಪ್ಪನವರು ಕೂಡ ತಂದೆಯ ಆಶಯವನ್ನು ಈಡೇರಿಸುವಲ್ಲಿ ಯಶಸ್ವಿಯಾಗಲಿ ಎಂದರು.

ಈಗಾಗಲೇ ಶಿಕ್ಷಣ ಸಚಿವರಾಗಿ ಅವರ ನಡೆ ಬಡ ಮಕ್ಕಳ ಪಾಲಿಗೆ ಅವರ ಕಾಳಜಿ ರಾಜ್ಯದ ಗ್ರಾಮಾಂತರ ಶಾಲೆಗಳನ್ನು ಕೆಪಿಎಸ್ ಶಾಲೆಗಳನ್ನಾಗಿ ಮಾಡಿ ಶ್ರೀಮಂತರ ಮಕ್ಕಳ ಸರಿಸಮಾನರಾಗಿ ಬಡ ಮಕ್ಕಳಿಗೆ ನೀಡುತ್ತಿರುವ ಸೌಲಭ್ಯಗಳು ಮತ್ತು ಇಲಾಖೆಯಲ್ಲಿ ಅವರು ಮಾಡುತ್ತಿರುವ ಅಭಿವೃದ್ಧಿ ಕಾರ್ಯಗಳು ಅವರಿಗೆ ಕೀರ್ತಿ ತರಲಿ ಎಂದು ಹಾರೈಸಿದರು.
ಬಂಗಾರಪ್ಪನವರು ಹೋದಲ್ಲೆಲ್ಲ ಜನ ಸೇರುತಿದ್ದರು. ನೇರವಾಗಿ ಮಾತನಾಡುವ ಎಲ್ಲರನ್ನೂ ಪ್ರೀತಿಸುವ ಹೆಸರು ಹಿಡಿದು ಕರೆದು ಅವರನ್ನು ಗೌರವಿಸುವ ಅವರ ಗುಣವನ್ನು ರಾಜ್ಯದ ಜನ ಮೆಚ್ಚಿದ್ದರು ಇಂದಿಗೂ ಅವರ ಮೇಲಿನ ಗೌರವ ಕಿಂಚಿತ್ತು ಕಡಿಮೆಯಾಗದೆ ಇರುವುದು ಅವರ ವ್ಯಕ್ತಿತ್ವಕ್ಕೆ ಸಾಕ್ಷಿಯಾಗಿದೆ ಎಂದರು.
ಸಚಿವ ಸಂತೋಷ್ ಲಾಡ್ ಮಾತನಾಡಿ, ಹಿಂದುಳಿದ ವರ್ಗಗಳ ನಾಯಕ ಬಂಗಾರಪ್ಪರ ಕೊಡುಗೆ ಈ ನಾಡಿಗೆ ಅನನ್ಯವಾದುದು. ನಾನು ಅವರನ್ನು ಹತ್ತಿರದಿಂದ ಕಂಡವನಲ್ಲ. ಆದರೆ ಅವರ ಜನಪರ ಯೋಜನೆಗಳಿಂದ ಮೆಚ್ಚಿ ಅವರ ಅಭಿಮಾನಿಯಾದವನು. ಕೇವಲ ಕರ್ನಾಟಕ ಮಾತ್ರವಲ್ಲ, ಇಡೀ ರಾಷ್ಟ್ರಕ್ಕೇ ಬಹುದೊಡ್ಡ ಹಿಂದುಳಿದ ನಾಯಕರಾಗಿದ್ದರು ಎಂದರು.
ಹಿಂದುಳಿದ ವರ್ಗಗಳಿಗೆ ಸರ್ಕಾರ ಶೇ. ೭೫ರಷ್ಟು ಮೀಸಲಾತಿ ಕೊಡಬೇಕು. ಈ ನಿಟ್ಟಿನಲ್ಲಿ ಸರ್ಕಾರವನ್ನು ಮನವಿ ಮಾಡುತ್ತೇನೆ. ಸರ್ವರಿಗೂ ಸಮಬಾಳು, ಸಮಪಾಲು ಎನ್ನುವ ಹಾಗೇ ಹಿಂದುಳಿದ ವರ್ಗಗಳ ಎಲ್ಲಾ ಜಾತಿಯ ಜನರಿಗೂ ಸಮಾನ ಅವಕಾಶ ಸಿಗಬೇಕಾದರೆ ಶೇ. ೭೫ರಷ್ಟು ಮೀಸಲಾತಿ ಜಾರಿಯಾಗಲೇಬೇಕು ಎಂದರು
ಗೋಪಾಲಕೃ? ಬೇಳೂರು ಪ್ರಸ್ತಾವಿಕವಾಗಿ ಮಾತನಾಡಿದರು. ಮನು? ತಮ್ಮ ಜೀವಿತಾವದಿಯಲ್ಲಿ ಏನಾದರೂ ಮಾಡಿದರೆ ಮುಂದೆ ಅವರು ಇಲ್ಲದ ದಿನಗಳಲ್ಲೂ ಜೀವಂತವಾಗಿರುತ್ತಾರೆನ್ನುವುದಕ್ಕೆ ಸಾಕ್ಣಿ ಬಂಗಾರಪ್ಪ ಅವರು. ಬಂಗಾರಪ್ಪ ಅವರು ಮುಖ್ಯಮಂತ್ರಿಗಳಾಗಿದ್ದಾಗ ಜಾರಿಗೆ ತಂದ ಆಶ್ರಯ, ಅಕ್ಷಯ, ಆರಾಧಾನಾ, ಉಚಿತ ವಿದ್ಯುತ್, ಗ್ರಾಮೀಪ ಕೃಪಾಂಕ ಯೋಜನೆಗಳು ಇವತ್ತು ಜೀವಂತವಾಗಿರವುದೇ ಸಾಕ್ಷಿ ಎಂದರು.
ಸಮಾರಂಭದ ಕೇಂದ್ರ ಬಿಂದುವಾಗಿದ್ದ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಕಾರ್ಯಕ್ರಮಕ್ಕೆ ಬಂದ ಎಲ್ಲರನ್ನೂ ವಂದಿಸಿ ಮಾತನಾಡಿ, ನಮ್ಮ ತಂದೆ ಬಂಗಾರಪ್ಪನವರನ್ನು ಮಿಸ್ ಮಾಡಿಕೊಂಡಿದ್ದೇನೆ ಎನ್ನುವುದು ನಿಜವಾದರೂ ಅವರು ಸೃಷ್ಠಿಸಿದ ಲಕ್ಷಾಂತರ ಮಂದಿ ಬಂಗಾರಪ್ಪನವರ ಆಶೀರ್ವಾದ ಇದೆ. ಹಾಗಾಗಿ ನನಗೆ ತಂದೆ ಬಂಗಾರಪ್ಪ ಇಲ್ಲವೆನ್ನುವ ನೋವಿಲ್ಲ ಎಂದರು.
ವೇದಿಕೆಯಲ್ಲಿ ಪ್ರಜಾವಾಣಿ ಡೆಕ್ಕನ್ ಹೆರಾಲ್ಡ್ ಪತ್ರಿಕೆ ಕೆ.ಎನ್. ತಿಲಕ್ ಕುಮಾರ್, ಶಾಸಕ ಭೀಮಣ್ಣ ನಾಯಕ್, ಎಂಎ ಡಿಬಿ ಅಧ್ಯಕ್ಷ ಆರ್. ಎಂ.ಮಂಜುನಾಥ್ ಗೌಡ, ಅಲೆಮಾರಿ ನಿಗಮದ ಅಧ್ಯಕ್ಷೆ ಜಿ.ಪಲ್ಲವಿ, ಜವಳಿ ನಿಗಮದ ಅಧ್ಯಕ್ಷ ಚೇತನ್ ಗೌಡ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್. ಪ್ರಸನ್ನ ಕುಮಾರ್, ಮಾಜಿಸಂಸದ ಆಯನೂರು ಮಂಜುನಾಥ್, ವೇಣು ಗೋಪಾಲ ನಾಯಕ್, ನಾಗರಾಜ್ ಮೂರ್ತಿ,ಜಿಲ್ಲಾಧಿಕಾರಿ ಗುರುದತ್ ಹೆಗಡೆ, ಸಿಇಓ ಎನ್. ಹೇಮಂತ್, ಜಿಲ್ಲಾ ಪೊಲೀಸ್ ರಕ್ಷಣಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ಜಿ.ಡಿ. ಮಂಜುನಾಥ್ ಮತ್ತಿತರರು ಇದ್ದರು.
ಪ್ರಶಸ್ತಿ ಪ್ರದಾನ
ಶ್ರೀ ಬಂಗಾರಪ್ಪ ಪೌಂಢೇ?ನ್ ಮತ್ತು ಶ್ರೀಬಂಗಾರಪ್ಪ ವಿಚಾರ ವೇದಿಕೆವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗುಬ್ಬಿ ತೋಟದಪ್ಪ ಛತ್ರ ಸಂಸ್ಥೆಗೆ ಸೇವಾ ಬಂಗಾರ ಪ್ರಶಸ್ತಿ, ಸಾಹಿತಿ ಡಾ. ಕಾಳೇಗೌಡ ನಾಗವಾರ ಅವರಿಗೆ ಸಾಹಿತ್ಯ ಬಂಗಾರ, ಜೀವಣ್ಣ ರಾಜಣ್ಣ ಅವರಿಗೆ ಕಲಾಬಂಗಾರ, ರಾಧಬಾಯಿ ಅವರಿಗೆ ಜಾನಪದ ಬಂಗಾರ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ಸಚಿವರಾದ ಕೆ.ಎಚ್.ಮುನಿಯಪ್ಪ, ಸಂತೋ? ಲಾಡ್ ಮತ್ತುಮದು ಬಂಗಾರಪ್ಪನಢೆಸಿಕೊಟ್ಟರು. ಪ್ರಶಸ್ತಿ ಗೆ ಆಯ್ಕೆಯಾದವರಿಗೆ ನಂದಿ ವಿಗ್ರಹ, ಕಂಚಿನ ಫಲಕದಜತೆಗೆ ಒಂದುಲಕ್ಷ ನಗದುಬಹುಮಾನನೀಡಿ ಗೌರವಿಸಲಾಯಿತು.