ಶಿವಮೊಗ್ಗ, ಅ.27:
ತೀರ್ಥಹಳ್ಳಿಯ ಪ್ರಜ್ಞಾಭಾರತಿ ಶಾಲೆಯಲ್ಲಿ ನಡೆದ 25-26ನೇ ಸಾಲಿನ 17 ವರ್ಷ ವಯೋಮಿತಿ ಒಳಗಿನ ಬಾಲಕ / ಬಾಲಕಿಯರ ಜಿಲ್ಲಾಮಟ್ಟದ ಚೆಸ್ ಸ್ಪರ್ಧೆಯಲ್ಲಿ ಶ್ರೀ ರಾಮಕೃಷ್ಣ ವಿದ್ಯಾನಿಕೇತನ, ಗೋಪಾಳ ಶಿವಮೊಗ್ಗ ಶಾಲೆಯ ಇಬ್ಬರು ವಿದ್ಯಾರ್ಥಿಗಳು ಸತತ ನಾಲ್ಕನೇ ಬಾರಿಗೆ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ರಾಮಕೃಷ್ಣ ವಿದ್ಯಾನಿಕೇತನದ 10ನೇ ತರಗತಿ ವಿದ್ಯಾರ್ಥಿಯಾದ ವಿಲಾಸ್ ಆಂದ್ರಡೆ ಮತ್ತು 9ನೇ ತರಗತಿ ವಿದ್ಯಾರ್ಥಿನಿಯಾದ ಸೂಕ್ತಿ ಎಸ್. ಟಿ. ಪ್ರಥಮ ಸ್ಥಾನ ಪಡೆದು ಸತತ ನಾಲ್ಕನೇ ಬಾರಿಗೆ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಬರುವ ನವೆಂಬರ್ ಮೂರರಂದು ಯಾಧಗಿರಿಯ ಶಹಾಪುರದಲ್ಲಿ ನಡೆಯಲಿರುವ ರಾಜ್ಯಮಟ್ಟದ ಚೆಸ್ ಸ್ಪರ್ಧೆಗೆ ಭಾಗವಹಿಸಲಿರುವ ಈ ವಿದ್ಯಾರ್ಥಿಗಳಿಗೆ ಸಂಸ್ಥೆಯ ಕಾರ್ಯದರ್ಶಿಗಳಾದ ಶೋಭಾ ವೆಂಕಟರಮಣ ಮೇಡಂ, ಶಿಕ್ಷಕರು ಆಡಳಿತ ಮಂಡಳಿ ಪರವಾಗಿ ಅಭಿನಂದಿಸಿ ರಾಜ್ಯಮಟ್ಟದಲ್ಲೂ ಸಾಧನೆ ಮಾಡಲೆಂದು ಶುಭಕೋರಿದ್ದಾರೆ.