ಶಿವಮೊಗ್ಗ, ಅ.14:
ಶಿವಮೊಗ್ಗ ನಗರದ ಸುವರ್ಣ ಸಾಂಸ್ಕೃತಿಕ ಸಭಾ -ಭವನದಲ್ಲಿ “ಶ್ರೀ ರೋಜ ಶಬರೀಶ್ ಸೌಹಾರ್ದ ಸಹಕಾರ ಸಂಘ”ದ ಉದ್ಘಾಟನೆಯ ಕಾರ್ಯಕ್ರಮ ವೈಭವದಿಂದ ನೆರವೇರಿತು.
ಈ ಕಾರ್ಯಕ್ರಮಕ್ಕೆ ದಿವ್ಯ ಸಾನಿಧ್ಯವನ್ನು ಬೆಕ್ಕಿನ ಕಲ್ಮಠದ ಶ್ರೀಮನ್ಮಹಾರಾಜ ನಿರಂಜನ ಜಗದ್ಗುರು ಡಾ ಮಲ್ಲಿಕಾರ್ಜುನ ಮುರುಘ ರಾಜೇಂದ್ರ ಮಹಾಸ್ವಾಮಿಗಳು, ಮತ್ತು ಪೂಜ್ಯ ಶ್ರೀ ರೋಜ ಷಣ್ಮುಗಂ ಗುರೂಜಿಯವರ ಪುತ್ರ ಶ್ರೀ ಶಬರೀಶ್ ಷಣ್ಮುಗಂಸ್ವಾಮಿ, ಶಿವಮೊಗ್ಗದ ಸಂಸದರಾದ ಶ್ರೀ ಬಿ.ವೈ ರಾಘವೇಂದ್ರ, ಶಿವಮೊಗ್ಗದ ಶಾಸಕರಾದ ಎಸ್.ಎನ್.ಚನ್ನಬಸಪ್ಪ, ವಿಧಾನ ಪರಿಷತ್ ಸದಸ್ಯರಾದ ಡಿ.ಎಸ್ ಅರುಣ್,ಮಾಜಿ ಸೂಡಾ ಅಧ್ಯಕ್ಷರು, ಕಾರ್ಯದರ್ಶಿ-ಆರ್ಯ ಪಿ.ಯು ಕಾಲೇಜು, ಶಿವಮೊಗ್ಗದ ರಮೇಶ್ .ಎನ್, ಶಿವಮೊಗ್ಗ ಜೆ.ಡಿ.ಎಸ್ ಅಧ್ಯಕ್ಷರಾದ ದೀಪಕ್ ಸಿಂಗ್, ಚನ್ನೈ ನ ಭಾರತ ಶಬರೀಶ್ ಸೇವಾ ಸಮಾಜಂ ನ ಅಧ್ಯಕ್ಷರಾದ ಪೊಂಕಿ ಪೆರುಮಾಳ್, ಚನ್ನೈ ನ ಶ್ರೀ ಶಬರೀಶ್ ಗುರೂಜಿ ಟ್ರಸ್ಟಿನ ಕಾರ್ಯದರ್ಶಿ ಆನಂದಿ ಉಪಸ್ಥಿತರಿದ್ದರು.

ಆಧ್ಯಾತ್ಮದ ಮಹಿಮೆ ಮತ್ತು ಸಹಕಾರ ಸಂಘದ ದೈವಿಕ ತತ್ವದ ಕುರಿತು ತಮ್ಮ ಅಮೃತಮಯ ಉಪದೇಶದಲ್ಲಿ ಶ್ರೀ ಡಾ. ಮಲ್ಲಿಕಾರ್ಜುನ ಮುರುಘ ರಾಜೇಂದ್ರ ಮಹಾಸ್ವಾಮಿಗಳು ಅತ್ಯಂತ ಪ್ರೇರಣಾದಾಯಕವಾಗಿ ಆಶೀರ್ವಸಿದರು.
ಅವರು ರೋಜಾ ಗುರೂಜಿಯವರ ಪವಿತ್ರ ಕುಟುಂಬವನ್ನು ಆದರ್ಶ ಕುಟುಂಬವೆಂದು ಪರಿಗಣಿಸಿ, ಅವರೊಂದಿಗೆ ಕಳೆದ ದಿವ್ಯ ಕ್ಷಣಗಳನ್ನು ಪ್ರೀತಿಯಿಂದ ಸ್ಮರಿಸಿದರು.
ಶಿವಮೊಗ್ಗದ ಸಂಸದ ಬಿ.ವೈ. ರಾಘವೇಂದ್ರ ರವರು, “ಆರ್ ಎಸ್ ಎಸ್ ನೂರು ವರ್ಷದ ಆಧ್ಯಾತ್ಮಿಕ ಯಾತ್ರೆ ನಡೆಸಿದಂತೆಯೇ, ಗುರುಗಳ ಸೊಸೈಟಿಯೂ ನೂರು ವರ್ಷಗಳು ದೈವಿಕ ಕೀರ್ತಿಯಿಂದ ಪ್ರಕಾಶಿಸಲಿ” ಎಂದು ಹರಿಸಿದರು.
ಶಾಸಕ ಎಸ್.ಎನ್. ಚನ್ನಬಸಪ್ಪ ರವರು ತಮ್ಮ ಪವಿತ್ರ ಶಿವಮೊಗ್ಗದಿಂದ ಶಬರಿಮಲೆ ಪಾದಯಾತ್ರೆಯ ಅನುಭವವನ್ನು ಸ್ಮರಿಸಿ, ಆ ದೈವಿಕ ಸ್ಪೂರ್ತಿಯೇ ಈ ಸಂಘದ ಬಲವೆಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ ರವರು ಶ್ರೀ ಶಬರೀಶ್ ಗುರೂಜಿ ಹೇಗೆ ಐಟಿ ಉದ್ಯಮಿ ಇಂದ ದಿವ್ಯ ಗುರುಸ್ವರೂಪಿಯಾಗಿ ಪರಿವರ್ತಿತರಾದರು ಎಂಬ ಆಧ್ಯಾತ್ಮಿಕ ಯಾನವನ್ನು ಮನಮುಟ್ಟುವ ರೀತಿಯಲ್ಲಿ ವಿವರಿಸಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯ ಜವಾಬ್ದಾರಿಯನ್ನು ಮಾಜಿ ಸೂಡಾ ಅಧ್ಯಕ್ಷರು, ಕಾರ್ಯದರ್ಶಿ-ಆರ್ಯ ಪಿ.ಯು ಕಾಲೇಜು, ಶಿವಮೊಗ್ಗದ ರಮೇಶ್ .ಎನ್ ರವರು ವಹಿಸಿಕೊಂಡಿದ್ದರು.
“ನಮ್ಮ ಯುವ ಶಕ್ತಿ- ನಮ್ಮ ತಂತ್ರಜ್ಞಾನ: ಎಐ” ಉದ್ಘಾಟನೆಯನ್ನು ಸಂಸದ ಬಿ.ವೈ ರಾಘವೇಂದ್ರ ರವರು ನೆರವೇರಿಸಿದರು.
ಶಿವಮೊಗ್ಗದ ಯುವಕರಿಗೆ ಉದ್ಯೋಗವಕಾಶದ ನಿಟ್ಟಿನಲ್ಲಿ ಈ ಎಐ ತಂತ್ರಜ್ಞಾನದ ತರಬೇತಿಯ ಮಹತ್ವವನ್ನು ಶ್ರೀ ಶ್ರೀ ಶಬರೀಶ್ ಷಣ್ಮುಗಂ ಸ್ವಾಮಿಗಳು ತಿಳಿಸಿದರು.
ವಿಶೇಷ ಆಹ್ವಾನಿತರಾಗಿ ರಾಷ್ಟ್ರ ಪ್ರಶಸ್ತಿ ವಿಜೇತ ನಟರಾದ ಬಾಬಿ ಸಿಂಹರವರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ತಾವು ಸದಾ ನಮ್ಮೊಂದಿಗೆ ಇರುತ್ತಾರೆ ಹಾಗೂ ಮುಂದಿನ ಬಾರಿ ಕನ್ನಡದಲ್ಲೇ ಮಾತನಾಡುತ್ತಾರೆ ಎಂದು ಭಾವಪೂರ್ಣವಾಗಿ ಪ್ರಕಟಿಸಿದರು.
ಲಂಡನ್ನಿಂದ ನೇರವಾಗಿ ಆನ್ಲೈನಿನ ಮೂಲಕ ಡಾಮನಿಕ್ ರವರು, ಶಿವಮೊಗ್ಗದಲ್ಲಿ ಮುಂದಿನ ದಿನಗಳಲ್ಲಿ ಐ.ಟಿ ಕ್ಷೇತ್ರದ ಬೆಳವಣಿಗೆಯ ಕುರಿತು ಮಾತನಾಡಿದರು.
ಸಾಂಸ್ಕೃತಿಕ ಕಾರ್ಯಕ್ರಮವನ್ನು ಚನೈನ ವಿಶ್ವ ಪ್ರಸಿದ್ಧ ನವರಸ ನಾಟ್ಯಾಲಯ ನಂದಗೊಪಾಲ್ ತಂಡದಿಂದ “ಅರ್ಧನಾರೀಶ್ವರ” ನೃತ್ಯ ಪ್ರದರ್ಶನ ಮತ್ತು ಪ್ರಸಿದ್ಧ ನೃತ್ಯಗಾರ್ತಿ ಗುರು ಶ್ರೀಮತಿ ಲತಾ ಅರವಿಂದನ್ ಅವರ ಶಿಷ್ಯೆಯಾದ ಕಲಾಭಾರತಿ ಆರ್ ಜೈವಂತಿ ಅವರಿಂದ ಭರತನಾಟ್ಯ ನೃತ್ಯ ಪ್ರದರ್ಶನ , ಬೆಂಗಳೂರಿನ ಸಾಕ್ಷಿ ಶ್ರೀನಿವಾಸನ್ ರವರಿಂದ ವಿಶೇಷ ನಾಟ್ಯ ಪ್ರದರ್ಶನ ನೆರವೇರಿತು.
ಈ ಕಾರ್ಯಕ್ರಮಕ್ಕೆ ಉತ್ತರ ಭಾರತದಿಂದ ಲಕ್ಷ್ಮಣ್ ಗುರುಸ್ವಾಮಿ, ಮಾರುತಿ ಗುರುಸ್ವಾಮಿ, ಮುತ್ತು ಸ್ವಾಮಿ, ದಾವಣಗೆರೆಯಿಂದ ಶಿವು ಗುರುಸ್ವಾಮಿ, ಚವಾನ್ ಗುರುಸ್ವಾಮಿ, ಕೃಷ್ಣ ಗುರುಸ್ವಾಮಿ, ನವೀನ್ ಗುರುಸ್ವಾಮಿ, ಭದ್ರಾವತಿಯಿಂದ ಮುನಿರಾಜ್ ಗುರುಸ್ವಾಮಿ, ಷಣ್ಮುಕಯ್ಯ ಗುರುಸ್ವಾಮಿ, ಗಾಡಿಕೊಪ್ಪ ಸುರೇಶ್ ಗುರುಸ್ವಾಮಿ, ಬೆಂಗಳೂರಿನ ರವಿ ಗುರುಸ್ವಾಮಿ ಹಾಗೂ ತಂಡ, ಮಂಡ್ಯದ ಜವರೆಗೌಡರು ಹಾಗೂ ತಂಡ, ಬಳ್ಳಾರಿ ಆದಿಶೇಷು ಗುರುಸ್ವಾಮಿ, ಕಾರ್ಗಲ್ ಮುರುಗೇಶ್ ಸ್ವಾಮಿ ಹಾಗೂ ತಂಡ, ಶಿಕಾರಿಪುರ ಶಂಕರ್ ಗುರುಸ್ವಾಮಿ, ದ್ಯಾವನಕೆರೆ ಆನಂದ್ ಗುರುಸ್ವಾಮಿ, ಯರಗನಾಳ್ ಆರ್ ಕಾಶೀನಾಥ್, ತನು ಜ್ಯೂಸ್ ರಘು ಗುರುಸ್ವಾಮಿ ಹಾಗೂ ತಂಡ, ಶರತ್, ನಿಖಿಲ್ ಉಪಸ್ಥಿತರಿದ್ದರು.
ಇವರೊಂದಿಗೆ ಕಾರ್ಯಕ್ರಮದ ನಿರೂಪಕಿ ಪೂಜಾ, ಶಿವಮೊಗ್ಗದ ಎಂ ಪಿ ಗಣೇಶ್, ಎಂ ಪಿ ಸಂಪತ್, ಎ ವಿಜಯ್ ಮೇಸ್ತ್ರಿ, ಮಾರ್ಕೆಟ್ ಶಿವಕುಮಾರ್, ರಾಜೇಂದ್ರನ್, ಶಿಲ್ಪಿ ಸುಬ್ಬು, ಎಎಸ್ಐ ಪ್ರಕಾಶ್, ಭೂಪಾಲ್, ಕರ್ನಾಟಕ ಮತ್ತು ತಮಿಳುನಾಡಿನ ಹಲವು ಭಾಗಗಳಿಂದ ಅಯ್ಯಪ್ಪ ಸ್ವಾಮಿಯ ಭಕ್ತರು, ಬೆಂಗಳೂರಿನ ರಾಕೇಶ್, ಸಂಜಯ್, ಅಭಿಲಾಷ್, ಶಿವಮೊಗ್ಗದ ನಾಗರೀಕರು ಮತ್ತು ವಿಶೇಷವಾಗಿ ಶ್ರೀ ರೋಜಾ ಶಬರೀಶ್ ಸಹಕಾರ ಸಂಘದ ಶೇರುದಾರರು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಈ ಸಂದರ್ಭದಲ್ಲಿ ಕಾರ್ಯಕ್ರಮದ ಯಶಸ್ಸಿಗೆ ಸಮರ್ಪಣೆ ಮತ್ತು ಸೇವಾಭಾವದಿಂದ ನೆರವಾದ ಸಂಘದ ಅಧ್ಯಕ್ಷ ವೆಂಕಟೇಶ್ ಕೆ, ಉಪಾಧ್ಯಕ್ಷ ಸಂದೇಶ್ ಎಸ್ ಹಾಗೂ ಪದಾಧಿಕಾರಿಗಳಾದ ವಿಶ್ವನಾಥ್ ಆರ್, ಕೆ. ಪಳನಿ, ಸೆಂದಿಲ್ ಕುಮಾರ್ ಎಂ, ಎಸ್. ಪುರುಷೋತ್ತಮ್, ಕೆ.ಎಂ. ಸುರೇಶ್, ಸುಮಾ, ಮಂಜುನಾಥ್ ಎಲ್, ವೆಳ್ಳಿ, ಯುವರಾಜ್, ಮತ್ತು ಜಾಯ್ ರಿಗೆ ಗೌರವದ ನಮನ ಸಲ್ಲಿಸಲಾಯಿತು.